ಬೆಂಗಳೂರಿನಲ್ಲಿ ನೆರವೇರಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕರ ಕಾರ್ಯಶಾಲೆ !
ಬೆಂಗಳೂರು : ಮನುಷ್ಯಜನ್ಮ ಅತ್ಯಂತ ದುರ್ಲಭವಾಗಿದೆ, ಸಮಾಜದಲ್ಲಿ ಧರ್ಮಶಿಕ್ಷಣದ ಅಭಾವದಿಂದಾಗಿ ಮನುಷ್ಯ ಅರ್ಥ ಮತ್ತು ಕಾಮದ ಸುಖದಲ್ಲಿ ಮುಳುಗಿದ್ದಾರೆ. ಅದೇ ಸುಖ ಎಂದು ತಿಳಿದು ಇದರ ಹಿಂದೆ-ಹಿಂದೆ ಹೋಗಿ, ಕೊನೆಗೆ ಅಮೂಲ್ಯ ಮನುಷ್ಯಜನ್ಮ ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆ. ಸಾಧನೆಯನ್ನು ಮಾಡಿದರೆ ಜೀವನದಲ್ಲಿ ಬರುವ ಅಡಚಣೆಗಳಲ್ಲಿ ಶೇ. 80 ರಷ್ಟು ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಹಾಗಾಗಿ ಮನುಷ್ಯ ಜನ್ಮದ ಸಾರ್ಥಕ ಮಾಡಿಕೊಳ್ಳಿ !, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಮತ್ತು ಶೇ. 69 ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭುರವರು ಹೇಳಿದರು. ಅವರು 19 ಮತ್ತು 20 ಮಾರ್ಚ 2022 ರಂದು ಬೆಂಗಳೂರಿನ ಮಲ್ಲೇಶ್ವರಂ ಸಂಸ್ಕೃತಿ ಕೇಂದ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಂದ ಆಯೋಜಿಸಲಾಗಿದ್ದ ಎರಡು ದಿನಗಳ `ಹಿಂದೂ ರಾಷ್ಟ್ರ ಸಂಘಟಕ ಕಾರ್ಯಶಾಲೆ’ಯಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ 42 ಧರ್ಮಪ್ರೇಮಿಗಳು ಪಾಲ್ಗೊಂಡಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾರ್ಗದರ್ಶನ ಮಾಡಿದರು
ಈ ವೇಳೆ ಮಾತನಾಡಿದ ಶ್ರೀ. ಗುರುಪ್ರಸಾದ ಗೌಡ ಇವರು, ಆದರ್ಶ ರಾಮರಾಜ್ಯದ ಅನುಭೂತಿಯನ್ನು ನೀಡುವಂತಹ ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುವುದಕ್ಕಾಗಿ ಹಿಂದೂ ರಾಷ್ಟ್ರ ಸಂಘಟಕರಾಗಿ ನಾವು ಸಮಾಜಕ್ಕೆ ಹೋಗುವಾಗ ನಾವು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ. ನಮ್ಮ ಆಚಾರ-ವಿಚಾರ ಎಲ್ಲವೂ ಸತ್ವಪ್ರಧಾನವಾಗಿರುವುದು ಅವಶ್ಯಕವಾಗಿದೆ. ಹೇಗೆ ಅರ್ಜುನ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಭಗವಂತನ ಮತ್ತು ಗುರುಗಳ ಆಶೀರ್ವಾದದಿಂದ ಧರ್ಮಸಂಸ್ಥಾಪನಾ ಕಾರ್ಯದಲ್ಲಿ ಸಹಭಾಗವನ್ನು ಮಾಡಿದ್ದರು ಅದೇ ರೀತಿಯಲ್ಲಿ ನಾವೆಲ್ಲರೂ ನಮ್ಮ ತನು, ಮನ, ಧನ ಮತ್ತು ಸರ್ವಸ್ವವನ್ನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೀಡಬೇಕಾಗಿದೆ’ ಎಂದು ಹೇಳಿದರು.
ಕೊನೆಯದಾಗಿ ಶ್ರೀ. ಕಾಶಿನಾಥ ಪ್ರಭು ಮತ್ತು ಸನಾತನ ಸಂಸ್ಥೆಯ ಕು. ರೇವತಿ ಮೋಗೆರೆರವರು ಸ್ವಭಾವದೋಷ-ನಿರ್ಮೂಲನೆ ಮಹತ್ವ, ಅದರ ಅವಶ್ಯಕತೆ, ದೋಷ ನಿರ್ಮೂಲನೆ ಮಾಡಲು ಸ್ವಯಂಸೂಚನೆ ಹೇಗೆ ನೀಡಬೇಕು, ಮುಂತಾದ ಮಾಹಿತಿಯನ್ನು ಸವಿಸ್ತಾರವಾಗಿ ನೀಡಿದರು.
ಈ ಕಾರ್ಯಶಾಲೆಯಿಂದಾಗಿ ಅನೇಕರು ತಮ್ಮ ಪ್ರದೇಶದಲ್ಲಿ ಧರ್ಮಶಿಕ್ಷಣ ವರ್ಗವನ್ನು ಆರಂಭಿಸುವಂತೆ ಹಾಗೂ ಪ್ರಥಮೋಪಚಾರ ಮತ್ತು ಸ್ವರಕ್ಷಣಾ ತರಬೇತಿ ವರ್ಗ ಆರಂಭಿಸುವಂತೆ ಬೇಡಿಕೆ ನೀಡಿದರು
ಅಭಿಪ್ರಾಯ :-
1. ಹಿಂದೂ ರಾಷ್ಟ್ರದ ಪರಿಕಲ್ಪನೆಯ ಬಗ್ಗೆ ಏನು ತಿಳಿದಿರಲಿಲ್ಲ. ಈ ಕಾರ್ಯಶಾಲೆಯಿಂದ ಸಂಸಾರಕ್ಕಾಗಿ ಜೀವ ಸವೆಸುವುದಕ್ಕಿಂತ ದೇಶಕ್ಕಾಗಿ ಸಮರ್ಪಣೆ ಮಾಡುವುದು ಶ್ರೇಷ್ಠವೆಂದು ತಿಳಿಯಿತು. ಅದಕ್ಕಾಗಿ ಸಿದ್ದನಿದ್ದೇನೆ. – ಸೌ. ತಾರಾ ಸಿಂಗ್
2. ಸನಾತನ ಸಂಸ್ಥೆಯಷ್ಟು ಶ್ರೇಷ್ಠವಾದ ಸಂಸ್ಥೆ ಬೇರೆ ಯಾವುದು ಇಲ್ಲ. ಅನ್ಯ ಸಂಸ್ಥೆಗಳಲ್ಲಿ ಕೇವಲ ಒಂದೇ ವಿಷಯದ ಮೇಲೆ ಜ್ಞಾನ ಸಿಗುತ್ತದೆ. ಆದರೆ ಸನಾತನಕ್ಕೆ ಬಂದರೆ, ವೇದ, ಉಪನಿಷತ್, 18 ಪುರಾಣಗಳು, ಸಮಗ್ರ ರಾಮಾಯಣ, ಮಹಾಭಾರತ ಎಲ್ಲ ವಿಷಯಗಳ ಆಳವಾದ ಜ್ಞಾನ ಸಿಗುತ್ತದೆ. ಸನಾತನದ ಕಾರ್ಯವನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ. ಅದಕ್ಕೆ ನನ್ನ ಮಗಳಿಗೆ ಮನುಸ್ಮೃತಿ ಮತ್ತು ಮಗನಿಗೆ ಸನಾತನ ಎಂದು ನಾಮಕರಣ ಮಾಡಿದೆ. ಸನಾತನದ ಗುರುಗಳ ಮಹಾನ್ ಗುರುಗಳು ಪೃಥ್ವಿಯಲ್ಲಿ ಇಲ್ಲ. ಸನಾತನಕ್ಕೆ ಬಂದರೆ ಭವ ರೋಗ, ಬಾಹ್ಯ ರೋಗ ಎರಡು ಸಹ ಗುಣಮುಖವಾಗುತ್ತದೆ. – ಶ್ರೀ. ರವಿ, ಕೊಲಾರ್.
3. ಸನಾತನ ಸಂಸ್ಥೆಯ ಬಗ್ಗೆ ಸ್ವಲ್ಪ ಮಾತ್ರವೇ ಗೊತ್ತಿತ್ತು, ಆದರೆ ಇಷ್ಟೊಂದು ಆಳವಾಗಿ ಕಾರ್ಯ ಮಾಡುತ್ತಿದೆ ಎಂದು ಈ ಕಾರ್ಯಶಾಲೆಯಲ್ಲಿ ಪ್ರತ್ಯಕ್ಷ ನೋಡಲು ಹಾಗೂ ಕಲಿಯಲು ಸಿಕ್ಕಿತ್ತು. ಎಲ್ಲಿ ಪ್ರತಿಯೊಂದು ಆಯೋಜನೆಯನ್ನು ಶಿಸ್ತುಬದ್ಧವಾಗಿ ಮಾಡಲಾಗಿದೆ, ಸನಾತನ ಜೊತೆಗೆ ಸಂಪರ್ಕದಲ್ಲಿರುವುದೇ ನಮ್ಮ ಭಾಗ್ಯವಾಗಿದೆ. – ಶ್ರೀ. ಪವನ್ ಕುಮಾರ, ಬೆಂಗಳೂರು
4. ನಳಂದ ವಿಶ್ವವಿದ್ಯಾಲಯ ಎಲ್ಲಿದೆ ಎಂದು ಯಾರಾದರೂ ಕೇಳಿದರೆ ಅದು ಸನಾತನ ಸಂಸ್ಥೆ ಎಂದು ಹೇಳಬಹುದು – ಶ್ರೀ. ಶ್ಯಾಮ್ ನಾಯ್ಕ್