`ದ ಕಶ್ಮೀರ ಫೈಲ್ಸ್’ ನ `ಭಾಗ-2′ ಮಾಡಿ !

ಜಿನಾ ಆಖಾಡದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರಾನಂದ ಗಿರಿಯವರ ಮನವಿ !

ಜಿನಾ ಆಖಾಡದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರಾನಂದ ಗಿರಿ (ಬಲ)

ರುಡಕಿ(ಉತ್ತರಾಖಂಡ) – `ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರವು ಕಾಶ್ಮೀರದಲ್ಲಾದ ಆತ್ಯಾಚಾರದ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಇದರ `ಭಾಗ-2′ ಮಾಡಿ, ಅದೇ ರೀತಿ ಭಾರತದ ವಿಭಜನೆಯನ್ನು ಆಧರಿಸಿ ಚಲನಚಿತ್ರ ಮಾಡಬೇಕು, ಎಂದು ಜುನಾ ಆಖಾಡದ ಮಹಾಮಂಡಲೇಶ್ವರದಲ್ಲಿ ಸ್ವಾಮಿ ಯತೀಂದ್ರಾನಂದ ಗಿರಿಯವರು ಹೇಳಿದ್ದಾರೆ. `ಕೇಂದ್ರ ಸರಕಾರದ ದಿಟ್ಟ ನಿರ್ಧಾರ ಶ್ಲಾಘನೀಯವಾಗಿದೆ. ಭಾರತದ ಮೋದಿ ಸರಕಾರದಿಂದಲೇ `ದ ಕಶ್ಮೀರ ಫೈಲ್ಸ್’ನಂತಹ ಚಿತ್ರಗಳು ಬಿಡುಗಡೆಯಾಯಿತು ಮತ್ತು ಸತ್ಯವು ಭಾರತದ ಜನರಿಗೆ ಮುಂದೆ ಬರಲು ಸಾಧ್ಯವಾಯಿತು’, ಎಂದು ಅವರು ಹೇಳಿದರು.

150 ಸಾಧು ಮತ್ತು ಸಂತರಿಗೆ ಚಲನಚಿತ್ರದ ವಿಶೇಷ ಪ್ರದರ್ಶನ

ಇಲ್ಲಿನ ನಿಲಮ ಚಿತ್ರಮಂದಿರದಲ್ಲಿ ಶ್ರೀಪಂಚ ದಶನಮ್ ಜುನಾ ಆಖಾಡದ ಮಹಾ ಮಂಡಲೇಶ್ವರ ಮತ್ತು ಜೀವನದೀಪ ಆಶ್ರಮ ರುಡಕಿಯ ಪೀಠಾಧಿಶ್ವರ ಸ್ವಾಮಿ ಯತೀಂದ್ರಾನಂದ ಗಿರಿಯವರು ಸಾಧು, ಸಂತ ಮತ್ತು ಪತ್ರಕರ್ತರಿಗಾಗಿ ಚಲನಚಿತ್ರದ ಒಂದು ಪ್ರದರ್ಶನವನ್ನು ಕಾಯ್ದಿರಿಸಿದ್ದರು.