ಇನ್ನು ಮುಂದೆ ಮಾನಸರೋವರ ಯಾತ್ರೆಗೆ ಚೀನಾ ಅಥವಾ ನೇಪಾಳಕ್ಕೆ ಹೋಗಬೇಕಾಗಿಲ್ಲ ! – ಕೇಂದ್ರ ಸಚಿವ ನಿತೀನ ಗಡಕರಿ

ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !

* ಅದಕ್ಕಾಗಿ ಸ್ವಾತಂತ್ರ್ಯದ ಬಳಿಕ 74 ವರ್ಷಗಳವರೆಗೂ ಕಾಯಬೇಕಾಯಿತು, ಇದು ಇಲ್ಲಿಯ ವರೆಗಿನ ಆಢಳಿತಗಾರರಿಗೆ ಲಜ್ಜಾಸ್ಪದ ! -ಸಂಪಾದಕರು 

ಕೇಂದ್ರ ಸಚಿವ ನಿತೀನ ಗಡಕರಿ (ಬಲ)

ನವದೆಹಲಿ – ಈಗ ಕೈಲಾಸ ಮಾನಸರೋವರ ಯಾತ್ರೆಗೆ ನೇಪಾಳ ಅಥವಾ ಚೀನಾದಿಂದ ಹೋಗುವ ಅಗತ್ಯವಿಲ್ಲ, ಉತ್ತರಾಖಂಡದ ಪಿಥೌರಾಗಢದಿಂದ ನೇರ ಕೈಲಾಸ ಮಾನಸರೋವರವರೆಗೂ ಹೋಗಲು ರಸ್ತೆ ನಿರ್ಮಿಸಲಾಗುವುದು. ಅದು 2023 ರವರೆಗೂ ಪೂರ್ಣವಾಗಲಿದೆ, ಎಂದು ಕೇಂದ್ರೀಯ ರಸ್ತೆ ಹಾಗೂ ಸಾರಿಗೆ ಸಚಿವರಾದ ನಿತಿನ ಗಡಕರೀಯವರು ಲೋಕಸಭೆಗೆ ಮಾಹಿತಿ ನೀಡಿದರು.

ಗಡಕರೀಯವರು ತಮ್ಮ ಮಾತನ್ನು ಮುಂದುರೆಸುತ್ತಾ, ಚೈನಾದ ಗಡಿಯನ್ನು ಸೇರುವ ಹಾಗೂ ಸೈನ್ಯದ ದೃಷ್ಟಿಯಲ್ಲಿ ಮಹತ್ವವಾಗಿರುವ ಘಟ್ಟಾಬಗಡ-ಲಿಪುಲೇಖ ಮಾರ್ಗವನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಮಾರ್ಗದಿಂದ ಮಾನಸರೋವರಕ್ಕೆ ಹೋಗುವ ಭಕ್ತಾದಿಗಳು ಹಾಗೂ ಜನಸಾಮಾನ್ಯರು ಮತ್ತು ಭದ್ರತಾಪಡೆಯವರು ಪ್ರವಾಸ ಮಾಡಬಹುದು. ಹಿಂದೆ ಸೈನ್ಯಕ್ಕೆ ಸರಬರಾಜು ಸಾಗಿಸಲು 4 ದಿನಗಳು ತಗಲುತ್ತಿತ್ತು, ಈಗ ಈ ಮಾರ್ಗದಿಂದ ಅದು ಕೇವಲ 4 ಗಂಟೆಗಳಲ್ಲಿ ಗಡಿಯವರೆಗೂ ತಲುಪಿಸಲು ಸಾಧ್ಯವಾಗಲಿದೆ.