ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಿಲ್ಲ ! (ಅಂತೆ) – ಸುಪ್ರಿಯಾ ಸುಳೆಯವರಿಂದ ಲೋಕಸಭೆಯಲ್ಲಿ ಟೀಕೆ

ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳಿಗಾಗಿ ಏನನ್ನೂ ಮಾಡಿಲ್ಲ, ಎಂದು ಹೇಳುವ ರಾಷ್ಟ್ರವಾದಿ ಕಾಂಗ್ರೇಸನ ಸುಪ್ರಿಯಾ ಸುಳೆಯವರು ಅವರ ಪಕ್ಷವು ಕಾಶ್ಮೀರಿ ಹಿಂದೂಗಳಿಗಾಗಿ ಇಷ್ಟು ವರ್ಷಗಳಲ್ಲಿ ಯಾಕೆ ಧ್ವನಿ ಎತ್ತಲಿಲ್ಲ?, ಎಂಬುದರ ಉತ್ತರವನ್ನು ಮೊದಲು ನೀಡಲಿ ! – ಸಂಪಾದಕರು

ನವ ದೆಹಲಿ – ನಿಮಗೆ ಕಾಶ್ಮೀರಿ ಪಂಡಿತರ ಬಗ್ಗೆ ಕೆಟ್ಟದೆನಿಸುತ್ತಿದ್ದರೇ ಅವರ ಪುನರ್ವಸತಿಗಾಗಿ ಬಜೆಟನಲ್ಲಿ ಸೇರಿಸಿರಿ ಅವರಿಗಾಗಿ ಬೇರೆ ವ್ಯವಸ್ಥೆಯನ್ನು ಮಾಡಿರಿ. ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಲಿಲ್ಲ. ಯಾವಾಗಲೂ ಕಳೆದ ೬೦ ವರ್ಷಗಳಲ್ಲಿ ಅವರ ಮೇಲೆ ಎಷ್ಟು ಅನ್ಯಾಯವಾಗಿದೆ, ಎಂದು ಹೇಳುವುದು ಅವಶ್ಯಕವಾಗಿಲ್ಲ. ನಿಮಗೂ ಸಹ ಅಧಿಕಾರಕ್ಕೆ ಬಂದು ೭ವರ್ಷಗಳಾಗಿದೆ. ಅದನ್ನು ಬಿಟ್ಟು ನೀವು ಅವರಿಗೆ ಏಕೆ ಸಹಾಯ ಮಾಡುತ್ತಿಲ್ಲ ? ಯಾವುದಾದರೊಂದು ಮಗುವು ಅಪೌಷ್ಟಿಕತೆಯಲ್ಲಿದ್ದರೆ ಅವನ ತಾಯಿ ಅದಕ್ಕೆ ೭ ವರ್ಷಗಳಲ್ಲಿ ಒಳ್ಳೆಯ ತಿನ್ನಲು ನೀಡಬಹುದು ಹಾಗೂ ಅದನ್ನು ಆರೋಗ್ಯವಂತವಾಗಿ ಮಾಡುವುದು, ‘ನನ್ನ ಮಗು ಅಪೌಷ್ಟಿಕತೆಯಿಂದ ಇದೆ’, ಎಂದು ಹೇಳುತ್ತಾ ತಿರುಗಾಡುವುದಿಲ್ಲ. ಎಂದು ರಾಷ್ಟ್ರವಾದಿ ಕಾಂಗ್ರೇಸಿನ ಶಾಸಕಿ ಸುಪ್ರಿಯಾ ಸುಳೆ ಇವರು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಸಂದರ್ಭದ ಬಜೆಟ್‌ನ ಚರ್ಚೆಯ ಸಮಯದಲ್ಲಿ ಕೇಂದ್ರ ಸರಕಾರಕ್ಕೆ ಟೀಕಿಸಿದ್ದಾರೆ. (ಅಪೌಷ್ಟಿಕ ಮಗು ಸುದೃಡ ಮಾಡುವುದು ಇದು ಸರಕಾರದ ಕೆಲಸವಾಗಿದೆ; ಆದರೆ ಯಾರಿಂದ ಅದು ಅಪೌಷ್ಟಿಕವಾಗಿದೆ ಅವರ ಮೇಲೆಯು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸುಳೆಯವರು ಬೇಕೆಂದೆ ಮೌನವಾಗಿದ್ದಾರೆ, ಎಂಬುದನ್ನು ಗಮನದಲ್ಲಿಡಿ – ಸಂಪಾದಕರು)

(ಸೌಜನ್ಯ : Times of India)

ಸುಪ್ರಿಯಾ ಸುಳೆಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೇಂದ್ರ ಸರಕಾರವು ಕಾಶ್ಮೀರಿ ಜನರಿಗೆ ಸಾವಿರಾರು ಕೆಲಸಗಳ ಆಶ್ವಾಸನೆಯನ್ನು ನೀಡಿತ್ತು; ಆದರೆ ಅದರ ಬಗ್ಗೆ ಏನೂ ಆಗಿಲ್ಲ. ಕಾಶ್ಮೀರಿ ಪಂಡಿತರಿಗಾಗಿ ಸರಕಾರ ಏನು ಮಾಡಲಿದೆ, ಇದನ್ನು ಸರಕಾರವು ಹೇಳಬೇಕು ಹಾಗೂ ಅವರ ಭವಿಷ್ಯದ ಬಗ್ಗೆ ಚರ್ಚೆಯನ್ನು ಮಾಡಬೇಕು. ಭಾಜಪದ ಸದಸ್ಯರು ಕೇಂದ್ರಾಡಳಿತ ಪ್ರದೇಶಕ್ಕೆ ಹೋಗಿ ನಿಜಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.