ದೇವಸ್ಥಾನದ ಕೆಲವು ಭಾಗದ ಮೇಲೆ ಮುಸಲ್ಮಾನರ ಹಕ್ಕು ಹೇಳಿದ್ದರಿಂದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ !ಕೆಲವು ದಿನಗಳ ಹಿಂದೆ ಹಿಂದೂ ಯುವಕ ದೇವಸ್ಥಾನದ ಬೀಗ ಒಡೆದಿದ್ದ ! |
* ಹಿಂದೂಗಳ ದೇವಸ್ಥಾನದ ಸಂದರ್ಭದಲ್ಲಿನ ಮೊಕದ್ದಮೆ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಯುತ್ತಿದ್ದರೆ ಜನರಿಗೆ ನ್ಯಾಯ ಹೇಗೆ ದೋರಕುವುದು ? ಪ್ರಜಾಪ್ರಭುತ್ವದಲ್ಲಿ ಇಂತಹ ನ್ಯಾಯ ವ್ಯವಸ್ಥೆ ಅಪೇಕ್ಷಿತವಿಲ್ಲ ! -ಸಂಪಾದಕರು
ಭಿಲವಾಡಾ (ರಾಜಸ್ಥಾನ) – ಇಲ್ಲಿಯ 45 ವರ್ಷಗಳ ಕಾಲ ಮುಚ್ಚಿದ್ದ ಶ್ರೀ ದೇವನಾರಾಯಣ ದೇವಸ್ಥಾನವನ್ನು ತೆರೆಯಬೇಕು ಹಾಗೂ ಅಲ್ಲಿ ಪೂಜೆ ಮಾಡಲು ಅನುಮತಿ ಸಿಗಬೇಕು, ಎಂದು ಹಿಂದೂಗಳಿಂದ ಒತ್ತಾಯಿಸಲಾಗಿದೆ. ಇದಕ್ಕಾಗಿ ಮಾರ್ಚ್ 14 ರಂದು 17 ಕಿಲೋಮೀಟರ್ ಉದ್ದದ ಮೆರವಣಿಗೆ ನಡೆಸಲಾಯಿತು. ನಂತರ ಸರಕಾರಕ್ಕೆ ಮನವಿ ನೀಡಲಾಯಿತು. ಈ ಮೆರವಣಿಗೆಯ ನೇತೃತ್ವ ಸವಾಯಿ ಬೋಜ ಮಹಾಂತ ಸುರೇಶದಾಸ, ನೀಲಕಂಠ ಮಹಾದೇವ ದೇವಸ್ಥಾನದ ಮಹಂತ ದೀಪಕಪುರಿ, ಮಾಲಾಸೇರಿಯ ಅರ್ಚಕರಾದ ಹೇಮರಾಜ ಪೊಸವಾಲ ಮತ್ತು ದೇವನಾರಾಯಣ ಸಂಘರ್ಷ ಸಮಿತಿಯ ಸಂಯೋಜಕ ಉದಯಲಾಲ ಭಡಾಣಾ ಇವರು ವಹಿಸಿದ್ದರು. ಈ ಮೆರವಣಿಗೆ ಮೊದಲು ಅಂದರೆ, ಮಾರ್ಚ್ 11 ರಂದು ಗೋಪಾಲಸಿಂಹ ಗುರ್ಜರ್ ಬಸ್ಸಿ ಎಂಬ ಒಬ್ಬ ಯುವಕನು ಈ ದೇವಸ್ಥಾನದ ಬೀಗ ಒಡೆದಿದ್ದನು. ಅದರ ನಂತರ ಅವನ ವಿರುದ್ಧ ದೂರು ದಾಖಲಿಸಲಾಗಿತ್ತು.
ಏನಿದು ಪ್ರಕರಣ?
1977 ರಲ್ಲಿ ಈ ದೇವಸ್ಥಾನದ ಭೂಮಿ ವಿವಾದಗಳಿಂದ ಕೂಡಿದ್ದರಿಂದ ಈ ದೇವಸ್ಥಾನವನ್ನು ನ್ಯಾಯಾಲಯದಿಂದ ಮುಚ್ಚಲಾಗಿತ್ತು. ಈ ವಿಷಯವಾಗಿ ಮೊಕದ್ದಮೆ ನಡೆಯುತ್ತಿತ್ತು. ಪೊಲೀಸರ ಹೇಳಿಕೆಯ ಪ್ರಕಾರ, ಈ ದೇವಸ್ಥಾನದ ಭೂಮಿಯ ಕೆಲವು ಭಾಗ ಮುಸಲ್ಮಾನರು ಅವರ ಹಕ್ಕಿದೆ ಎಂದು ಹೇಳಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.