ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು – ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನುವುದಕ್ಕೆ ನಮಗೆ ಅಭ್ಯಂತರವಿಲ್ಲ; ಆದರೆ ಅದನ್ನು ತಿನ್ನುವಂತೆ ಹಿಂದೂಗಳನ್ನು ಒತ್ತಾಯಿಸುವುದು ಸರಿಯಲ್ಲ. ಹಲಾಲ್ ಮಾಂಸಕ್ಕಾಗಿ ಬೇಕಾಗುವ ಪ್ರಮಾಣಪತ್ರದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಈ ಪ್ರಕರಣ ಪ್ರಸ್ತುತ ತನಿಖೆಯಲ್ಲಿದೆ. ಈ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದರು.

(ಸೌಜನ್ಯ : VIJAYAVANI)

ಹಿಂದೂಗಳ ಮೇಲೆ ಹಲಾಲ್ ಮಾಂಸ ಕಡ್ಡಾಯಗೊಳಿಸುವುದು ತಪ್ಪು ! – ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

(ಸೌಜನ್ಯ : Public TV)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡುತ್ತಾ, “ಹಲಾಲ್ ಪರಿಕಲ್ಪನೆಯನ್ನು ಕೆಲವರು ಅದರಲ್ಲೂ ಕೆಲ ಸಂಘಟನೆಗಳು ಹುಟ್ಟು ಹಾಕಿವೆ. ಆದ್ದರಿಂದ ಕರ್ನಾಟಕದ ಜನತೆಗೆ ತೊಂದರೆಯಾಗುತ್ತಿದೆ. ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನಲು ಬಯಸಿದರೆ, ಅವರು ಅದನ್ನು ತಿನ್ನಬೇಕು; ಆದರೆ ಅದನ್ನು ಹಿಂದೂಗಳ ಮೇಲೆ ಹೇರುವುದು ತಪ್ಪು ಎಂದು ಹೇಳಿದರು. ಇದಕ್ಕೂ ಮುನ್ನ ಭಾಜಪ ಮುಖಂಡ ಸಿ.ಟಿ. ರವಿ ಸೇರಿ ಇತರ ನಾಯಕರು ಕೂಡ ಹಿಂದೂಗಳು ಹಲಾಲ್ ಮಾಂಸ ತಿನ್ನಬಾರದು ಎಂದು ಹೇಳಿಕೆ ನೀಡಿದ್ದಾರೆ.