31 ವರ್ಷಗಳ ನಂತರ ಭಯೋತ್ಪಾದಕ ಬಿಟ್ಟಾ ಕರಾಟೆ ಇವನ ವಿರುದ್ಧ ಶ್ರೀನಗರ ನ್ಯಾಯಾಲಯದಲ್ಲಿ ಅರ್ಜಿ ದಾಖಲು
* ಯಾವ ಕೆಲಸವನ್ನು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ರಾಜಕಾರಣಿಗಳು ಮಾಡಬೇಕಾಗಿದ್ದ ಕಾರ್ಯವನ್ನು ಒಂದು ಚಲನಚಿತ್ರವು ಮಾಡಿ ತೋರಿಸಿರುವುದು ದೇಶಕ್ಕೆ ನಾಚಿಕೆಗೇಡಿನದ್ದಾಗಿದೆ !- ಸಂಪಾದಕರು
ಶ್ರೀನಗರ – ಜಮ್ಮು ಕಾಶ್ಮೀರದಲ್ಲಿ 1990 ರಲ್ಲಿ ಕಾಶ್ಮೀರಿ ಹಿಂದೂಗಳನ್ನು ಹತ್ಯೆಗೈದ ಬಿಟ್ಟಾ ಕರಾಟೆಯ ವಿರುದ್ಧದ ಮೊಕದ್ದಮೆಯನ್ನು ಮತ್ತೊಮ್ಮೆ ಪ್ರಾರಂಭಿಸುವ ಸಾಧ್ಯತೆಯಿದೆ. ಮಾರ್ಚ್ 30 ರಂದು ಬಿಟ್ಟಾನ ವಿರುದ್ದ ದಾಖಲಿಸಿರುವ ಅರ್ಜಿಯ ಬಗ್ಗೆ ಶ್ರೀನಗರದ ಒಂದು ನ್ಯಾಯಾಲಯದಲ್ಲಿ ಆಲಿಕೆಯು ನಡೆಯಿತು. ಅರ್ಜಿದಾರ ಸತೀಶ ಟಿಕ್ಕೂ ಇವರ ಕುಟುಂಬಕ್ಕೆ ಅರ್ಜಿಯ ಪ್ರತಿಯನ್ನು ದಾಖಲಿಸಲು ನ್ಯಾಯಾಲಯವು ಆದೇಶವು ನೀಡಿತು. ಈ ಪ್ರಕರಣದ ಆಲಿಕೆಯು ಏಪ್ರಿಲ್ 16 ರಂದು ನಡೆಯಲಿದೆ.
Bitta Karate’s case in Srinagar court, 31 yrs after he admitted killing Kashmiri Pandits https://t.co/25p7W3Vx4H
— Republic (@republic) March 30, 2022
1. ಪ್ರಸ್ತುತ ಇನ್ನೊಂದು ಪ್ರಕರಣದಲ್ಲಿ ಬಿಟ್ಟಾ ಕರಾಟೆ ದೆಹಲಿಯ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.
2. ಬಿಟ್ಟಾ ಕರಾಟೆಯ ಮೂಲ ಹೆಸರು ಫಾರೂಕ ಅಹಮದ ಡಾರ ಎಂದಾಗಿದ್ದು ಅವನ ಮೇಲೆ ಕಾಶ್ಮೀರೀ ಹಿಂದೂಗಳ ಸಹಿತ ಒಟ್ಟು 20 ಜನರನ್ನು ಹತ್ಯೆಗೈದ ಆರೋಪವಿದೆ.
3. ಬಿಟ್ಟಾನು ಮೊತ್ತಮೊದಲಿಗೆ ತನ್ನದೇ ಸ್ನೇಹಿತನಾಗಿದ್ದ ಕಾಶ್ಮೀರೀ ಹಿಂದೂ ಸತೀಶ ಕುಮಾರ ಟಿಕ್ಕೂ ಇವನ ಹತ್ಯೆಗೈದಿದ್ದನು.
4. ಮಾರ್ಚ 11 ರಂದು ಬಿಡುಗಡೆಯಾದ `ದ ಕಶ್ಮೀರ ಫೈಲ್ಸ್’ ಚಲನಚಿತ್ರವು ಜನಮನವನ್ನು ಕಲಕಿದ್ದು ಇದರಲ್ಲಿ ಬಿಟ್ಟಾ ಕರಾಟೆಯ ಕ್ರೌರ್ಯವನ್ನು ಚಲನಚಿತ್ರದಲ್ಲಿ ತೋರಿಸಲಾಗಿದೆ. ಇದರ ಪರಿಣಾಮವಾಗಿ ಬಿಟ್ಟಾ ಕರಾಟೆಯ ವಿರುದ್ಧ ಸಾವಿರಾರು ಹಿಂದೂಗಳು ಕ್ರಮ ಕೈಗೊಳ್ಳುವಂತೆ ವಿವಿಧ ಹಂತಗಳಲ್ಲಿ ಒತ್ತಾಯಿಸಿದ್ದಾರೆ. ಅವನ ವಿರುದ್ದ ಟ್ವಿಟರ್ ನಲ್ಲಿ `ಟ್ರೆಂಡ’ ಅನ್ನು ಸಹ ನಡೆಸಲಾಗಿತ್ತು.