ಹಿಂದು ಎಂದು ಸುಳ್ಳು ಹೇಳಿ ೪ ಹೆಣ್ಣು ಮಕ್ಕಳ ತಂದೆಯಾಗಿರುವ ಮಹಂಮದ ಖಾನ್‌ನಿಂದ ಅಪ್ರಾಪ್ತ ಹಿಂದು ಹುಡುಗಿಗೆ ಲೈಂಗಿಕ ಶೋಷಣೆ !

ಮಧ್ಯಪ್ರದೇಶದ ಭಿಂಡನಲ್ಲಿನ ಘಟನೆ !

ಮಧ್ಯಪ್ರದೇಶದಲ್ಲಿ ಲವ್ ಜಿಹಾದನ ಕಾಯಿದೆ ಇದ್ದೂ ಕೂಡ ಮತಾಂಧರು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡಿ ಅವರ ಜೀವನವನ್ನೇ ಧ್ವಂಸ ಮಾಡುತ್ತಾರೆ, ಇದು ಖೇಧಕರವಾಗಿದೆ ! ಇಂತಹ ಉದ್ಧಟತನ ಮತಾಂಧರಿಗೆ ಕಠಿಣ ಶಿಕ್ಷೆಯಾಗುವುದು ಅಗತ್ಯ !

ಭಿಂಡ (ಮಧ್ಯಪ್ರದೇಶ) – ಇಲ್ಲಿನ ಮಹಂಮದ ಖಾನ ಎಂಬ ಮತಾಂಧನು ಅವನ ಪರಿಚಯವನ್ನು ಮುಚ್ಚಿಟ್ಟು ಅಪ್ರಾಪ್ತ ಹಿಂದು ಹುಡುಗಿಯೊಂದಿಗೆ ಪರಿಚಯ ಮಾಡಿಕೊಂಡನು. ನಂತರ ವಿವಾಹದ ಆಸೆ ಒಡ್ಡಿ ಅಕೆಗೆ ಲೈಂಗಿಕ ಕಿರುಕುಳ ನೀಡಿದನು. ಮಹಂಮದ ಖಾನ್‌ನಿಗೆ ಮದುವೆಯಾಗಿದ್ದು ಆತ ೪ ಹೆಣ್ಣುಮಕ್ಕಳ ತಂದೆಯಾಗಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಗೆ ಪ್ರಕಾರ ೧೦ ತಿಂಗಳ ಹಿಂದೆ ಸಂಚಾರವಾಣಿಯ ಮೂಲಕ ಓರ್ವ ಹಿಂದು ಹುಡುಗಿಯು ಮಹಂಮದ ಖಾನ್‌ನ ಸಂಪರ್ಕಕ್ಕೆ ಬಂದಳು. ಅನಂತರ ಇಬ್ಬರ ಪರಿಚಯವಾಯಿತು. ಆ ಸಮಯದಲ್ಲಿ ಮಹಂಮದ ಖಾನ್‌ನು ತನ್ನ ಹೆಸರು ‘ನಿಶಾಂತ ಕುಮಾರ’ ಎಂದು ಹೇಳಿದನು. ಕೆಲವು ದಿನಗಳ ನಂತರ ಮಹಂದ ಖಾನ್‌ನು ಆ ಹುಡುಗಿಯನ್ನು ವಿವಾಹವಾಗುವ ವಚನ ನೀಡಿ ಅವಳಿಗೆ ಲೈಂಗಿಕ ಕಿರುಕುಳ ನೀಡಿದನು. ಅನಂತರ ಕೆಲವು ತಿಂಗಳ ಬಳಿಕ ಆ ಹುಡುಗಿಯು ಮಹಂಮದ ಖಾನ್‌ನ ಮತದಾನ ಗುರುತಿನ ಚೀಟಿಯನ್ನು ನೋಡಿದ ಬಳಿಕ ಅವಳಿಗೆ ಅವನ ನಿಜವಾದ ಹೆಸರು ತಿಳಿಯಿತು. ಸತ್ಯ ತಿಳಿದ ತಕ್ಷಣ ಆ ಹುಡುಗಿಯು ಮಹಂಮದ ಖಾನ್‌ನೊಂದಿಗೆ ಸಂಪರ್ಕವನ್ನು ಮುರಿದಳು. ಆ ಸಮಯದಲ್ಲಿ ಆತ ಹುಡುಗಿಯ ಮನೆಯಲ್ಲಿ ಗಲಾಟೆ ಮಾಡಿದನು. ಗಲಾಟೆಯ ಶಬ್ಧ ಕೇಳಿ ಅಕ್ಕಪಕ್ಕದ ಜನರು ಬಂದು ಮಹಂಮದ ಖಾನ್‌ನನ್ನು ಥಳಿಸಿದರು ಹಾಗೂ ಆತನನ್ನು ಪೊಲೀಸರಿಗೆ ಒಪ್ಪಿಸಿದರು.