ಅಮರೋಹಾ (ಉತ್ತರಪ್ರದೇಶ) ಇಲ್ಲಿ ನಮಾಜ್‌ನ ಸಮಯ ಆಗುತ್ತಿದ್ದಂತೆ ಬಣ್ಣದಾಟ ಆಡುವರ ಮೇಲೆ ಕಲ್ಲುತೂರಾಟ

ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಬ್ಬಗಳನ್ನು ಆಚರಿಸುವಾಗ ಮತಾಂಧರಿಂದ ಹಿಂದುಗಳ ಮೇಲೆ ಕಲ್ಲುತೂರಾಟ ಮಾಡುವ ಧೈರ್ಯ ತೋರುತ್ತಾರೆ, ಇದು ಹಿಂದುಗಳಿಗೆ ಅಪೇಕ್ಷಿತವಾಗಿಲ್ಲ ! ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು

ಅಮರೋಹಾ (ಉತ್ತರಪ್ರದೇಶ) – ಇಲ್ಲಿ ಮಾರ್ಚ್ ೧೮ ರಂದು ಹೋಳಿಯ ಸಮಯದಲ್ಲಿ ‘ಡಿಜೆ’ಯಲ್ಲಿ ಹಾಡನ್ನು ಹಾಕಿ ಬಣ್ಣದ ಆಟ ಆಡುವಾಗ ಮತಾಂಧರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಮಾಜ್ ಸಮಯ ಆಗಿರುವುದರಿಂದ ‘ಡಿಜೆ’ಯಲ್ಲಿ ಹಾಕಿದ್ದರಿಂದ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕಲ್ಲು ತೂರಾಟ ಮಾಡುತ್ತಿರುವ ೩ ಜನರನ್ನು ಬಂಧಿಸಿದ್ದಾರೆ ಹಾಗೂ ಕೆಲವರು ಪರಾರಿಯಾಗಿದ್ದಾರೆ. ಪೊಲೀಸರ ಕೈಗೆ ಸಿಕ್ಕಿರುವ ಚಿತ್ರೀಕರಣದ ಆಧಾರದ ಮೇಲೆ ಪರಾರಿಯಾಗಿರುವವರನ್ನು ಗುರುತಿಸಿ ಹುಡುಕುತ್ತಿದ್ದಾರೆ. ಕಲ್ಲು ತೂರಾಟದಲ್ಲಿ ೨ ಗಾಯಗೊಂಡಿದ್ದಾರೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.

ಆ ಸ್ಥಳದಲ್ಲಿ ಹಿಂದೂ ದೇವಸ್ಥಾನ ಮತ್ತು ಧರ್ಮ ಶಾಲೆ ಇದೆ ಹಾಗೂ ಸ್ವಲ್ಪ ದೂರದಲ್ಲಿ ಮಸೀದಿ ಇದೆ. ಮಧ್ಯಾಹ್ನ ಸುಮಾರು ಒಂದುವರೆ ಸಮಯದಲ್ಲಿ ನಮಾಜ್ ಸಮಯ ಆಗಿತ್ತು. ಆ ಸಮಯದಲ್ಲಿ ಡಿಜೆ ಹಾಕಿ ಹಿಂದೂಗಳು ಬಣ್ಣದ ಆಟ ಆಡುತ್ತಿದ್ದರು. ಆಗ ಮುಸಲ್ಮಾನರು ಡಿಜೆ ನಿಲ್ಲಿಸಲು ಹೇಳಿದರು; ಆದರೆ ಬಣ್ಣ ಆಡುವ ಹಿಂದೂಗಳು ನಿರಾಕರಿಸಿದರು. ಆದ್ದರಿಂದ ಎರಡು ಗುಂಪಿನಲ್ಲಿ ಹೊಡೆದಾಟ ನಡೆಯಿತು. ನಂತರ ಮತಾಂಧರು ಮನೆಯ ಛಾವಣಿಯಿಂದ ಕಲ್ಲು ತೂರಾಟ ನಡೆಸಿದರು.