ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೌಸಾ (ರಾಜಸ್ಥಾನ)ದಲ್ಲಿ ಕಾಂಗ್ರೆಸ್ಸಿನ ಶಾಸಕರ ಮಗನ ಬಂಧನ

* ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !- ಸಂಪಾದಕರು 

ದೌಸಾ (ರಾಜಸ್ಥಾನ) – ಇಲ್ಲಿ ೧೫ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಶಾಸಕ ಜೋಹರಿಲಾಲ ಮೀಣಾರವರ ಮಗ ವಿವೇಕ ಶರ್ಮಾ, ದೀಪಕ ಹಾಗೂ ನೇತರಾಮ, ಹಾಗೆಯೇ ಇತರ ಇಬ್ಬರು ತರುಣರನ್ನು ಬಂಧಿಸಲಾಗಿದೆ. ಇಲ್ಲಿನ ಮಂಡವಾರ ಪೊಲೀಸ ಠಾಣೆಯ ಸೀಮೆಯಲ್ಲಿನ ಒಂದು ಉಪಹಾರಗೃಹದಲ್ಲಿ ಈ ಹುಡುಗಿಗೆ ಅಮಲು ಪದಾರ್ಥವನ್ನು ಸೇವಿಸಲು ನೀಡಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಮುಖ್ಯ ಆರೋಪಿಯಾದ ವಿವೇಕನು ಈ ಘಟನೆಯ ವಿಡಿಯೋ ತಯಾರಿಸಿದನು. ಈ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಸಿ ಅವನು ಈ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು, ಹಾಗೆಯೇ ಹುಡುಗಿಯಿಂದ ಹದಿನೈದುವರೆ ಲಕ್ಷ ರೂಪಾಯಿ ಮತ್ತು ಬಂಗಾರವನ್ನು ಕೇಳಿದ್ದನು. ಹುಡುಗಿಯು ಮನೆಯಿಂದ ತಾಯಿಯ ಹಣ ಮತ್ತು ಬಂಗಾರವನ್ನು ಆರೋಪಿಗೆ ತಂದು ಕೊಟ್ಟಿದ್ದಳು.


ಶಾಸಕ ಜೊಹರೀಲಾಲ ಮೀಣಾರವರು ತಮಗೆ ಈ ಪ್ರಕರಣದ ಬಗ್ಗೆ ಏನೂ ತಿಳಿದಿಲ್ಲ. ನನಗೆ ಯಾರೋ ದೂರವಾಣಿ ಮಾಡಿ ಈ ವಿಷಯದ ಬಗ್ಗೆ ಹೇಳಿದ್ದರು. ನನ್ನ ಮಗ ನಿರ್ದೋಷಿಯಾಗಿದ್ದಾನೆ, ಅವನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ, ಎಂದು ಹೇಳಿದರು.