ಲೋಣಿ(ಉತ್ತರಪ್ರದೇಶ)ಯಲ್ಲಿನ ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರವರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಗಾಝಿಯಾಬಾದ (ಉತ್ತರಪ್ರದೇಶ) – ಅನುಮತಿಯ ಹೊರತು ಲೋಣಿಯಲ್ಲಿ ಒಂದೇ ಒಂದು ಮಾಂಸ ಮಾರಾಟದ ಅಂಗಡಿಗಳು ಹಾಗೂ ಉಪಹಾರಗೃಹಗಳು ಕಾಣಿಸಬಾರದು; ಏಕೆಂದರೆ ಇಲ್ಲಿ ರಾಮರಾಜ್ಯವಿದೆ, ಎಂದು ಲೋಣಿಯಲ್ಲಿನ ಭಾಜಪದ ಹೊಸದಾಗಿ ಆಯ್ಕೆಯಾದ ಶಾಸಕರಾದ ನಂದಕಿಶೋರ ಗರ್ಜರರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
#BJP‘s #Loni MLA triggers row, calls for blanket ban on meat shopshttps://t.co/fLAC7jkPom
— India TV (@indiatvnews) March 12, 2022
೧. ಶಾಸಕರಾದ ಗುರ್ಜರರವರು ಮಾತನ್ನು ಮುಂದುವರಿಸುತ್ತ, ಅಮಲು ಪದಾರ್ಥಗಳ ಧಂದೆ ಮತ್ತು ತಪ್ಪುಆಚರಣೆಗಳು ಆಗಬಾರದು, ಹಾಗೆಯೇ ಜನರಿಗೆ ಅಭಿಮಾನವೆನಿಸುವ ಕಾನೂನು ಮತ್ತು ಸುವ್ಯವಸ್ಥೆಯಿರಬೇಕು. ಕಳೆದ ೫ ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆಯು ಇದ್ದ ಹಾಗೆಯೇ ಇರಬೇಕು. ಕೆಲವು ಅಧಿಕಾರಿಗಳು ಹೆಸರು ಕೆಡಿಸುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರು ಜಾಗರೂಕತೆಯಿಂದ ಇರಬೇಕು, ಎಂದು ಎಚ್ಚರಿಕೆ ನೀಡಿದರು.
೨. ಲೋಣಿಯಲ್ಲಿನ ಭೂ-ಕಬಳಿಕೆಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡುವುದಾಗಿ ಅವರು ಹೇಳಿದರು. ಅದರೊಂದಿಗೆ ‘ಲೋಣಿಯಲ್ಲಿ ರಾಮರಾಜ್ಯ ಬೇಕಿದೆ. ಆದುದರಿಂದ ಹಾಲು ತುಪ್ಪ ತಿನ್ನಿ ಮತ್ತು ಎಚ್ಚರಿಕೆಯಿಂದಿರಿ’ ಎಂದು ಅವರು ಹೇಳಿದರು.