ಕರ್ನಾಟಕ ಸರಕಾರದ ಹೊಸ ನಿರ್ಧಾರ !
ಕರ್ನಾಟಕದ ಭಾಜಪ ಸರಕಾರ ಯಾವ ರೀತಿ ಹಿಜಾಬ್ ವಿಷಯವಾಗಿ ನಿರ್ಧಾರ ಕೈಗೊಳ್ಳುತ್ತದೆ, ಈ ರೀತಿಯ ನಿರ್ಧಾರವನ್ನು ದೇಶದಲ್ಲಿನ ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! -ಸಂಪಾದಕರು
(ಪರೀಕ್ಷೆಗಳು ಸುಗಮವಾಗಿ ನಡೆಯಲು ಕೆಲವು ಶಿಕ್ಷಕರನ್ನು ನೇಮಿಸಲಾಗುತ್ತದೆ. ಅಂತಹ ಶಿಕ್ಷಕರಿಗೆ `ಮೇಲ್ವಿಚಾರಕ’ ಎನ್ನುತ್ತಾರೆ.)
ಬೆಂಗಳೂರು – ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಉಪಯೋಗಿಸುವ ಬಟ್ಟೆ) ಧರಿಸುವ ಶಿಕ್ಷಕಿಯರನ್ನು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿನ ಪರಿಕ್ಷೆಯ ಸಮಯದಲ್ಲಿ ಮೇಲ್ವಿಚಾರಕ ಆಗಲು ಸಾಧ್ಯವಿಲ್ಲ, ಎಂದು ಕರ್ನಾಟಕ ಸರಕಾರ ನಿರ್ಧಾರ ಕೈಗೊಂಡಿದೆ. ಈ ಮೊದಲು ಸರಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ನಿಷೇಧಿಸಿದರು. ಕಳೆದ ವಾರದಲ್ಲಿ ಮೈಸೂರು ಜಿಲ್ಲೆಯ ಓರ್ವ ಶಿಕ್ಷಕಿ ಹಿಜಾಬ್ ಧರಿಸಿ ಕೆಲಸಕ್ಕೆ ಬರುವ ಹಠ ಹಿಡಿದಿದ್ದರಿಂದ ಆಕೆಯನ್ನು ಮೇಲ್ವಿಚಾರಕ ಜವಾಬ್ದಾರಿಯಿಂದ ಕೈಬಿಡಲಾಗಿತ್ತು.
ಶಿಕ್ಷಕರು ಹಿಜಾಬ್ ಧರಿಸಿ ಪರೀಕ್ಷಾ ಮೇಲ್ವಿಚಾರಣೆ ಮಾಡುವಂತಿಲ್ಲ: ಶಿಕ್ಷಣ ಸಚಿವ ಬಿ. ಸಿ. ನಾಗೇಶ್
#teachers https://t.co/F1WM9e9xle— vijaykarnataka (@Vijaykarnataka) April 4, 2022
1. ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು ಈ ವಿಷಯವಾಗಿ, `ಸರಕಾರಿ ಸಿಬ್ಬಂದಿಗಳಿಗೆ ಯಾವುದೋ ಸಮವಸ್ತ್ರ ನಿಗದಿ ಮಾಡಿಲ್ಲ. ಅಂದರೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಿಲ್ಲ. ಆದ್ದರಿಂದ ನಾವು ನೈತಿಕತೆಯಲ್ಲಿ ಯಾವ ಶಿಕ್ಷಕಿಯರು ಹಿಜಾಬ್ ಧರಿಸುವುದಿದ್ದರೇ ಅವರಿಗೆ ಧರಿಸದಂತೆ ಕಡ್ಡಾಯ ಪಡಿಸಲಾಗುವುದಿಲ್ಲ. ಆದ್ದರಿಂದ ನಾವು ಅವರನ್ನು ಆ ಕರ್ತವ್ಯದಿಂದ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ.’ ಎಂದು ಹೇಳಿದರು.
2. ಸರಕಾರಿ ಮಹಾವಿದ್ಯಾಲಯದ ಓರ್ವ ಪ್ರಾಚಾರ್ಯರು, ವಿದ್ಯಾಲಯದಲ್ಲಿ ಪರೀಕ್ಷೆಯ ಸಮಯದಲ್ಲಿ ಮೇಲ್ವಿಚಾರಕರ ಕೊರತೆಯಿದ್ದರೆ ಆಗ ನಾವು ಶಾಲೆಯ ಮಾಧ್ಯಮಿಕ ಶಿಕ್ಷಕರನ್ನು ನೇಮಕಗೊಳಿಸಬಹುದು.
3. ಬೆಂಗಳೂರು ವಿದ್ಯಾಪೀಠದ ಮಾಜಿ ಕುಲಗುರು ಎಂ.ಎಸ್. ತಿಮ್ಮಪ್ಪ ಇವರು ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬೇರೆಬೇರೆ ನಿಯಮ ಇರಲು ಸಾಧ್ಯವಿಲ್ಲ ಎಂದು ಹೇಳಿದರು.