ಅಪರಾಧಿಗಳ ಗುರುತು ತೆಗೆದುಕೊಳ್ಳಲು ಪೊಲೀಸರಿಗೆ ಅಧಿಕಾರ ಇರಲಿದೆ !

ಲೋಕಸಭೆಯಲ್ಲಿ `ಕ್ರಿಮಿನಲ್ ಪ್ರೊಸೀಜರ್ (ಗುರುತಿನ) ಮಸೂದೆ 2022′ ಮಂಡನೆ

(ಸೌಜನ್ಯ Bar & Bench )

ನವದೆಹಲಿ – ಅಪರಾಧಿ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ 2022 ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯಿಂದ ತಪ್ಪಿತಸ್ಥರ ಅಥವಾ ಬಂಧನಕ್ಕೊಳಗಾದ ಆರೋಪಿಯ `ಬೆರಳಚ್ಚು, ಹಸ್ತ ಮುದ್ರೆ, ಹೆಜ್ಜೆಗುರುತು ಮುದ್ರೆ, ಛಾಯಾಚಿತ್ರಗಳು, ಕಣ್ಣು ಮತ್ತು ಕಣ್ಣಿನ ಪರದೆ, ಭೌತಿಕ, ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಸಹಿಗಳು, ಕೈಬರಹ ಅಥವಾ ಯಾವುದೇ ಇತರ ಪರೀಕ್ಷೆಯನ್ನು ಒಳಗೊಂಡಂತೆ ವರ್ತನೆಯ ಗುಣಲಕ್ಷಣಗಳ ಮಾಹಿತಿ ಸಂಗ್ರಹಿಸಲು ಪೊಲೀಸರಿಗೆ ಅಧಿಕಾರ ಸಿಗಲಿದೆ. 7 ವರ್ಷಕ್ಕಿಂತಲೂ ಕಡಿಮೆ ಶಿಕ್ಷೆ ಆಗಿರುವ ಅಪರಾಧಿ, ಅದೇ ರೀತಿ ಮಹಿಳೆ ಮತ್ತು ಮಕ್ಕಳನ್ನು ಹೊರತುಪಡಿಸಿ ಇತರ ಅಪರಾಧಿಗಳ ಜೈವಿಕ ಮಾದರಿಯನ್ನು ತೆಗೆದುಕೊಳ್ಳಲಾಗುವುದು. ಇತರರಿಗೆ ಈ ರೀತಿಯ ಮಾದರಿಯನ್ನು ಸ್ವೇಚ್ಛೆಯಿಂದ ನೀಡುವ ವ್ಯವಸ್ಥೆ ಇದೆ. ಈ ಜೈವಿಕ ಮಾದರಿಯೊಂದಿಗೆ ಸಂಬಂಧಪಟ್ಟ ಡೇಟಾ ರಕ್ಷಿಸಲು ಕೇಂದ್ರ ಮತ್ತು ರಾಜ್ಯಗಳ ತನಿಖಾ ವ್ಯವಸ್ಥೆಯಲ್ಲಿ ಅವರ ಮಟ್ಟದಲ್ಲಿ ಕಾನೂನು ಮಾಡುವ ಅಧಿಕಾರ ಇರಲಿದೆ. ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬರುವವರೆಗೂ ನಿರಪರಾಧಿಯೆಂದು ಬಿಡುಗಡೆ ಹೊಂದಿರುವ ವ್ಯಕ್ತಿಯ ಮಾದರಿ ಇಡುವುದಿಲ್ಲ, ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.