ಮಧ್ಯಪ್ರದೇಶದಲ್ಲಿ ಅಪ್ರಾಪ್ತ ಯುವತಿಯನ್ನು ನೌಕರಿಗಾಗಿ ಮುಸಲ್ಮಾನಳಾಗಲು ಹೇಳುವ ಮತಾಂಧ ಯುವಕನ ಬಂಧನ

ಇಂತಹ ಮತಾಂಧರಿಗೆ ಕಠೋರ ಶಿಕ್ಷೆಯಾಗಲು ರಾಜ್ಯದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ರತಲಾಮ (ಮಧ್ಯಪ್ರದೇಶ) – ಇಲ್ಲಿ ಓರ್ವ ಅಪ್ರಾಪ್ತ ಯುವತಿಯ ಮೇಲೆ ಮತಾಂತರದ ಒತ್ತಡ ಹೇರಿದ ಪ್ರಕರಣದಲ್ಲಿ ಅರಬಾಜ ಖಾನ ಎಂಬ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ಈ ಇಬ್ಬರಿಗೆ ಪರಿಚಯವಾಗಿತ್ತು. ಅರಬಾಜ ಖಾನನು ಈ ಯುವತಿಗೆ ಮದುವೆಯಾಗುವುದಾಗಿ ಆಮೀಷ ತೋರಿಸಿದ್ದನು. ಅವನು ಬಿಹಾರದಲ್ಲಿನ ಈ ಹುಡುಗಿಯನ್ನು ರತಲಾಮನಲ್ಲಿ ನೌಕರಿಗಾಗಿ ಕರೆಸಿದ್ದನು. ಇಲ್ಲಿನ ಒಂದು ಅಪಾರ್ಟಮೆಂಟ್‌ನಲ್ಲಿ ಅವರು ಮನೆಯನ್ನು ಬಾಡಿಗೆಗೆ ಪಡೆಯಲು ಪ್ರಯತ್ನಿಸಿರುವಾಗ ಮನೆಯ ಮಾಲೀಕರಿಗೆ ಇವರಿಬ್ಬರ ಧರ್ಮವು ಬೇರೆಬೇರೆಯಾಗಿರುವುದರ ಸಂಶಯ ಬಂದಿತ್ತು. ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಯುವತಿಯ ಪಾಲಕರನ್ನು ಅಲ್ಲಿ ಕರೆಸಿದರು. ಈ ಸಮಯದಲ್ಲಿ ಯುವತಿಯು ‘ಅರಬಾಜನು ನನಗೆ ನೌಕರಿಗಾಗಿ ಮುಸಲ್ಮಾನಳಾಗುವುದು ಆವಶ್ಯಕವಾಗಿದೆ ಎಂದು ಹೇಳಿದ್ದನು’, ಎಂಬ ಮಾಹಿತಿ ನೀಡಿದಳು. ಈ ಪ್ರಕರಣದಲ್ಲಿ ಯುವತಿಯ ತಂದೆಯು ಪೊಲೀಸರಲ್ಲಿ ದೂರನ್ನು ನೋಂದಾಯಿಸಿದಾಗ ಪೊಲೀಸರು ಅರಬಾಜನನ್ನು ಬಂಧಿಸಿದರು.