ಯಾವಾಗ ಒಂದು ಸಮಾಜದ ಮೇಲೆ ವರ್ಷಾನುಗಟ್ಟಲೆ ಅನ್ಯಾಯವಾಗುತ್ತಿರುತ್ತದೆ, ಆಗ ಯಾವಾಗಲಾದರೂ ಅದು ಉದ್ರಿಕ್ತವಾಗುತ್ತದೆ !

ಕರ್ನಾಟಕದಲ್ಲಿನ ಹಿಂದೂಗಳ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲಿನ ನಿರ್ಬಂಧದ ಪ್ರಕರಣ

* ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮುಸಲ್ಮಾನ ವ್ಯಾಪಾರಿಗಳ ನಿಯೋಗದ ವಿಚಾರಣೆ ನಡೆಸಿದರು ! –  ಸಂಪಾದಕರು 

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ (ಕರ್ನಾಟಕ) – ಶಾಂತಿ ಮತ್ತು ಸದ್ಭಾವನೆಯು ಮಹತ್ವಪೂರ್ಣವಾಗಿದೆ; ಆದರೆ ಕೇವಲ ಒಂದು ಸಮಾಜದಿಂದ ಅದನ್ನು ಕಾಪಾಡಲು ಸಾಧ್ಯವಿಲ್ಲ. ಹಿಂದೂ ಸಮಾಜವು ಹಿಂದಿನಿಂದಲೂ ಬಹಳಷ್ಟು ಸಹನೆ ಮಾಡಿದೆ. ಕೆಲವು ಘಟನೆಗಳಿಂದ ಹಿಂದೂಗಳಿಗೆ ದುಃಖವಾಗಿದೆ. ಕೆಲವು ಧಾರ್ಮಿಕ ನೇತಾರರಲ್ಲಿ ಚರ್ಚೆ ಮಾಡಿ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಇದರ ಪರಿಹಾರವನ್ನು ಬೇರಿನ ಮಟ್ಟದಲ್ಲಿ ಹುಡುಕುವುದು ಆವಶ್ಯಕವಾಗಿದೆ. ಯಾವಾಗ ಒಂದು ಸಮಾಜದ ಮೇಲೆ ವರ್ಷಾನುಗಟ್ಟಲೆ ಅನ್ಯಾಯವಾಗುತ್ತಿರುತ್ತದೆ, ಆಗ ಯಾವಾಗಲಾದರೂ ಅದು ಉದ್ರಿಕ್ತವಾಗುತ್ತದೆ, ಎಂಬ ಶಬ್ದಗಳಲ್ಲಿ ಕರ್ನಾಟಕದಲ್ಲಿನ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ತಮಗೆ ಭೇಟಿಯಾಗಲು ಬಂದಂತಹ ಮುಸಲ್ಮಾನ ವ್ಯಾಪಾರಿಗಳ ನಿಯೋಗಕ್ಕೆ ಹೇಳಿದರು. ಕರ್ನಾಟಕದಲ್ಲಿ ಕೆಲವು ದೇವಸ್ಥಾನಗಳು ತಮ್ಮ ವಾರ್ಷಿಕ ಉತ್ಸವಗಳ ಸಮಯದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಅಂಗಡಿದಾರರಿಗೆ ದೇವಸ್ಥಾನದ ಪರಿಸರದಲ್ಲಿ ಅಂಗಡಿಗಳನ್ನು ಹಾಕಲು ಅನುಮತಿಯನ್ನು ನಿರಾಕರಿಸಿದೆ. ಈ ಸಂದರ್ಭದಲ್ಲಿ ಕೆಲವು ಮುಸಲ್ಮಾನ ಮತ್ತು ಕ್ರೈಸ್ತ ವ್ಯಾಪಾರಿಗಳು, ಹಾಗೆಯೇ ಧಾರ್ಮಿಕ ನೇತಾರರು ಮತ್ತು ವ್ಯಾಪಾರಿಗಳ ನಿಯೋಗವು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಅವರಿಗೆ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ವಿನಂತಿಸಿದ್ದರು. ಆಗ ಸ್ವಾಮೀಜಿಯವರು ಮೇಲಿನ ಹೇಳಿಕೆಯನ್ನು ನೀಡಿದರು. ಈ ನಿಯೋಗವು ‘ಧಾರ್ಮಿಕ ಉತ್ಸವಗಳ ಸಮಯದಲ್ಲಿ ಸಾಹಿತ್ಯಗಳ ಮಾರಾಟ ಮಾಡಿ ವ್ಯಾಪಾರಿಗಳು ಜೀವನ ನಡೆಸುತ್ತಿದ್ದರು. ಈಗ ಅವರಿಗೆ ಅಡಚಣೆಗಳನ್ನು ಎದುರಿಸಬೇಕಾಗುತ್ತಿದೆ. ಆದುದರಿಂದ ದೇವಸ್ಥಾನದ ಪರಿಸರದಲ್ಲಿ ವ್ಯಾಪಾರ ಮಾಡುವ ಅನುಮತಿಯನ್ನು ನೀಡಬೇಕು.

(ಸೌಜನ್ಯ – TV9 Kannada)

ಕೇವಲ ಶಾಂತಿ ಮತ್ತು ಸದ್ಭಾವನೆಗಳ ಚರ್ಚೆ ಸಾಕಾಗುವುದಿಲ್ಲ!

ಸ್ವಾಮೀಜಿಯವರು ಮಾತನಾಡುತ್ತ, ಒಂದು ವಿಧವೆಯ ಎಲ್ಲ ಹಸುಗಳನ್ನು ಕದಿಯಲಾಯಿತು. ಆದುದರಿಂದ ಆಕೆಯ ಬಳಿ ಆಕೆಯ ಜೀವನಾಂಶದ ಆಕರವೇ ಉಳಿಯಲಿಲ್ಲ. ಇದರಿಂದ ಆಕೆ ರಸ್ತೆಗೆ ಬಂದಳು. ಹಿಂದೂಗಳಿಗೆ ಅತ್ಯಂತ ದುಃಖದಾಯಕವಾದ ಇಂತಹ ಅನೇಕ ಘಟನೆಗಳು ನಡೆದಿವೆ. ನಾವೂ ಇಂತಹ ದುಃಖದಾಯಕ ಘಟನೆಗಳನ್ನು ನೋಡಿದ್ದೇವೆ. ಯಾರಾದರೂ ಶಾಂತಿ ಮತ್ತು ಸದ್ಭಾವನೆಗಳ ಚರ್ಚೆ ಮಾಡಿದರೆ ಅದು ಸಾಕಾಗುವುದಿಲ್ಲ. ಹಾಗೆಯೇ ಶಾಂತಿಯುತ ಮತ್ತು ಸೌಹಾರ್ದಪೂರ್ಣ ಜೀವನ ನಡೆಸಲು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಆವಶ್ಯಕತೆಯಿಲ್ಲ’ ಎಂದು ಹೇಳಿದರು.

* ‘೧-೨ ಜನರಿಂದ ಸಂಪೂರ್ಣ ಸಮಾಜವನ್ನು ದ್ವೇಷಿಸಲು ಸಾಧ್ಯವಿಲ್ಲ !’ – ಉಡುಪಿ ಕಂಜ್ಯೂಮರ ಫೋರಮನ ಗೌರವಾನ್ವಿತ ಅಧ್ಯಕ್ಷ ಅಬೂಬಕ್ಕರ ಅತ್ರಾಡಿ

ಉಡುಪಿ ಕಂಜ್ಯೂಮರ ಫೋರಮನ ಗೌರವಾನ್ವಿತ ಅಧ್ಯಕ್ಷರಾದ ಅಬೂಬಕ್ಕರ ಅತ್ರಾಡಿಯವರು ‘ಕೇವಲ ೧-೨ ಜನರಿಂದಾಗಿ ಸಂಪೂರ್ಣ ಸಮಾಜವನ್ನು ದ್ವೇಷಿಸಲು ಸಾಧ್ಯವಿಲ್ಲ. (ಸಮಾಜದಲ್ಲಿನ ೧-೨ ಜನರು ಕೆಟ್ಟವರಾಗಿದ್ದರೆ ಆ ಸಮಾಜವು ಮುಂದೆ ಬಂದು ಬಹಿರಂಗವಾಗಿ ಅವರನ್ನು ವಿರೋಧಿಸಿ ಅವರು ಹೇಗೆ ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಇಂದು ಜಗತ್ತಿನಾದ್ಯಂತ ಜಿಹಾದಿ ಭಯೋತ್ಪಾದನೆಯು ನಡೆಯುತ್ತಿದೆ. ಆದರೆ ಎಷ್ಟು ಮುಸಲ್ಮಾನ ಸಂಘಟನೆಗಳು ಹಾಗೂ ಮುಸಲ್ಮಾನ ನೇತಾರರು ಇದನ್ನು ಬಹಿರಂಗವಾಗಿ ವಿರೋಧಿಸಿ ‘ಇದು ಇಸ್ಲಾಮವಿರೋಧಿಯಾಗಿದೆ’ ಎಂದು ಹೇಳುತ್ತಾರೆ ? ಬದಲಾಗಿ ಭಾರತದಲ್ಲಿ ಜಿಹಾದಿ ಭಯೋತ್ಪಾದಕನನ್ನು ಕೊಂದರೆ, ಅವರನ್ನು ಬಂಧಿಸಿದರೆ ‘ಅವರು ಹೇಗೆ ನಿರಪರಾಧಿಯಾಗಿದ್ದಾರೆ’ ಎಂಬುದನ್ನೇ ಹೇಳಲು ಪ್ರಯತ್ನಿಸಲಾಗುತ್ತದೆ. ಈ ಬಗ್ಗೆ ಅಬೂಬಕ್ಕರರು ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ನಾವು ಒಂದೇ ತಾಯಿಯ ಮಕ್ಕಳಿದ್ದೇವೆ, ಎಲ್ಲರೂ ಶಾಂತಿಯುತವಾಗಿ ಬಾಳಬೇಕು, ಎಂದು ನಾನು ಕರೆ ನೀಡುತ್ತಿದ್ದೇನೆ’ (ಚಪ್ಪಾಳೆ ಒಂದು ಕೈಯಿಂದ ಎಂದಿಗೂ ಆಗುವುದಿಲ್ಲ. ಹಿಂದೂಗಳೂ ಯಾವಾಗಲೂ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ; ಆದರೆ ಇತರ ಧರ್ಮೀಯರಿಂದ ಯಾವಾಗಲೂ ಹಿಂದೂಗಳ ಮೇಲೆ ಆಕ್ರಮಣ, ಅತ್ಯಾಚಾರ ಮಾಡಲಾಗುತ್ತಿದೆ. ಇದು ಅಬೂಬಕರರವರಿಗೆ ಕಾಣಿಸುವುದಿಲ್ಲವೇ ? ಈಗ ಹಿಂದೂಗಳು ಸಂವಿಧಾನವು ಮಾಡಿರುವ ಕಾನೂನಿನ ಆಧಾರದಲ್ಲಿ ನಿರ್ಣಯ ತೆಗೆದುಕೊಂಡಾಗ ಅಬೂಬಕರರವರಿಗೆ ಈ ಸಂಗತಿಗಳು ನೆನಪಾಗತೊಡಗಿವೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)