೧. ಈ ಪರಿಸ್ಥಿತಿಯನ್ನು ಯಾರು ಮತ್ತು ಯಾವಾಗ ಬದಲಾಯಿಸುವರು ?
ದೇಶದಲ್ಲಿ ೩ ಕೋಟಿ ೬೦ ಲಕ್ಷ ಖಟ್ಲೆಗಳು ಬಾಕಿ ಇವೆ. ಇಷ್ಟು ಹೆಚ್ಚು ಸಂಖ್ಯೆಯಲ್ಲಿ ಬಾಕಿ ಇರುವ ಖಟ್ಲೆಗಳು ಮತ್ತು ನ್ಯಾಯಾಧೀಶರ ಕೊರತೆ ಇವು ನ್ಯಾಯದ ಮಾರ್ಗದಲ್ಲಿನ ದೊಡ್ಡ ಅಡಚಣೆಯಾಗಿದೆ, ಎಂದು ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಪ್ರತಿಪಾದಿಸಿದ್ದಾರೆ.
೨. ಭಾರತದಲ್ಲಿ ಹಿಜಾಬ್ ಮತ್ತು ಬುರ್ಖಾವನ್ನು ಯಾವಾಗ ನಿಷೇಧಿಸಲಾಗುವುದು ?
ಬಾಂಗ್ಲಾದೇಶದ ‘ಅದ್-ದಿನ್ ಸಕಿನಾ ಮೆಡಿಕಲ್ ಕಾಲೇಜ್ ಎಂಡ್ ಹಾಸ್ಪಿಟಲ್’ ಇದು ಅಲ್ಲಿ ಕಲಿಯುವ ಎಲ್ಲಾ ಧರ್ಮಗಳ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹಿಜಾಬ್ ಧರಿಸದಿದ್ದರೆ ಮಹಾವಿದ್ಯಾಲಯದಲ್ಲಿ ಪ್ರವೇಶ ನಿರಾಕರಿಸಲಿದೆ.
೩. ಈ ಪರಿಸ್ಥಿತಿಯನ್ನು ಭಾರತ ಯಾವಾಗ ಬದಲಾಯಿಸುವುದು ?
ಡಾಕ್ಟರ್ ಆಗಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ಉಕ್ರೇನ್‌ಗೆ ಹೋಗುತ್ತಿದ್ದಾರೆ, ಎಂದು ಉಕ್ರೇನ್‌ನಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ ನವೀನ್ ಅವರ ತಂದೆ ಶೇಖರಪ್ಪ ಜ್ಞಾನಗೌಡ ಇವರು ಆರೋಪಿಸಿದ್ದಾರೆ.
೪. ಇದುವರೆಗಿನ ಎಲ್ಲಾ ಪಕ್ಷಗಳಿಗೆ ಇದು ಲಜ್ಜಾಸ್ಪದ !
ಬಿಹಾರದ ೩೮ ಜಿಲ್ಲೆಗಳ ಪೈಕಿ ೩೧ ಜಿಲ್ಲೆಗಳಲ್ಲಿನ ಕುಡಿಯುವ ನೀರು ಯೋಗ್ಯವಿಲ್ಲ ಎಂದು ಒಂದು ವರದಿಯಲ್ಲಿ ಹೇಳಲಾಗಿದೆ. ಅನೇಕ ಪ್ರದೇಶಗಳಲ್ಲಿನ ನೀರಿನಲ್ಲಿ ವಿಷಕಾರಿ ಅಂಶಗಳು ಕಂಡು ಬಂದಿವೆ. ಕಲುಷಿತ ನೀರಿನಿಂದಾಗಿ ಚರ್ಮರೋಗ, ಮೂತ್ರಪಿಂಡದ ಕಾಯಿಲೆಗಳು ಮತ್ತು ಇತರ ಕಾಯಿಲೆಗಳಾಗುವ ಸಾಧ್ಯತೆ ಇದೆ.
೫. ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂ ಧರ್ಮದ ಮೇಲಾಗುವ ಆಘಾತಗಳನ್ನು ತಿಳಿಯಿರಿ !
ರಾಜಸ್ಥಾನದ ರೂಪಪುರಾದ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಶಿಕ್ಷಕಿ ನಿರ್ಮಲಾ ಕಾಮಡ ಅವರು ‘ಹಿಂದೂಯಿಸಮ್: ಧರ್ಮ ಯಾ (ಅಥವಾ) ಕಳಂಕ ?’ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಬಗ್ಗೆ ಪೋಷಕರು ವಿರೋಧಿಸಿದ ನಂತರ ಜಿಲ್ಲಾ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಲು ಆದೇಶ ನೀಡಿದ್ದಾರೆ.
೬. ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಕಳಂಕ ತರುತ್ತವೆ !
ಮಣಿಪುರದ ವಿಧಾನಸಭೆಯ ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಹಿಂಸಾಚಾರದ ಮೊದಲ ಘಟನೆಯು ಥೌಬಲ್ ಜಿಲ್ಲೆಯಲ್ಲಿ ಮತ್ತು ಎರಡನೆಯ ಘಟನೆಯು ಸೇನಾಪತಿ ಜಿಲ್ಲೆಯಲ್ಲಿ ನಡೆಯಿತು.
೭. ಮತಾಂಧ ಕ್ರೈಸ್ತರ ಧೈರ್ಯವನ್ನು ತಿಳಿಯಿರಿ !
ತಮಿಳುನಾಡಿನ ಶಂಕರನ್ ಕೋವಿಲ್‌ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.