ಪಾಪ್ಯೂಲರ ಫ್ರಾಂಟ್ ಆಪ್ ಇಂಡಿಯಾದ ಹೆಚ್ಚುತ್ತಿರುವ ಪ್ರಭಾವವನ್ನು ತಡೆಯುವುದಕ್ಕಾಗಿ ಯೋಜನೆ
ಪಾಪ್ಯೂಲರ ಫ್ರಾಂಟ್ ಆಪ್ ಇಂಡಿಯಾದ ಹೆಚ್ಚುತ್ತಿರುವ ಸಕ್ರಿಯತೆ ಹಿಡಿಸದಿರುವ ಮುಸಲ್ಮಾನರನ್ನು ಜೋಡಿಸಲಾಗುವುದು
ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘ ಇನ್ನು ದಕ್ಷಿಣ ಭಾರತದಲ್ಲಿಯ ಮುಸಲ್ಮಾನರನ್ನು ಸಂಘದೊಂದಿಗೆ ಜೋಡಿಸುವುದಕ್ಕಾಗಿ ಯೋಜನೆಯನ್ನು ಹಮ್ಮಿಕೊಳ್ಳಲಿದೆ.
1. ದಕ್ಷಿಣಭಾರತದಲ್ಲಿ ಪಾಪ್ಯೂಲರ ಫ್ರಾಂಟ್ ಆಫ್ ಇಂಡಿಯಾದ (`ಪಿ.ಎಪ್.ಐ’ನ)ಹೆಚ್ಚುತ್ತಿರುವ ಪ್ರಭಾವವನ್ನು ತಡೆಯುವುದಕ್ಕಾಗಿ ಸಂಘದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಇದರಲ್ಲಿ ದಕ್ಷಿಣ ಭಾರತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಚಾರವನ್ನು ಹೆಚ್ಚಿಸುವುದು, ಇದು ಒಂದು ಧ್ಯೇಯವಾಗಿದೆ. ಸಂಘವು ದಕ್ಷಿಣ ಭಾರತದಲ್ಲಿ ಯಾರಿಗೆ ಪಾಪ್ಯೂಲರ ಫ್ರಾಂಟ್ ಆಫ್ ಇಂಡಿಯಾದೊಂದಿಗೆ ಸಂಬಂಧವಿಲ್ಲ ಅಥವಾ ಯಾರಿಗೆ ಆ ಸಂಘಟನೆಯು ಇಷ್ಟವಿಲ್ಲ ಅಂತಹ ಮುಸಲ್ಮಾನರವರೆಗೆ ತಲುಪಲಿದೆ.
2. ಒಂದು ಆಂಗ್ಲ ವೃತ್ತ ಪತ್ರಿಕೆಗೆ ನೀಡಿದ ಮಾಹಿತಿಯಲ್ಲಿ ಸಂಘದ ಓರ್ವ ಮುಖಂಡರು, ಸಂಘದ ಕಾರ್ಯಕರ್ತರು ‘ಪಿ.ಎಫ್.ಐ.’ಯ ವಿಚಾರಸರಣಿಯೊಂದಿಗೆ ಸಂಬಂಧವಿಲ್ಲ ಎಲ್ಲಾ ಮುಸಲ್ಮಾನರು ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿ ‘ಪಿ.ಎಫ್.ಐ.’ಯ ಅತೀರೇಕದ ಸಕ್ರಿಯತೆಯು ಇಷ್ಟವಾಗುವುದಿಲ್ಲ ಅಂತಹವರವರೆಗೆ ನಾವು ತಲುಪಬೇಕಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದಾರೆ. ಸರಕಾರವು ‘ಪಿ.ಎಫ್.ಐ.’ಯ ಮೇಲೆ ನಿಷೇಧವನ್ನು ಹೇರಬೇಕು ಎಂದು ಸಂಘದ ಬಹಳಷ್ಟು ಜನರ ಅಭಿಪ್ರಾಯವಾಗಿದೆ.
3. ಈ ಮುಖಂಡರು ತಮ್ಮ ಮಾತನ್ನು ಮುಂದುವರಿಸುತ್ತಾ, ಕರ್ನಾಟಕದಲ್ಲಿ ನಮಗೆ ಬಹಳಷ್ಟು ಒಳ್ಳೆಯ ಸಂಪರ್ಕಿಸುವ ವ್ಯವಸ್ಥೆಗಳಿವೆ, ತೆಲಂಗಾಣದಲ್ಲಿಯೂ ನಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡುತ್ತಿದ್ದೇವೆ. ನಾವು ಕೇರಳದಲ್ಲಿಯು ಹೋರಾಡುತ್ತಿದ್ದೇವೆ; ಆದರೆ ‘ಪಿ.ಎಫ್.ಐ’ಯ ಮೇಲೆ ಎಡಪಂಥಿಯ ಪ್ರಭಾವವು ಯಾವಾಗಲೂ ಇದೆ. ಆಂಧ್ರಪ್ರದೇಶದಲ್ಲಿ ತೀರದ ಭಾಗಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ನಮಗೆ ತಮಿಳುನಾಡುನಲ್ಲಿಯು ನಮ್ಮ ಪ್ರಭಾವ ಹೆಚ್ಚಿಸುವುದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ದೇಶದೆಲ್ಲೆಡೆ 33 ಲಕ್ಷಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಎಂದು ಹೇಳಿದರು.