ಓರ್ವ ರೈತ ಮಹಿಳೆಯ ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿತ್ತು !

* ಒಂದು ಕಡೆಯಲ್ಲಿ ಹಳಿ ತಪ್ಪಿರುವುದನ್ನು ನೋಡಿದಾಗ ತನ್ನ ಕೆಂಪು ಸೀರೆಯನ್ನು ಹರಿದು ರೈಲು ಚಾಲಕನಿಗೆ ತೊಂದರೆಯ ಸನ್ನೆ ಮಾಡಿದಳು ! – ಸಂಪಾದಕರು 

* ಇಂದಿನ ಕಾಲದಲ್ಲಿ ಸಮಾಜದ ಬಗ್ಗೆ ವಿಚಾರ ಮಾಡುವ ಜನರು ಅಪರೂಪದಲ್ಲಿ ಕಂಡುಬರುತ್ತಾರೆ. ಆದುದರಿಂದ ಈ ಧೈರ್ಯಶಾಲಿ ಮಹಿಳೆಗೆ ಅಭಿನಂದನೆ ಸಲ್ಲಿಸಿದಷ್ಟು ಕಡಿಮೆಯೇ ! ರೈಲಿನ ಹಳಿ ತಪ್ಪುವಂತಹ ನಿರ್ಲಕ್ಷ್ಯ ಹೇಗೆ ಆಗುತ್ತದೆ? ಎಂಬುದನ್ನು ಹುಡುಕಿ ಸಂಬಂಧಿತ ರೈಲು ಕಾರ್ಮಿಕರು ಹಾಗೂ ಅಧಿಕಾರಗಳ ಮೇಲೆ ಕಾರ್ಯಾಚರಣೆ ನಡೆಸುವುದು ಆವಶ್ಯಕವಾಗಿದೆ ! – ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದಲ್ಲಿನ ಎಟಾದಿಂದ ಆಗ್ರಾ ಮಾರ್ಗದಲ್ಲಿ ಹೋಗುವ ಒಂದು ರೈಲುಗಾಡಿಯ ದೊಡ್ಡ ಅಪಘಾತ ತಪ್ಪಿರುವ ಘಟನೆಯು ಸದ್ಯದಲ್ಲಿಯೇ ಘಟಿಸಿದೆ. ಒಂದು ಜಿಲ್ಲೆಯಲ್ಲಿರುವ ಅವಾಗಢ ತಾಲೂಕಿನಲ್ಲಿರುವ ನಗಲಾ ಗುಲಾರಿಯಾ ಊರಿನ ಬಳಿ ಒಂದು ಕಡೆಯಲ್ಲಿ ರೈಲಿನ ಹಳಿ ತಪ್ಪಿತ್ತು. ಈ ಊರಿನ ಸೋಮವತಿ ಎಂಬ ಹೆಸರಿನ ಓರ್ವ ರೈತ ಮಹಿಳೆಯು ನಡೆದುಕೊಂಡು ಹೋಗುತ್ತಿರುವಾಗ ಇದನ್ನು ಗಮನಿಸಿದಳು. ಕೆಂಪು ಬಣ್ಣದ ಸೀರೆಯನ್ನು ಉಟ್ಟಿರುವ ಸೋಮವತಿಯು ಎದುರಿನಿಂದ ರೈಲು ಗಾಡಿ ಬರುತ್ತಿರುವುದನ್ನು ನೋಡಿ ತನ್ನ ಸೀರೆಯನ್ನು ಹರಿದು ಹಳಿಯ ನಡುವೆ ಕಟ್ಟಿದಳು. ಹಾಗೆಯೇ ಕೈಬೀಸಿ ಚಾಲಕನಿಗೆ ತೊಂದರೆಯ ಸನ್ನೆ ಮಾಡಿದಳು. ಚಾಲಕನು ಅದನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಿದನು. ಎಟಾ ರೈಲು ನಿಲ್ದಾಣದಿಂದ ಈ ರೈಲು ಬೆಳಿಗ್ಗೆ ಏಳೂವರೆ ಗಂಟೆಗೆ ೧೫೦ ಪ್ರವಾಸಿಗಳೊಂದಿಗೆ ಆಗ್ರಾಗೆ ಹೊರಟಿತ್ತು.