ಕೇರಳದಲ್ಲಿ ತಾನು ಯಾವ ಧರ್ಮದವಳೂ ಅಲ್ಲ ಎಂದು ಬರೆದುಕೊಟ್ಟಿದ್ದರಿಂದ ಜನ್ಮತಃ ಮುಸಲ್ಮಾನ ನೃತ್ಯಾಂಗನೆಗೆ ದೇವಸ್ಥಾನದಲ್ಲಿ ಭರತನಾಟ್ಯಂ ನೃತ್ಯವನ್ನು ಸಾದರಪಡಿಸಲು ನಿರಾಕರಿಸಲಾಯಿತು !

* ರಾಜ್ಯದಲ್ಲಿನ ಕೂಡಲಮಣಿಕ್ಯಮ್‌ ದೇವಸ್ಥಾನದಲ್ಲಿ ಪೂಜೆಯನ್ನು ಸಾದರಪಡಿಸುವ ಅಥವಾ ಕಾರ್ಯಕ್ರಮವನ್ನು ಸಾದರ ಪಡಿಸುವ ಕಲಾವಿದರು ಹಿಂದೂಗಳಾಗಿರುವುದು ಅನಿವಾರ್ಯ ! -ಸಂಪಾದಕರು 

* ಪ್ರತಿಯೊಂದು ದೇವಸ್ಥಾನದ ಆಚಾರಸಂಹಿತೆಯು ನಿರ್ಧರಿತವಾಗಿರುತ್ತದೆ. ಯಾವ ವಿಷಯವನ್ನು ಎಲ್ಲಿ ಮಾಡಬೇಕು ಮತ್ತು ಯಾರು ಮಾಡಬೇಕು ಎಂಬುದರ ನಿಯಮಗಳಿರುತ್ತವೆ. ಎಲ್ಲರೂ ಅದರ ಪಾಲನೆ ಮಾಡಲೇಬೇಕು !- ಸಂಪಾದಕರು 

* ದೇವಸ್ಥಾನ ವ್ಯವಸ್ಥಾಪನೆಯು ಮಾನಸಿಯಾರವರನ್ನು ‘ತಾವು ಹಿಂದೂವೇ ?’ ಎಂದು ಕೇಳಿತ್ತು. ಆಗ ಅವರು ‘ನನಗೆ ಯಾವುದೇ ಧರ್ಮವಿಲ್ಲ’ ಎಂದು ಲಿಖಿತ ಸ್ವರೂಪದಲ್ಲಿ ನೀಡಿದ್ದರು. ಇದರಿಂದಾಗಿ ಅವರಿಗೆ ಅನುಮತಿಯನ್ನು ನಿರಾಕರಿಸಲಾಗಿದೆ, ಎಂಬುದನ್ನು ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕು. ದೇವಸ್ಥಾನದಲ್ಲಿನ ದೇವತೆಯ ಬಗ್ಗೆ ಶ್ರದ್ಧೆ ಇರುವವರಿಗೆ ಮಾತ್ರ ಆ ದೇವಸ್ಥಾನದಲ್ಲಿ ಪ್ರವೇಶ ಸಿಗಬೇಕು !- ಸಂಪಾದಕರು 

* ‘ನನಗೆ ಯಾವುದೇ ಧಮರ್ವಿಲ್ಲ’ ಎಂದು ಹೇಳುವ ಮಾನಸಿಯಾರವರು ದೇವಸ್ಥಾನವನ್ನು ಪ್ರವೇಶಿಸಲು ಏಕೆ ಪಟ್ಟು ಹಿಡಿಯುತ್ತಾರೆ ?’, ಎಂಬುದರ ಕಾರಣವನ್ನು ಅವರು ಹಿಂದೂಗಳಿಗೆ ತಿಳಿಸಬೇಕು ! -ಸಂಪಾದಕರು 

ಮಾನಸಿಯಾ

ಕೊಚ್ಚಿ – ಕೇರಳದ ತ್ರಿಶೂರ ಜಿಲ್ಲೆಯಲ್ಲಿನ ಇರಿಂಜಲಕುಡಾದಲ್ಲಿನ ಕೂಡಲಮಣಿಕ್ಯಮ್‌ ದೇವಸ್ಥಾನದಲ್ಲಿ ಭರತನಾಟ್ಯಂ ನೃತ್ಯಾಂಗನೆಯಾದ ಮಾನಸಿಯಾ ವಿ.ಪಿ ಯವರಿಗೆ ಒಂದು ಕಾರ್ಯಕ್ರಮದಿಂದ ಅವರು ಅಹಿಂದೂವಾಗಿರುವುದರಿಂದ ನೃತ್ಯವನ್ನು ಸಾದರಪಡಿಸಲು ನಿರಾಕರಿಸಲಾಯಿತು. ಮಾನಸಿಯಾರವರು ಭರತನಾಟ್ಯಂನಲ್ಲಿ ಪಿ.ಎಚ್‌.ಡಿ ಮಾಡಿದ್ದಾರೆ.

ಮಾನಸಿಯಾರವರು ಮುಸಲ್ಮಾನರಾಗಿದ್ದಾರೆ. ಅವರು ಭರತನಾಟ್ಯಂ ಕಲಿತಿದ್ದರಿಂದ ಅವರಿಗೆ ತಮ್ಮ ಸಮಾಜದಲ್ಲಿನ ಇಸ್ಲಾಮಿಕ ಧರ್ಮಗುರುಗಳ ಸಿಟ್ಟು ಹಾಗೂ ಬಹಿಷ್ಕಾರವನ್ನು ಎದುರಿಸಬೇಕಾಯಿತು. ಒಂದು ವಾರ್ತಾಪತ್ರಿಕೆಯು ಕೂಡಲಮಣಿಕ್ಯಮ್‌ ದೇವಸ್ವೋಮ (ದೇವಸ್ಥಾನ) ಮಂಡಳಿಯ ಅಧ್ಯಕ್ಷರಾದ ಪ್ರದೀಪ ಮೆನನರವರನ್ನು ಸಂಪರ್ಕಿಸಿದಾಗ ‘ದೇವಸ್ಥಾನದಲ್ಲಿ ನಡೆಯುತ್ತಿರುವ ಪರಂಪರೆಯ ಅನುಸಾರ ದೇವಸ್ಥಾನದ ಆವರಣದಲ್ಲಿ ಕೇವಲ ಹಿಂದೂಗಳೇ ಪೂಜೆ ಮಾಡಬಲ್ಲರು. ದೇವಸ್ಥಾನದ ವ್ಯವಸ್ಥಾಪನೆಯು ಆಯೋಜಿಸಿರುವ ಮಹೋತ್ಸವದಲ್ಲಿ ಸುಮಾರು ೮೦೦ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ಸಾದರಪಡಿಸಲಿದ್ದಾರೆ. ನಮ್ಮ ನಿಯಮಗಳ ಅನುಸಾರ ಅವರು ಹಿಂದೂವೇ ಎಂದು ಕೇಳಲಾಗುತ್ತದೆ. ಮಾನಸಿಯಾರವರು ಯಾವುದೇ ಧರ್ಮವಿಲ್ಲ ಎಂದು ಲಿಖಿತರೂಪದಲ್ಲಿ ನೀಡಿದ್ದಾರೆ. ಆದುದರಿಂದ ಅವರಿಗೆ ಕಾರ್ಯಕ್ರಮದ ಅನುಮತಿಯನ್ನು ನಿರಾಕರಿಸಲಾಗಿದೆ. ನಾವು ದೇವಸ್ಥಾನದಲ್ಲಿರುವ ಪರಂಪರೆಯ ಅನುಸಾರ ಆಕೆಗೆ ನಿರಾಕರಣೆಯನ್ನು ತಿಳಿಸಿದ್ದೇವೆ’ ಎಂದು ಹೇಳಿದರು.

ವಿಹಿಂಪವು ಪವಕುಲ್ಕಮ್‌ ದೇವಸ್ಥಾನದಲ್ಲಿ ಆಮಂತ್ರಣ ನೀಡಿದೆ !

ನೃತ್ಯಾಂಗನೆ ಮಾನಸಿಯಾರವರಿಗೆ ಪವಕುಲ್ಕಮ್‌ ದೇವಸ್ಥಾನದಲ್ಲಿ ನೃತ್ಯವನ್ನು ಸಾದರಪಡಿಸಲು ಆಮಂತ್ರಿಸಲಾಗಿದೆ. ‘ಈ ಕಾರ್ಯಕ್ರಮವು ಯಾವಾಗ ನಡೆಯಲಿದೆ, ಅದರ ದಿನಾಂಕ ಮತ್ತು ಸಮಯವನ್ನು ನಂತರ ತಿಳಿಸಲಾಗುವುದು’, ಎಂದು ವಿಹಿಂಪವು ತಿಳಿಸಿದೆ.