ಹಿಜಾಬ್ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರ ಹತ್ಯೆಯಾದರೆ ಅದಕ್ಕೆ ಸ್ವತಃ ಅವರೇ ಹೊಣೆಯಾಗುತ್ತಾರೆ ! (ಅಂತೆ)

ತಮಿಳುನಾಡಿನ ಇಸ್ಲಾಮಿಕ್ ಸಂಘಟನೆ ‘ತೌಹಿದ್ ಜಮಾತ್’ನ ಕಾರ್ಯಕರ್ತನ ಹೇಳಿಕೆ

ಪೋಲಿಸರಿಂದ ಇಲ್ಲಿಯವರೆಗೆ ಯಾವುದೇ ಕ್ರಮವಿಲ್ಲ !

ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರ ಕಳಘಮ(ದ್ರಾವಿಡ ಪ್ರಗತಿ ಸಂಘ) ಪಕ್ಷದ ಅಧಿಕಾರ ಇರುವದರಿಂದ ಇಂತಹ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ !

ನ್ಯಾಯಾಲಯದ ತೀರ್ಪು ಒಪ್ಪಿಗೆಯಾಗಲಿಲ್ಲ; ಆದ್ದರಿಂದ ೧೯೯೦ರಲ್ಲಿ ಕಾಶ್ಮೀರದಲ್ಲಿ ಜಿಹಾದಿ ಭಯೊತ್ಪಾದಕರಿಂದ ಹಿಂದೂ ನ್ಯಾಯಾಧೀಶರನ್ನು ಹತ್ಯೆ ಮಾಡಲಾಯಿತು. ಈಗಲೂ ಅದೇ ಜಿಹಾದಿ ಸಿದ್ಧಾಂತವನ್ನು ಪ್ರಸಾರ ಮಾಡಲಾಗುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಚೆನ್ನೈ (ತಮಿಳನಾಡು) – ಹಿಜಾಬ್ ಪ್ರಕರಣಗಳ ಕುರಿತು ತೀರ್ಪು ನೀಡಿದ ನ್ಯಾಯಾಧೀಶರ ಹತ್ಯೆಯಾದರೆ ಅದಕ್ಕಾಗಿ ಅವರು ಸ್ವತಃ ಹೊಣೆಗಾರರಾಗುತ್ತಾರೆ. ಭಾಜಪವು ನ್ಯಾಯಾಂಗವನ್ನು ಖರೀದಿಸಿದೆ. ನ್ಯಾಯಾಲಯದ ಆದೇಶ ಅಮಾನ್ಯವಾಗಿದೆ. ಅಮಿತ್ ಶಾ ಅವರ ಆದೇಶದ ಮೇರೆಗೆ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಇಂತಹ ನಿರ್ಧಾರಗಳನ್ನು ನೀಡುವ ನ್ಯಾಯಾಧೀಶರಿಗೆ ನಾಚಿಕೆಯಾಗಬೇಕು. ನ್ಯಾಯಾಧೀಶರು ಸಂವಿಧಾನದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕೆ ಹೊರತು ವೈಯಕ್ತಿಕ ವಿಚಾರಗಳಿಂದ ಅಲ್ಲ, ಎಂದು ತಮಿಳುನಾಡಿನ ‘ತೌಹಿದ್ ಜಮಾತ್’ ಸಂಘಟನೆಯ ಕಾರ್ಯಕರ್ತ ಕೋವೈ ಆರ್. ರಹಮತುಲ್ಲಾ ಹೇಳಿಕೆ ನೀಡಿದರು. ತೌಹಿದ್ ಜಮಾತ್‌ನ ಸಂಘಟನೆಯು ತಮಿಳುನಾಡಿದ ಮಧುರೈಯಲ್ಲಿ ಅಯೋಜನೆ ಮಾಡಿದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹೇಳಿಕೆಯ ಬಗೆಗಿನ ವಿಡಿಯೊ ‘ಇಂದೂ ಮಕ್ಕಲ್’ ಹೆಸರಿನ ಟ್ವಿಟರ್ ಖಾತೆಯ ಮೂಲಕ ಪ್ರಸಾರ ಮಾಡಲಾಯಿತು. ಇಂದೂ ಮಕ್ಕಲ್‌ವು ತಮಿಳುನಾಡು ಪೋಲಿಸರ ಗಮನ ಸೆಳೆದಿದ್ದು ‘ಪೋಲಿಸರು ಶಾಂತವಾಗಿ ಕುಳಿತು ಕೇವಲ ನಾಟಕ ನೊಡುವರಿದ್ದಾರೇನು ?’ ಎಂದು ಪ್ರಶ್ನೆ ಕೇಳಿದ್ದಾರೆ.

‘ಮುಸಲ್ಮಾನರ ಮೇಲೆ ದಾಳಿ ಮಾಡಿದರೆ, ಮೈದಾನದಲ್ಲಿಯೇ ಭೇಟಿ !’(ಅಂತೆ)

ಈ ವೀಡಿಯೊದಲ್ಲಿ ರಹಮತುಲ್ಲಾ ಅವರು, ಸಾಧುಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು; ಆದರೆ ಮುಸ್ಲಿಂ ಹುಡುಗಿಯರು ಬುರ್ಖಾ ಧರಿಸುಂತಿಲ್ಲ. ನೀವು ಮುಸ್ಲಿಮರ ಮೇಲೆ ದಾಳಿ ಮಾಡಿದರೆ, ನಾವು ಮೈದಾನದಲ್ಲಿ ಭೇಟಿಯಾಗುವಾ, ಹೀಗೆ ನೇರ ಬೆದರಿಕೆಯನ್ನೊಡ್ಡಿದ್ದಾರೆ.

‘ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ನಿಮ್ಮ ನಾಶವಾಗುವುದು !’ (ಅಂತೆ)

ರಹಮತುಲ್ಲಾ ತಮ್ಮ ಮಾತನ್ನು ಮುಂದುವರೆಸುತ್ತಾ, ನಾವು ಮೋದಿ, ಯೋಗಿ ಅಥವಾ ಅಮಿತ ಶಹಾ ಇವರನ್ನಲ್ಲ ಬದಲಾಗಿ ಕೇವಲ ಅಲ್ಲಾಹನನ್ನು ಹೆದರುತ್ತೇವೆ. ನಮ್ಮ ತಾಳ್ಮೆಯ ಪರೀಕ್ಷೆ ತೆಗೆದುಕೊಳ್ಳದಿರಿ. ಒಂದುವೇಳೆ ನಮ್ಮ ತಾಳ್ಮೆ ಕೆಟ್ಟರೆ, ನಿಮ್ಮ ವಿನಾಶ ಆಗುವುದು. ಎಂದು ಆತ ಬೆದರಿಕೆ ನೀಡಿದ.