ಆಗ್ರಾದಲ್ಲಿನ ಮಸೀದಿಯ ಹೊರಗಿನ ರಸ್ತೆಯ ಮೇಲಿನ ನಮಾಜುಪಠಣಕ್ಕೆ ಹಿಂದೂ ಮಹಾಸಭೆಯ ವಿರೋಧ

* ಉತ್ತರಪ್ರದೇಶದಲ್ಲಿ ಪ್ರಖರ ಹಿಂದುತ್ವನಿಷ್ಠ ಹಾಗೂ ರಾಷ್ಟ್ರನಿಷ್ಠ ಯೋಗಿ ಆದಿತ್ಯನಾಥರು ಅಧಿಕಾರದಲ್ಲಿದ್ದಾರೆ. ಆದರೂ ಮತಾಂಧರು ಕಾನೂನುಬಾಹಿರವಾಗಿ ಹಾಗೂ ನಿಯಮಗಳನ್ನು ಉಲ್ಲಂಘಿಸುವ ವರ್ತನೆಯನ್ನು ಮಾಡುವ ಧೈರ್ಯ ತೋರಿಸುತ್ತಾರೆ. ಇದು ಪ್ರಕ್ಷೋಭಕವಾಗಿದೆ. ಇಂತಹವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಿ ದಾರಿಗೆ ತರುವುದು ಆವಶ್ಯಕವಾಗಿದೆ ! – ಸಂಪಾದಕರು 

ಆಗ್ರಾ (ಉತ್ತರಪ್ರದೇಶ) – ಆಗ್ರಾದಲ್ಲಿನ ಇಮಲೀವಾಲೀ ಮಸೀದಿಯ ಹೊರಗಿನ ರಸ್ತೆಯ ಮೇಲೆನ ನಮಾಜುಪಠಣದ ವಿರುದ್ಧ ಹಿಂದೂ ಮಹಾಸಭೆಯ ಕಾರ್ಯಕರ್ತರು ಕಾರ್ಯಾಚರಣೆಯನ್ನು ಮಾಡಲು ಮನವಿ ಮಾಡಿದ್ದಾರೆ. (ವಾಸ್ತವಿಕವಾಗಿ ಇಂತಹ ಮನವಿಗಳನ್ನು ಏಕೆ ಮಾಡಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಯು ಸ್ವತಃ ಕಾರ್ಯಾಚರಣೆಯನ್ನು ಏಕೆ ಮಾಡುವುದಿಲ್ಲ ? – ಸಂಪಾದಕರು) ಹಿಂದೂ ಮಹಾಸಭೆಯು ‘ಮಸೀದಿಯ ಒಳಗೆ ನಾಮಜಪ ಮಾಡಬೇಕು’, ಎಂದು ಹೇಳಿತ್ತು.

೧. ಹಿಂದೂ ಮಹಾಸಭೆಯ ಜಿಲ್ಲಾಪ್ರಮುಖರಾದ ರೌನಲ ಠಾಕೂರರು ಮಾತನಾಡುತ್ತ, ‘ರಸ್ತೆಯ ಮೇಲೆ ನಮಾಜುಪಠಣ ಮಾಡುವಾಗ ಅಲ್ಲಿನ ಹಿಂದೂಗಳಿಗೆ ತಮ್ಮ ಅಂಗಡಿಗಳನ್ನು ಮುಚ್ಚಲು ಹೇಳಲಾಗುತ್ತದೆ. ರಸ್ತೆ ಮುಚ್ಚಲಾಗುವುದರಿಂದ ತುರ್ತುರೋಗಿ ವಾಹಕವು ಇಲ್ಲಿಂದ ಹೋಗಲಾರದು. ಮುಸಲ್ಮಾನರು ರಸ್ತೆಯ ಮೇಲಿನ ವಾಹನ ಸಂಚಾರವಾಗಲು ಬಿಡಬೇಕು. ನಮಾಜುಪಠಣಕ್ಕೆ ವಿರೋಧವಿಲ್ಲ; ಆದರೆ ರಸ್ತೆಯನ್ನು ತಡೆಯಬಾರದು. ಇದರ ಪಾಲನೆಯಾಗದಿದ್ದರೆ ನಾವು ಅದನ್ನು ವಿರೋಧಿಸುತ್ತಿರುತ್ತೇವೆ’ ಎಂದು ಹೇಳಿದರು.

೨. ಹಿಂದೂ ಮಹಾಸಭೆಯ ವಕ್ತಾರರಾದ ಸಂಜಯ ಜಾಟರವರು ಪ್ರತಿಕ್ರಿಯಿಸುತ್ತ ‘ರಸ್ತೆಯ ಮೇಲೆ ನಮಾಜು ಪಠಣ ಮಾಡಬಹುದಾದರೆ ನಮಗೆ ಹನುಮಾನ ಚಾಲಿಸಾ ಪಠಣ ಮಾಡಲು ಅನುಮತಿಯನ್ನು ಏಕೆ ನೀಡುತ್ತಿಲ್ಲ ?’, ಎಂದು ಹೇಳಿದರು.

೩. ಪೊಲೀಸ ಅಧೀಕ್ಷರಾದ ವಿಕಾಸ ಕುಮಾರರು ಈ ವಿರೋಧದ ಬಗ್ಗೆ ಮಾತನಾಡುತ್ತ, ವಾದವನ್ನು ನಾಶ ಮಾಡಲಾಗಿದ್ದು ಇಲ್ಲಿನ ಪರಿಸ್ಥಿತಿಯು ನಿಯಂತ್ರಣದಲ್ಲಿದೆ’ ಎಂದು ಹೇಳಿದರು.

೪. ಮುಸಲ್ಮಾನರು ಹೇಳುವಂತೆ, ಕಳೆದ ೪೦ ವರ್ಷಗಳಿಂದ ಮಸೀದಿಯ ಹೊರಗೆ ನಮಾಜು ಪಠಣ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು ಅನುಮತಿ ನೀಡಿದ್ದಾರೆ. (ಯಾವುದೇ ತಪ್ಪು ಸಂಗತಿಯು ವರ್ಷಾನುವರ್ಷ ನಡೆಯುತ್ತಿದ್ದರೆ, ಅದನ್ನು ಯಾವಾಗಲೂ ವಿರೋಧಿಸಬಾರದು, ಎಂಬ ನಿಯಮವಿದೆಯೇ ? ಈಗ ಯಾರಾದರೂ ತಪ್ಪು ಕೃತಿಯನ್ನು ವಿರೋಧಿಸುತ್ತಿದ್ದರೆ, ಅದನ್ನು ನಿಲ್ಲಿಸಲೇಬೇಕು ! – ಸಂಪಾದಕರು)