ಮಾನವತೆಯ ದೃಷ್ಟಿಯಿಂದ ಯಾರು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ, ಅದು ಸರಿ; ಆದರೆ ಹಿಂದೂಗಳು ದೇವಾಲಯಕ್ಕಾಗಿ ಅರ್ಪಣೆ ನೀಡಿದ ಹಣ ದೇವಾಲಯಕ್ಕಾಗಿಯೇ ಖರ್ಚು ಮಾಡುವುದು ಅಗತ್ಯವಾಘಿದೆ. ಒಂದು ವೇಳೆ ಅದನ್ನು ಬೇರೆ ಕಾರ್ಯಕ್ಕಾಗಿ ಖರ್ಚು ಮಾಡಬೇಕಾದರೆ ಆ ಹಣವನ್ನು ಅರ್ಪಿಸಿದ ಹಿಂದೂಗಳ ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿದೆ, ಇಲ್ಲದಿದ್ದರೆ ಅದು ವಂಚನೆಯಾಗಬಹುದು !
ನವ ದೆಹಲಿ – ಕಥಾವಾಚಕ ಮೊರಾರಿ ಬಾಪೂರವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕಾಗಿ ನೀಡಿದ ಆಹ್ವಾನದಿಂದ ಅವರ ಟ್ರಸ್ಟ್‌ಗೆ ದೇಶವಿದೇಶದಿಂದ ೧೯ ಕೋಟಿ ರೂಪಾಯಿಗಳು ಸಂಗ್ರಹವಾಗಿದೆ. ಅವುಗಳ ಪೈಕಿ ೯ ಕೋಟಿ ರೂಪಾಯಿಗಳು ವಿದೇಶದಿಂದ ಸಿಕ್ಕಿದೆ. ತಾಂತ್ರಿಕ ಅಡಚಣೆಯಿಂದ ಆ ಮೊತ್ತವು ಭಾರತಕ್ಕೆ ಹಸ್ತಾಂತರ ಆಗಲಿಲ್ಲ. ಅದೇ ೯ ಕೋಟಿ ರೂಪಾಯಿಗಳಿಂದ ಮೊರಾರಿ ಬಾಪೂರವರು ೧ ಕೋಟಿ ೨೫ ಲಕ್ಷ ರೂಪಾಯಿಗಳನ್ನು ಉಕ್ರೇನನಲ್ಲಿ ಯುದ್ಧಗ್ರಸ್ತ ಜನರಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಪೂಣೆಯ ಸಮೀಪದಲ್ಲಿ ಲೊಣಾವಳಾದಲ್ಲಿ ರಾಮಕಥೆ ಹೇಳುವ ಸಮಯದಲ್ಲಿ ಅವರು ಈ ಘೋಷಣೆ ಮಾಡಿದರು. ಉಕ್ರೇನನಲ್ಲಿನ ಯುದ್ಧಪೀಡಿತ ಜನರನ್ನು ಹೊರಗೆ ತರಲು ಅಕ್ಕಪಕ್ಕದ ಪೊಲಂಡ, ಸ್ಲೊವ್ಹಾಕಿಯಾ ಹಾಗೂ ರೊಮಾನಿಯಾ ದೇಶಗಳಲ್ಲಿ ಕಾರ್ಯನಿರತವಾಗಿರುವ ಸಂಘಟನೆಗಳಿಗೆ ಈ ಮೊತ್ತವನ್ನು ನೀಡಲಾಗುವುದು ಎಂದು ಅವರು ಹೇಳಿದರು.
Kathakar Morari Bapu donates Rs 1.25 crore to Indians in Ukrainehttps://t.co/YLmaH2pjiF
— Express Gujarat (@ExpressGujarat) March 7, 2022