ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ
ತೀರ್ಥಹಳ್ಳಿ – ಹಿಂದೂ ಧರ್ಮದ ಶ್ರೇಷ್ಠತೆಯ ಹೇಳುವ ಕಾರ್ಯವನ್ನು ಹಿಂದೂ ರಾಷ್ಟ್ರಜಾಗೃತಿ ಸಭೆಯು ಮಾಡುತ್ತಿದ್ದೆ. ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡಿದರೆ ನಮ್ಮ ರಕ್ಷಣೆ ಹಾಗೂ ನಮ್ಮ ಹೆಣ್ಣುಮಕ್ಕಳ ರಕ್ಷಣೆ ಆಗುತ್ತದೆ. ಪ್ರತಿಯೊಂದು ಮನೆಗಳಲ್ಲಿಲ್ಲೂ ಧಾರ್ಮಿಕ ಆಚರಣೆಯನ್ನು ಮಾಡೋಣ ಎಂದು ಮೆಗರವಳ್ಳಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ನರಸಿಂಹಮೂರ್ತಿ ಭಟ್ ಇವರು ಹೇಳಿದರು. ಅವರು ಮಾರ್ಚ್ 27 ಇಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಸೌ. ಭವ್ಯಾ ಗೌಡ ಇವರು ಉಪಸ್ಥಿರಿಗೆ ಮಾರ್ಗರ್ಶನ ಮಾಡಿದರು. ಸಭೆಯಲ್ಲಿ ಸುಮಾರು 120 ಕ್ಕಿಂತಲೂ ಹೆಚ್ಚು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.
ಗಮನಾರ್ಹ ಅಂಶಗಳು
1. ಸಂವಾದ ಕಾರ್ಯಕ್ರಮದಲ್ಲಿ ಇನ್ನು ಕೆಲವೆಡೆ ಹಿಂದೂ ರಾಷ್ಟ್ರಜಾಗೃತಿ ಸಭೆಗಳನ್ನು ಆಯೊಜಿಸುವ ಬೇಡಿಕೆ ಬಂದಿತು ಅಲ್ಲದೇ ಧರ್ಮಶಿಕ್ಷಣ ಹಾಗೂ ಸ್ವರಕ್ಷಣಾ ತರಬೇತಿ ವರ್ಗ ಆರಂಭಿಸುವ ಬಗ್ಗೆಯೂ ಧರ್ಮಪ್ರೇಮಿಗಳು ಆಗ್ರಹಿಸಿದರು
2. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷರು ಶ್ರೀ ನರಸಿಂಹ ಮೂರ್ತಿ ಭಟ್ 100 ಯುಗಾದಿ ಶುಭಾಶಯ ಪತ್ರವನ್ನು ಉಚಿತವಾಗಿ ಹಂಚಲು ಹೇಳಿ ಬಂದವರಿಗೆಲ್ಲ ನೀಡಿದರು.
3. ಓರ್ವ ಧರ್ಮಪ್ರೇಮಿಯು ಯುಗಾದಿ 50 ಪತ್ರಿಕೆಯನ್ನು ಖರೀದಿ ಮಾಡಿ ಉಚಿತವಾಗಿ ಹಂಚಿದರು.