‘ದ ಕಶ್ಮೀರ ಫಾಯಿಲ್ಸ್’ನ ನಿರ್ಮಾಪಕರು ಹಾಗೂ ನಿರ್ದೇಶಕರು ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾದರು !

ನವದೆಹಲಿ – ಕಾಶ್ಮೀರಿ ಹಿಂದೂಗಳ ವಂಶನಾಶದ ಮೇಲಾಧಾರಿತ ‘ದ ಕಶ್ಮೀರ ಫಾಯಿಲ್ಸ್‌’ ಎಂಬ ಚಲನಚಿತ್ರದ ನಿರ್ಮಾಪಕರಾದ ಅಭಿಷೇಕ ಅಗ್ರವಾಲ, ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ಸಮಯದಲ್ಲಿ ಪ್ರಧಾನಮಂತ್ರಿ ಮೋದಿಯವರು ಅವರಿಗೆ ಶುಭಾಶಯವನ್ನು ಕೋರಿದರು.

೧. ಈ ವಿಷಯದಲ್ಲಿ ಅಭಿಷೇಕ ಅಗ್ರವಾಲರವರು ಟ್ವೀಟ್‌ ಮಾಡಿ ಈ ಭೇಟಿಯ ಚಿತ್ರವನ್ನು ಪ್ರಸಾರ ಮಾಡಿ ‘ಪ್ರಧಾನಮಂತ್ರಿ ಮೋದಿಯವರ ಭೇಟಿಯು ಆಹ್ಲಾದಕರವಾಗಿತ್ತು. ಅವರು ‘ದ ಕಶ್ಮೀರ ಫಾಯಿಲ್ಸ್’ಗಾಗಿ ಮಾಡಿದ ಉತ್ಸಾಹವರ್ಧಕ ಉದ್ಗಾರಗಳು ನಮಗೆ ವಿಶೇಷವಾಗಿದ್ದವು. ಇತರ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಚಲನಚಿತ್ರವನ್ನು ನಿರ್ಮಿಸುವಾಗ ಆದಷ್ಟು ಹೆಮ್ಮೆ ಅನಿಸಿರಲಿಲ್ಲ’ ಎಂದು ಬರೆದಿದ್ದರು.

೨. ಆಗ್ರವಾಲರವರ ಈ ಟ್ವೀಟ್‌ ಮೇಲೆ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ‘ನನಗೆ ಅಭಿಷೇಕರವರು ಭಾರತದಲ್ಲಿನ ಅತ್ಯಂತ ಪ್ರಚೋದನಕಾರಿ ಚಲನಚಿತ್ರವನ್ನು ನಿರ್ಮಿಸುವ ಧೈರ್ಯ ತೋರಿಸಿರುವುದರ ಬಗ್ಗೆ ಆನಂದವಿದೆ. ‘ದ ಕಶ್ಮೀರ ಫಾಯಿಲ್ಸ್‌’ನ ಪ್ರದರ್ಶನವು ಅಮೇರಿಕದಲ್ಲಿ ನಡೆಯುವುದು, ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಜಗತ್ತಿನ ಮನಸ್ಸು ಬದಲಾಗುತ್ತಿರುವುದರ ದರ್ಶಕವಾಗಿದೆ’ ಎಂದು ಬರೆದರು.