ಅಸ್ಸಾಮನಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಸಕ್ರಿಯ ! – ಹಿಮಂತ ಬಿಸ್ವ ಸರಮಾ, ಅಸ್ಸಾಂನ ಮುಖ್ಯಮಂತ್ರಿ

ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಅವರ ನಿರ್ಮಾಪಕರಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ನಾಶ ಮಾಡುವುದು ಅಗತ್ಯ !

ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳಾದರೂ ಕೂಡ ದೇಶವು ಜಿಹಾದಿ ಭಯೋತ್ಪಾದನೆಯಿಂದ ಟೊಳ್ಳಾಗಿರುವುದು, ಇದು ಇಲ್ಲಿಯವರೆಗಿನ ಎಲ್ಲ ಪಕ್ಷದ ಸರಕಾರಕ್ಕೆ ನಾಚಿಕೆಗೇಡು !

ಗೌಹಾಟಿ (ಅಸ್ಸಾಂ) – ಅಸ್ಸಾಂನಲ್ಲಿ ಇಗಲೂ ಸಹ ಹಲವಾರು ಭಯೋತ್ಪಾದಕರ ಗುಂಪುಗಳು ಸಕ್ರಿಯವಾಗಿದೆ. ಈ ಭಯೋತ್ಪಾದಕ ಗುಂಪುಗಳನ್ನು ನಿಷ್ಕ್ರಿಯಗೊಳಿಸಲು ರಾಜ್ಯ ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ಇತ್ತೀಚೆಗಷ್ಟೇ ಹೇಳಿದರು. ಆಸ್ಸಾಂ ಪೊಲೀಸರು ಕೆಲವು ದಿನಗಳ ಹಿಂದೆ ಭಾರತದ ಉಪಖಂಡದಲ್ಲಿ ಅಲ್ ಕಾಯದಾದೊಂದಿಗೆ ಸಂಪರ್ಕಹೊಂದಿರುವ ಬಾಂಗ್ಲಾದೇಶಿ ಜಿಹಾದಿ ಸಂಘಟನೆಯೊಂದಿಗೆ ಬಾಂಗ್ಲಾದೇಶಿ ನಾಗರಿಕರು ಸೇರಿದಂತೆ ೫ ಜನರನ್ನು ಹಿಂದೆಯಷ್ಟೇ ಬಂಧಿಸಿದ್ದರು.

ಮುಖ್ಯಮಂತ್ರಿ ಸರಮಾರವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಗೂಢಾಚಾರ ಮೂಲಗಳಿಂದ ಸಿಕ್ಕಿರುವ ಮಾಹಿತಿಯನುಸಾರವಾಗಿ ನಾವು ಅಸ್ಸಾಂನಲ್ಲಿ ಭಯೋತ್ಪಾದಕ ಕಾರ್ಯಾಚರಣೆಯ ವಿರುದ್ಧ ಕೆಲಸ ಮಾಡಲು ಒಂದು ವಿಶೇಷ ಶಾಖೆಯನ್ನು ಸ್ಥಾಪಿಸಿದ್ದೆವು. ಅಸ್ಸಾಂ ಪೊಲೀಸರ ವಶದಲ್ಲಿರುವ ಭಯೋತ್ಪಾದಕರ ವಿಚಾರಣೆಯ ಸಮಯದಲ್ಲಿ ಹೊಸ ಮಾಹಿತಿ ತಿಳಿದು ಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಅಸ್ಸಾಂನಲ್ಲಿ ಜಿಹಾದಿ ಭಯೋತ್ಪಾದಕರಿಂದ ದೊಡ್ಡ ಅಪಾಯ ನಿರ್ಮಾಣವಾಗಬಹುದು.” ಎಂದು ಹೇಳಿದರು.

ಸಾಂಧರ್ಭಿಕ ಚಿತ್ರ

ಆಸಾಂನ ಪೊಲೀಸ ಮಹಾಸಂಚಾಲಕ ಭಾಸಕರ ಜ್ಯೋತಿ ಮಹಂತಾರವರು ಮಾತನಾಡುತ್ತಾ, ವಶದಲ್ಲಿರುವ ಬಾಂಗ್ಲಾದೇಶದ ನಾಗರಿಕ ಸೈಫುಲ್ಲ ಇಸ್ಲಾಮ ಅಲಿಯಾಸ್ ಹಾರೂಣ ರಶೀದ ಈತ ಕಾನೂನುಬಾಹಿರವಾಗಿ ಭಾರತದೊಳಗೆ ನುಸುಳಿದ್ದ ಹಾಗೂ ಢಕಲಿಯಾಪಾರಾ ಮಸೀದಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಿದರು. (ಮದರಸಾಗಳ ನಿಜ ಸ್ವರೂಪವನ್ನು ತಿಳಿಯಿರಿ ! – ಸಂಪಾಕದರು)