ಹಿಂದೂ ಜನಜಾಗೃತಿ ಸಮಿತಿಯಿಂದ `ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರ ಭೇಟಿ !

ಚಿತ್ರದಲ್ಲಿ ವಿವೇಕ ಅಗ್ನಿಹೋತ್ರಿ(ಬಲಬದಿ) ಇವರಿಗೆ ದೈನಿಕ `ಸನಾತನ ಪ್ರಭಾತ’ ಕುರಿತು ಮಾಹಿತಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪರಾಗ ಗೋಖಲೆ

ಪುಣೆ – ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಮಾಜದ ಮುಂದೆ ತರುವ `ದ ಕಾಶ್ಮೀರಿ ಫೈಲ್ಸ್’ ಈ ಚಲನಚಿತ್ರವು ಪುಣೆಯ ಕೋಥರೂಡನ ಸಿಟಿ ಪ್ರೈಡ ಚಿತ್ರಮಂದಿರದಲ್ಲಿ ಮಾರ್ಚ್ 11 ರಂದು `ಪ್ರೀ ಸ್ಕ್ರೀನಿಂಗ್’ (ಚಲನಚಿತ್ರ ಪ್ರದರ್ಶನದ ಮೊದಲು ಆಮಂತ್ರಿತ ಜನರಿಗೆ ಅದು ತೋರಿಸುವುದು) ಆಯಿತು. ಆ ಸಮಯದಲ್ಲಿ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕಿ ಮತ್ತು ನಾಯಕಿ ಪಲ್ಲವಿ ಜೋಷಿ ಹಾಗೂ ನಾಯಕ ದರ್ಶನ್ ಕುಮಾರ ಉಪಸ್ಥಿತರಿದ್ದರು. ಚಲನಚಿತ್ರದ ನಂತರ ಅವರು ಎಲ್ಲಾ ಉಪಸ್ಥಿತರ ಜೊತೆಗೆ ಸಂವಾದ ನಡೆಸಿದರು. ಈ ನಿಮಿತ್ತ ಚಲನಚಿತ್ರಕ್ಕೆ ಶುಭ ಹಾರೈಕೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪರಾಗ ಗೋಖಲೆ ಇವರು ವಿವೇಕ ಅಗ್ನಿಹೋತ್ರಿ ಇವರ ಜೊತೆ ಸೌಹಾರ್ದ ಭೇಟಿ ನೀಡಿದರು. ಆ ಸಮಯದಲ್ಲಿ ಶ್ರೀ. ಪರಾಗ ಗೋಖಲೆಯವರು ಹಿಂದೂ ಜನಜಾಗೃತಿ ಸಮಿತಿಯು ಕಾಶ್ಮೀರಿ ಹಿಂದೂಗಳ ಕುರಿತು ಮಾಡಿರುವ ಕಾರ್ಯ ಹಾಗೂ ಚಲನಚಿತ್ರವನ್ನು ದೈನಿಕ `ಸನಾತನ ಪ್ರಭಾತ’ವು ಹಿಂದುತ್ವದ ನಿಲುವಿಲ್ಲಿ ನೀಡಿರುವ ಪ್ರಸಿದ್ಧಿ, ಈ ಕುರಿತು ವಿವೇಕ ಅಗ್ನಿಹೋತ್ರಿ ಅವರಿಗೆ ಮಾಹಿತಿ ನೀಡಿದರು.