ಕೋಲಾರದ ‘ಕ್ಲಾಕ್ ಟವರ’ನ ಮೇಲೆ ಕಳೆದ 75 ವರ್ಷಗಳಿಂದ ಹಾರಾಡುತ್ತಿದ್ದ ಇಸ್ಲಾಮೀ ಧ್ವಜವನ್ನು ತೆಗೆದು ರಾಷ್ಟ್ರಧ್ವಜವನ್ನು ಹಾರಿಸಲಾಯಿತು !

ಟಾವರ್ ನ ಹಸಿರು ಬಣ್ಣ ತೆಗೆದು ಬಿಳಿಬಣ್ಣ ಬಳಿಯಲಾಯಿತು

ಪೋಲೀಸರ ಭಾರಿ ಬಂದೋಬಸ್ತು !

* ಈ ‘ಟಾವರ’ನ ಮೇಲೆ ಹಾರುತ್ತಿದ್ದ ಇಸ್ಲಾಮೀ ಧ್ವಜಕ್ಕೆ ಇಷ್ಟು ವರ್ಷ ಜಾತ್ಯತೀತವಾದಿಗಳು ಎಂದಿಗೂ ವಿರೋಧಿಸಲಿಲ್ಲ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

* ಕಳೆದ 7 ದಶಕಗಳಿಂದ ಇಸ್ಲಾಮ್ ಧ್ವಜವು ಹಾರಾಡುತ್ತಿರುವುದಕ್ಕೆ ಕೋಲಾರವು ಭಾರತದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿ ? ಈವರೆಗಿನ ಎಲ್ಲಾ ಆಡಳಿತಗಾರರಿಗೆ ಲಜ್ಜಾಸ್ಪದವಾಗಿದೆ ! ದೇಶದಲ್ಲಿ ಇನ್ನೆಷ್ಟು ಕಡೆ ಈರೀತಿಯಾಗಿ ಇಸ್ಲಾಮೀ ಪ್ರತೀಕವಾಗಿರುವ ಧ್ವಜವಿದೆ, ಎಂಬುದನ್ನು ಕಂಡುಹಿಡಿದು ಸರಕಾರವು ಅಲ್ಲಿ ಕೂಡಲೇ ಕ್ರಮ ಕೈಗೊಳ್ಳುವ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕು, ಎಂದು ರಾಷ್ಟ್ರಭಕ್ತರಿಗೆ ಅನಿಸುತ್ತದೆ !- ಸಂಪಾದಕರು 

ಕೋಲಾರ – ಜಿಲ್ಲೆಯ ‘ಕ್ಲಾಕ್ ಟಾವರ’ನ ಮೇಲೆ ಕಳೆದ 75 ವರ್ಷಗಳಿಂದ ಹಾರಾಡುತ್ತಿದ್ದ ಇಸ್ಲಾಮೀ ಧ್ವಜವನ್ನು ತೆಗೆದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಇದರೊಂದಿಗೆ ಈ ‘ಟಾವರ’ನ ಹಸಿರು ಬಣ್ಣವನ್ನು ತೆಗೆದು ಬಿಳಿಬಣ್ಣವನ್ನು ನೀಡಲಾಗಿದೆ. ಮಾರ್ಚ 19 ರಂದು ಜಿಲ್ಲಾಡಳಿತವು ಈ ಕ್ರಮವನ್ನು ಕೈಗೊಂಡಿತು. ಈ ಸಂದರ್ಭದಲ್ಲಿ ಘಟನೆಯ ಸ್ಥಳದಲ್ಲಿ ಪೊಲೀಸರ ಭಾರಿ ಬಂದೋಬಸ್ತು ಇತ್ತು. ಕ್ಷಿಪ್ರ ಕಾರ್ಯಾಚರಣೆಯ ಒಂದು ತಂಡವನ್ನೇ ಅಲ್ಲಿ ನೇಮಿಸಲಾಗಿತ್ತು.

1. ಕೆಲವು ದಿನಗಳ ಹಿಂದೆ ಭಾಜಪದ ಸಾಂಸದ ಮುನೀಸ್ವಾಮಿ ಎಸ್. ಇವರು ‘ಕ್ಲಾಕ್ ಟಾವರ’ ಮೇಲಿನ ಇಸ್ಲಾಂ ಧ್ವಜವನ್ನು ತೆಗೆದು ರಾಷ್ಟ್ರಧ್ವಜವನ್ನು ಹಾರಿಸಲಾಗುವುದು’, ಎಂದು ಆಶ್ವಾಸನೆಯನ್ನು ನೀಡಿದ್ದರು. ಈ ಕ್ರಮ ಕೈಗೊಂಡ ನಂತರ ಮುನೀಸ್ವಾಮಿಯವರು ಟ್ವೀಟ್ ಮಾಡಿ, 74 ವರ್ಷಗಳು ಕಾದ ನಂತರ ‘ವಿಶೇಷ ಸಮುದಾಯ’ದ ಧ್ವಜವನ್ನು ತೆಗೆದು ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಎಂದು ಹೇಳಿದ್ದಾರೆ.

2. 1930 ರಲ್ಲಿ ಮುಸ್ತಾಫಾ ಹೆಸರಿನ ಓರ್ವ ವ್ಯಾಪಾರಿಯು ಈ ‘ಟಾವರ’ನ್ನು ಕಟ್ಟಿಸಿದ್ದನು.