ಕಳೆದ ವರ್ಷವಿಡಿ ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 175 ಉಗ್ರರನ್ನು ಹತ್ಯೆಗೈದಿದ್ದಾರೆ !

ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !- ಸಂಪಾದಕರು 

ನವದೆಹಲಿ – ಕೇಂದ್ರೀಯ ಮೀಸಲು ಪೊಲೀಸ್ ಪಡೆಯು ಮಾರ್ಚ್ 1, 2021 ರಿಂದ ಮಾರ್ಚ್ 16, 2022 ಈ ವರ್ಷವಿಡಿ ಜಮ್ಮು-ಕಾಶ್ಮೀರದಲ್ಲಿ 175 ಉಗ್ರರನ್ನು ಹತ್ಯೆಗೈದರೇ 183 ಜನರನ್ನು ವಶಪಡಿಸಿಕೊಂಡಿದ್ದಾರೆ. ಎಂದು ಈ ಪಡೆಯ ಮಹಾಸಂಚಾಲಕರ ಕುಲದೀಪ ಸಿಂಹ ಇವರು ಮಾಹಿತಿ ನೀಡಿದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 19 ಮಾವೋವಾದಿಗಳನ್ನು ಹತ್ಯೆಗೈದಿದ್ದಾರೆ ಹಾಗೂ ಕಮ್ಯುನಿಸ್ಟ ಕಟ್ಟರವಾದಿ ಸಂಘಟನೆಗಳಲ್ಲಿನ 699 ಜನರನ್ನು ಬೇರೆಬೇರೆ ಕಾರ್ಯಾಚರಣೆಗಳಲ್ಲಿ ಈ ಒಂದು ವರ್ಷದಲ್ಲಿ ಬಂಧಿಸಲಾಗಿದೆ ಎಂದೂ ಸಹ ಕುಲದೀಪ ಸಿಂಹ ಅವರು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ 370 ಕಲಂ ರದ್ದುಪಡಿಸಿದ ನಂತರ ಕಲ್ಲು ತೂರಾಟದ ಘಟನೆ ನಿಂತುಹೋಗಿದೆ. ನೆರೆಯ ದೇಶಗಳಿಂದ ನಡೆಸುವ ಉಗ್ರರ ದಾಳಿ ಮತ್ತು ನುಸುಳುವಿಕೆಯ ಪ್ರಮಾಣ ಕಡಿಮೆಯಾಗಿದೆ. ಎಂದು ಸಹ ಕುಲದೀಪ ಸಿಂಹ ಇವರು ಮಾಹಿತಿ ನೀಡಿದರು.