ಉಕ್ರೇನ್‍ನಿಂದ ಇವರಿಗೆ 11 ಸಾವಿರ ಭಾರತೀಯರು ಹಿಂತಿರುಗಿದ್ದಾರೆ

ನವದೆಹಲಿ – ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್‍ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ. ಈ 18 ವಿಮಾನದಿಂದ ಹಿಂತಿರುಗಿಬಂದ ಭಾರತೀಯರ ಸಂಖ್ಯೆ ಸರಾಸರಿ 4 ಸಾವಿರವಾಗಿದೆ. ಭಾರತ ಉಕ್ರೇನಿನ ನೆರೆ ದೇಶ ಇರುವ ರೊಮಾನಿಯ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲ್ಯಾಂಡ್ ಈ ದೇಶದಿಂದ ನಾಗರಿಕರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರುತ್ತಿದ್ದಾರೆ.

ಗಾಯಗೊಂಡಿರುವ ಹರಜೋತನ ವೈದ್ಯಕೀಯ ಖರ್ಚು ಭಾರತ ಸರಕಾರ ಬರಿಸಲಿದೆ 

ವಿದೇಶಾಂಗ ಸಚಿವಾಲಯವು, ಕಿವನಲ್ಲಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಹರಜ್ಯೋತ ಸಿಂಹ ಈ ಭಾರತೀಯ ವಿದ್ಯಾರ್ಥಿಯ ವೈದ್ಯಕೀಯ ಖರ್ಚು ಭಾರತ ಸರಕಾರ ಭರಿಸಲಿದೆ. ಹರಜೋತನಿಗೆ ಕಿವನಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹರಜೋತ ಈತನಿಗೆ 4 ಗುಂಡುಗಳು ತಾಗಿದ್ದವು, ಅದರಲ್ಲಿನ ಒಂದು ಗುಂಡು ಎದೆಗೆ ತಾಗಿದೆ. ಅವನು ದೆಹಲಿಯ ನಿವಾಸಿಯಾಗಿದ್ದಾನೆ.