ದೇವಸ್ಥಾನದಲ್ಲಿ ಬರುವ ವಿಐಪಿ ಜನರು ಭಕ್ತರಿಗೆ ಅಡಚಣೆ ಮಾಡುತ್ತಿದ್ದರೆ, ದೇವರು ಅವರನ್ನು ಕ್ಷಮಿಸುವುದಿಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಇದನ್ನು ನ್ಯಾಯಾಲಯವು ಹೇಳಬೇಕಾಗುತ್ತದೆಯೇ ? ಇದು ವಿಐಪಿ ಜನರಿಗೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಏಕೆ ತಿಳಿಯುವುದಿಲ್ಲ ?

ಚೆನ್ನೈ (ತಮಿಳುನಾಡು) – ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಗಣ್ಯವ್ಯಕ್ತಿಗಳು ಭಕ್ತರ ಅಡಚಣೆಗಳಿಗೆ ಕಾರಣರಾದರೆ ಇಂತಹ ಜನರು ಪಾಪ ಮಾಡುತ್ತಿದ್ದಾರೆ. ದೇವರು ಅವರನ್ನು ಕ್ಷಮಿಸುವುದಿಲ್ಲ, ಎಂಬ ಹೇಳಿಕೆಯನ್ನು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌. ಎಮ್‌. ಸುಬ್ರಹ್ಮಣ್ಯಮ್‌ರವರು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ನೀಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿನ ತೂತೀಕೊರಿನ ಜಿಲ್ಲೆಯಲ್ಲಿನ ತಿರುಚೆಂದುರದಲ್ಲಿರುವ ಪ್ರಸಿದ್ಧ ಅರುಲಮಿಗು ಸುಬ್ರಮನಿಯಾ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಅರ್ಜಿಯ ಮೇಲೆ ಆಲಿಕೆ ನಡೆಯುತ್ತಿತ್ತು.

ಮದ್ರಾಸ ಉಚ್ಚ ನ್ಯಾಯಾಲಯವು ನೀಡಿರುವ ಹೇಳಿಕೆ

೧. ವಿಐಪಿ ಸಂಸ್ಕೃತಿಯಿಂದಾಗಿ ಜನರಿಗೆ ವಿಶೇಷವಾಗಿ ದೇವಸ್ಥಾನಗಳಲ್ಲಿ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ವಿಐಪಿ ಪ್ರವೇಶ ಸೌಲಭ್ಯವು ಕೇವಲ ಸಂಬಂಧಿತ ವ್ಯಕ್ತಿಗೆ ಅಥವಾ ಅವರ ಕುಟುಂಬದವರಿಗೆ ಮಾತ್ರ ದೊರೆಯಬೇಕು, ಇದರಲ್ಲಿ ಇತರ ಸಂಬಂಧಿಕರು ಇರಬಾರದು.

೨. ವಿವಿಧ ಸರಕಾರಿ ವಿಭಾಗಗಳಲ್ಲಿನ ಗಣ್ಯವ್ಯಕ್ತಿಗಳ ಶ್ರೇಣಿಯಲ್ಲಿ ಬರುವ ಅಧಿಕಾರಿಗಳು, ಅವರೊಂದಿಗೆ ಬರುವ ಜನರು, ಹಾಗೂ ಇತರ ವಿಶೇಷ ಭಕ್ತರು, ದಾನಿಗಳಿಗೆ ಸ್ವತಂತ್ರ ಸಾಲು ಮಾಡಿ ದರ್ಶನದ ಸೌಲಭ್ಯ ಮಾಡಿ ಕೊಡಬಾರದು.

೩. ಕೆಲವು ಜನರಿಗೆ ವಿಶೇಷ ದರ್ಶನದ ಅವಕಾಶ ನೀಡಬೇಕು ಇದರಲ್ಲಿ ಸಂಶಯವಿಲ್ಲ; ಆದರೆ ವಿಶೇಷ ಪದವಿಯಲ್ಲಿ ಕಾರ್ಯನಿರತರಾದವರಿಗೆ ಮಾತ್ರ ಅದು ದೊರೆಯಬೇಕು. ಹೆಚ್ಚಿನ ವಿಕಾಸಗೊಂಡ ದೇಶಗಳಲ್ಲಿ ಕೇವಲ ಉಚ್ಚ ಪದವಿಯಲ್ಲಿರುವ ಜನರಿಗೆ ಮಾತ್ರ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಜನರನ್ನು ರಾಜ್ಯವ್ಯವಸ್ಥೆಯ ಮೂಲಕ ಗಣ್ಯರೆಂದು ನಿರ್ಧರಿಸಲಾಗಿರುತ್ತದೆ. ಇಂತಹ ಸೌಲಭ್ಯವು ಜನರ ಸಮಾನತೆಯ ಅಧಿಕಾರದಲ್ಲಿ ಅಡಚಣೆಯಾಗಬಾರದು.

೪. ದೇವಸ್ಥಾನಗಳಂತಹ ಜಾಗಗಳಲ್ಲಿ ವಿಐಪಿ ದರ್ಶನ ಸೌಲಭ್ಯದಿಂದಾಗಿ ಭಕ್ತರಿಗೆ ತೊಂದರೆಯಾಗುತ್ತದೆ ಮತ್ತು ಈ ವ್ಯವಸ್ಥೆಯ ಬಗ್ಗೆ ಟೀಕೆ ಮಾಡಲಾಗುತ್ತದೆ. ದೇವಸ್ಥಾನದ ಆಡಳಿತವು ವಿಐಪಿ ದರ್ಶನದ ವ್ಯವಸ್ಥೆಯನ್ನು ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಾಡಬೇಕು.

೫. ತಮಿಳುನಾಡು ಸರಕಾರವು ವಿಐಪಿ ಜನರ ಸೂಚಿಯನ್ನು ಸಿದ್ಧಪಡಿಸಬೇಕು. ವಿಐಪಿ ಜನರೊಂದಿಗೆ ಸುರಕ್ಷಾರಕ್ಷಕರು ಮತ್ತು ಕೆಲಸಗಾರರು ಇರುತ್ತಾರೆ. ಇಂತಹ ಸಮಯದಲ್ಲಿ ವಿಐಪಿಯೊಂದಿಗಿನ ಜನರಿಗೆ ವಿಶೇಷ ದರ್ಶನದ ಸೌಲಭ್ಯವನ್ನು ನೀಡಬಾರದು. ಕೆಲಸಗಾರರಿಗೆ ಸಾಮಾನ್ಯ ಸಾಲಿನಲ್ಲಿ ಅಥವಾ ಶುಲ್ಕ ಭರಿಸಿ ದರ್ಶನ ಪಡೆಯಲು ಹೇಳಬೇಕು.

೬. ಭಕ್ತರು ತಮ್ಮ ಧಾರ್ಮಿಕ ಶ್ರದ್ಧೆಯಿಂದಾಗಿ ದೇವರಿಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಅವರಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದು. ವಿಐಪಿ ಜನರು ದರ್ಶನಕ್ಕಾಗಿ ಬರುತ್ತಿದ್ದರೆ ಅವರು ಭಕ್ತರಾಗಿ ಬರಬೇಕು.