ಪ್ರಯಾಗರಾಜ (ಉತ್ತರಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯವು ಮುಂಬರುವ ಮಾರ್ಚ ೨೯ ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಪ್ರಕರಣದಲ್ಲಿ ನಿಯಮಿತವಾಗಿ ಆಲಿಕೆ ನಡೆಸಲು ಆದೇಶಿಸಿದೆ. ವಾರಣಾಸಿಯಲ್ಲಿನ ಅಂಜುಮನ ಇಂತೆಜಾಮಿಯಾ ಮಸೀದಿಯಿಂದ ದಾಖಲಿಸಾದ ಅರ್ಜಿಯ ಮೇಲೆ ಆಲಿಕೆ ನಡೆಯುತ್ತಿರುವಾಗ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಪರಿಸರದ ಭಾರತೀಯ ಪುರಾತತ್ತ್ವ ಇಲಾಖೆಯಿಂದ ನಡೆಲಾಗುವ ಸಮೀಕ್ಷೆಯನ್ನು ತಡೆದಿತ್ತು.
HC to resume hearing on Kashi temple-Gyanvapi Mosque issue from March 29 https://t.co/FlP2GGnNsD
— TOI India (@TOIIndiaNews) March 24, 2022
ಆಲಿಕೆಯ ಸಮಯದಲ್ಲಿ ಕೇಂದ್ರ ಸರಕಾರದ ನ್ಯಾಯವಾದಿಗಳು ‘ಇಲ್ಲಿ ಪ್ರಾಚೀನ ಕಾಲದಿಂದ, ಅಂದರೆ ಸತ್ಯಯುಗದಿಂದ ಶಿವಮಂದಿರವು ಅಸ್ತಿತ್ವದಲ್ಲಿದ್ದು ಅದು ಸ್ವಯಂಭೂವಾಗಿದೆ. ಅದು ಈಗಲೂ ಆ ಜಾಗದಲ್ಲಿದೆ. ಈ ದೇವಸ್ಥಾನದ ನೆಲಮಾಳಿಗೆಯು ಇಂದಿಗೂ ಫಿರ್ಯಾದುದಾರರ ನಿಯಂತ್ರಣದಲ್ಲಿದೆ, ಈ ಭಾಗವು ೧೫ ನೇ ಶತಮಾನದಲ್ಲಿನ ದೇವಸ್ಥಾನದ ಭಾಗವಾಗಿದೆ. ಇದರೊಂದಿಗೆ ಆಗಸ್ಟ ೧೫, ೧೯೪೭ರಂದು ಇದು ಇರುವ ಸ್ಥಿತಿಯಲ್ಲಿಯೇ ಇರುವುದರಿಂದ ಇದಕ್ಕೆ ‘ಪ್ಲೇಸಸ್ ಆಫ್ ವರ್ಶಿಪ್’ ಕಾನೂನು ಅನ್ವಯವಾಗುವುದಿಲ್ಲ’ ಎಂದು ಹೇಳಿದರು.