ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ! – ಗೃಹ ಸಚಿವ ಜ್ಞಾನೇಂದ್ರ

* `ಹಲಾಲ್ ಮಾಂಸ’ ಇದು ಭಾರತೀಯ ಸಂಸ್ಕೃತಿಗೆ ಹೊಂದುತ್ತದೆಯೇ? ಅದನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿಚಾರವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಜನರ ಅಪೇಕ್ಷೆ ಇದೆ !- ಸಂಪಾದಕರು 

ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು – ಯಾರಾದರು ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು, ವಿಡಿಯೋಗಳು ಪ್ರಸಾರ ಮಾಡುತ್ತಿದ್ದರೆ ಅಥವಾ ಕರೆ ನೀಡುತ್ತಿದ್ದರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇವರು ಎಚ್ಚರಿಕೆ ನೀಡಿದ್ದಾರೆ. `ಈ ವಾದವನ್ನು ಶಾಂತತೆಯಿಂದ ಬಗೆಹರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಗಮನಹರಿಸಬೇಕು’, ಎಂದು ಅವರು ಹೇಳಿದರು.

(ಸೌಜನ್ಯ : Public TV)

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇನ್ನು ಯುಗಾದಿ ಹಬ್ಬದ ಹಿನ್ನಲೆಯಲ್ಲಿ `ಹಲಾಲ್ ಮಾಂಸ ಖರೀದಿಸುವುದಿಲ್ಲ’, ಎಂದು ಹೇಳುವುದು ಸಹಜವಿದೆ. `ಹಲಾಲ್ ಮಾಂಸ ನಮ್ಮ ದೇವರಿಗೆ ನಡೆಯುವುದಿಲ್ಲ’, ಎಂಬ ಪ್ರತಿಕ್ರಿಯೆ ನೀಡುವುದು ಇಂದಿನವರೆಗೂ ಇರಲಿಲ್ಲ. ಈ ಬಗ್ಗೆ ಚರ್ಚೆ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.