9 ವರ್ಷಗಳ ನಂತರ ಸಂತ್ರಸ್ತೆಗೆ ಸಿಗುವ ನ್ಯಾಯವು ನ್ಯಾಯವಲ್ಲ, ಅನ್ಯಾಯವಾಗಿದೆ !
ಮತಾಂಧರು ಎಷ್ಟೇ ಉನ್ನತ ಶಿಕ್ಷಣ ಪಡೆದು ಎಷ್ಟೇ ಉನ್ನತ ಪದವಿಯಲ್ಲಿದ್ದರೂ ಅವರಲ್ಲಿನ ವಾಸನಾಂಧತೆ ಮತ್ತು ಅಪರಾಧಿ ವೃತ್ತಿಯು ನಾಶವಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ! – ಸಂಪಾದಕರು
ಶಿಲಾಂಗ (ಮೇಘಾಲಯ) – ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಮೇಘಾಲಯದ ಒಂದು ವಿಶೇಷ ನ್ಯಾಯಾಲಯವು ಪೊಲೀಸ್ ನಿರೀಕ್ಷಕ ನುರೂಲ ಇಸ್ಲಾಮ ಇವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಹಾಗೂ 8 ಲಕ್ಷ ರೂಪಾಯಿಗಳ ದಂಡವನ್ನು ಸಹ ಹೇರಿದೆ. ಈ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದಾರೆ. ನುರೂಲ್ ಇವನನ್ನು ಈ ಮೊದಲೇ ಪೊಲೀಸ್ ಸೇವೆಯಿಂದ ಅಮಾನತು ಗೊಳಿಸಲಾಗಿದೆ.
ಬಲಾತ್ಕಾರದ ಘಟನೆಯು 2013ರಲ್ಲಿ ನಡೆದಿತ್ತು. ಮೊದಲಿಗೆ ನುರೂಲನು 13 ವರ್ಷದ ಬಾಲಕಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಮತ್ತು ಆಕೆಯ ಮನೆಗೆ ಹೋಗಿ ಅವಳ 17 ವರ್ಷದ ಸಹೋದರಿಯ ಮೇಲೆ ಬಂದೂಕನ್ನು ತೋರಿಸಿ ಅತ್ಯಾಚಾರಗೈದಿದ್ದನು. ಇಬ್ಬರಿಗೂ ಈ ವಿಷಯವನ್ನು ಯಾರಿಗಾದರೂ ಹೇಳಿದ್ದಲ್ಲಿ ಸುಳ್ಳು ಆರೋಪದಡಿಯಲ್ಲಿ ಬಂಧಿಸುವುದಾಗಿ ಅವನು ಬೆದರಿಕೆಯನ್ನು ಒಡ್ಡಿದ್ದನು.
(ಸೌಜನ್ಯ: EastMojo )
1. ಈ ವಿಷಯದಲ್ಲಿ ಬಾಲಕಿಯರ ತಂದೆಯು ದೂರು ನೀಡಿದಾಗ ನುರೂಲ್ ಇವನನ್ನು ಬಂಧಿಸಲಾಗಿತ್ತು. ಈ ಘಟನೆಯ ನಂತರ ಅವನ ವಿರುದ್ಧ ಪ್ರತಿಭಟನೆಯನ್ನು ಸಹ ಮಾಡಲಾಗಿತ್ತು. ಪೊಲೀಸ್ ಠಾಣೆಯನ್ನು ಸುತ್ತುವರೆಯಲಾಗಿತ್ತು. ಅವನನ್ನು ಪೊಲೀಸ್ ಠಾಣೆಯ ಕೊಠಡಿಯಿಂದ ಬೇರೆಡೆಗೆ ಸ್ಥಳಾಂತರಿಸುವಾಗ ಅವನು ಪಲಾಯನ ಸಹ ಗೈದಿದ್ದನು. ಅನಂತರ ಅವನನ್ನು ಪುನಃ ಬಂಧಿಸಲಾಗಿತ್ತು.
2. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಕ್ಕಳ ಸಂರಕ್ಷಣಾ ಆಯೋಗವು ಮೇಘಾಲಯ ಸರಕಾರದ ಬಳಿ ವರದಿಯನ್ನು ಕೇಳಿತ್ತು. ಹಾಗೆಯೇ ನುರೂಲ್‍ನಿಗೆ ಕೊಠಡಿಯ ಬದಲು ನಿವಾಸಸ್ಥಾನದಲ್ಲಿ ಇರಿಸಿದ ಬಗ್ಗೆ ಮತ್ತು ವಿಶೇಷ ಸೌಲಭ್ಯಗಳನ್ನು ಪೂರೈಸಿದ ಬಗ್ಗೆ ಆರೋಪಿಸಿತ್ತು.