‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಮತ್ತು ‘ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ ಇವುಗಳನ್ನು ನಿಷೇಧಿಸಿರಿ !
ಕರ್ನಾಟಕದ ಕಾಂಗ್ರೆಸ್‌ನ ಮುಸಲ್ಮಾನ ಶಾಸಕರು ಹೀಗೆ ಮನವಿ ಮಾಡುತ್ತಿರುವುದು ಆಶ್ಚರ್ಯವೇ ಆಗಿದೆ ! ಇದನ್ನು ಕಮ್ಯುನಿಷ್ಟರು, ತೃಣಮೂಲ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಮುಂತಾದ ಪಕ್ಷಗಳು ಬೆಂಬಲಿಸುವರೇ ?
ಬೆಂಗಳೂರು – ರಾಜ್ಯದ ಕಾಂಗ್ರೆಸ್‌ನ ವಿಧಾನಸಭೆಯಲ್ಲಿ ಮುಸಲ್ಮಾನ ಶಾಸಕರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಮತ್ತು ‘ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’(ಪಿ.ಎಫ್.ಐ.) ಇವುಗಳನ್ನು ನಿಷೇಧಿಸುವಂತೆ ಒಂದು ಮನವಿಯ ಮೂಲಕ ಒತ್ತಾಯಿಸಿದ್ದಾರೆ. ‘ಹಿಜಾಬ, ಹಲಾಲಗಳಂತಹ ಅನೇಕ ಅಂಶಗಳ ಕಾರಣದಿಂದ ಕರ್ನಾಟಕ ರಾಜ್ಯದಲ್ಲಿ ಅಶಾಂತಿಯನ್ನು ನಿರ್ಮಾಣವಾಗಲು ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಹೊಣೆಗಾರರಾಗಿದ್ದಾರೆ’, ಎಂದು ಆರೋಪಿಸುತ್ತಾ ಅವರು ಈ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.