ಹಿಜಾಬ್ ನಿಷೇಧದ ತೀರ್ಪು, ಸಂವಿಧಾನದ ಜಯ ! – ಶ್ರೀ. ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ

ಶ್ರೀ ಪ್ರಮೋದ ಮುತಾಲಿಕ್

ಬೆಂಗಳೂರು – ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪನ್ನು ಹಿಂದುತ್ವನಿಷ್ಠ ಸಂಘಟನೆ `ಶ್ರೀರಾಮ ಸೇನೆ’ಯ ಸ್ಥಾಪಕ-ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಸ್ವಾಗತಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಜಾಬ್ ನಿಷೇಧದ ತೀರ್ಪು, ಸಂವಿಧಾನದ ವಿಜಯವಾಗಿದೆ. ಹಿಜಾಬ್ ಸಮವಸ್ತ್ರದ ಭಾಗವಾಗಲು ಸಾಧ್ಯವಿಲ್ಲ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಇತ್ಯಾದಿಗಳು ಇರಬಾರದು ಎಂಬ ಭಾವನೆ ಸಾಮಾನ್ಯರಲ್ಲಿತ್ತು. ಈ ಇಸ್ಲಾಂವಾದಿಗಳ ತಲೆಯಲ್ಲಿ ಹೇಗೆ ಹೊಕ್ಕಿತೋ ಗೊತ್ತಿಲ್ಲ. ಈ ರೀತಿ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಅಡೆತಡೆ ನಿರ್ಮಾಣಮಾಡುವ `ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಮತ್ತು `ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಈ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಭಯೋತ್ಪಾದನೆಯ ಆರೋಪ ಹೊತ್ತಿರುವ ಸಂಘಟನೆಯ ಜೊತೆಗೆ ಸಂಬಂಧಪಟ್ಟ ಸಂಘಟನೆಗಳು ಕಾರಣವಾಗಿದೆ.” ಎಂದು ಹೇಳಿದರು.

ಶ್ರೀ. ಮುತಾಲಿಕ್ ತಮ್ಮ ಮಾತನ್ನು ಮುಂದುವರೆಸುತ್ತಾ, ಈ ತೀರ್ಪು ಮುಸಲ್ಮಾನರು ಪಾಲಿಸಬೇಕು. ಕಳೆದ ತಿಂಗಳಿನಲ್ಲಿ ಶಾಲೆ-ಮಹಾವಿದ್ಯಾಲಯಗಳಲ್ಲಿ ಹಿಜಾಬ ನಿಷೇಧದ ಮಧ್ಯಂತರ ಆದೇಶದಿಂದ ವಿದ್ಯಾರ್ಥಿ, ಪೋಷಕರು ಮತ್ತು ಮೌಲ್ವಿ (ಇಸ್ಲಾಮೀ ಧಾರ್ಮಿಕ ನಾಯಕರು) ಇವರು ಪಾಳಿಸಲಿಲ್ಲ. ಈಗ ಮಾತ್ರ ಅವರು ಉಚ್ಚ ನ್ಯಾಯಾಲಯದ ಅಂತಿಮ ತೀರ್ಪಿನ ಪಾಲನೆ ಮಾಡಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಅವಕಾಶ ನೀಡಬೇಕು. ಈ ಆದೇಶಕ್ಕೆ ಯಾರಾದರೂ ಮುಂದಿನ ನ್ಯಾಯಾಲಯಕ್ಕೆ ಪ್ರಶ್ನಿಸಿದರೆ, ಅದು ಅವರು ನೀಡಬಹುದು; ಆದರೆ ವಿದ್ಯಾರ್ಥಿಗಳ ವಿದ್ಯಾ ಗ್ರಹಿಸಲು ಅಡೆತಡೆ ನಿರ್ಮಾಣ ಮಾಡಬಾರದು, ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಹೇಳಿದರು.