‘ಒಂದು ಮೃತದೇಹದ ಬದಲು ೧೦ ಜನರನ್ನು ಉಕ್ರೇನಿನಿಂದ ಕರೆತರಬಹುದು (ಅಂತೆ)!

ಮೃತ ನವೀನ ಶೇಖರಪ್ಪನ ಮೃತದೇಹವನ್ನು ಭಾರತಕ್ಕೆ ತರುವ ಬಗ್ಗೆ ಕರ್ನಾಟಕದಲ್ಲಿನ ಭಾಜಪದ ಶಾಸಕ ಅರವಿಂದ ಬೆಲ್ಲದರವರ ಸಂವೇದನಾರಹಿತ ಹೇಳಿಕೆ- ಸಂಪಾದಕರು 

ಶಾಸಕ ಅರವಿಂದ ಬೆಲ್ಲದ

ಬೆಂಗಳೂರು (ಕರ್ನಾಟಕ) – ಉಕ್ರೇನಿನ ಯುದ್ಧದಲ್ಲಿ ಮೃತನಾದ ಕರ್ನಾಟಕದಲ್ಲಿನ ನವೀನ ಶೇಖರಪ್ಪನ ಮೃತದೇಹವನ್ನು ಯುಕ್ರೇನಿನಿಂದ ಹಿಂದೆ ಪಡೆಯಲು ಸರಕಾರವು ಸರ್ವತೋಪರಿ ಪ್ರಯತ್ನಿಸುತ್ತಿದೆ. ಆದರೆ ಆ ದೇಶದಲ್ಲಿ ಯುದ್ಧವು ನಡೆಯುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಆ ಜನರನ್ನು ಜೀವಂತವಾಗಿ ತರುವುದು ಮತ್ತು ಮೃತದೇಹವನ್ನು ಹಿಂದೆ ತರುವುದು ಇನ್ನೂ ಕಠಿಣವಾಗಿದೆ. ವಿಮಾನದಲ್ಲಿ ಮೃತದೇಹವನ್ನು ತರಲು ಬಹಳ ಜಾಗ ಬೇಕಾಗುತ್ತದೆ. ಮೃತದೇಹಕ್ಕಾಗಿ ಬೇಕಾಗುವ ಜಾಗದಲ್ಲಿ ೧೦ ಜನರು ಕುಳಿತುಕೊಳ್ಳಬಹುದು, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಭಾಜಪದ ಶಾಸಕರಾದ ಅರವಿಂದ ಬೆಲ್ಲದರವರು ನವೀನರವರ ಮೃತದೇಹವನ್ನು ತರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನೀಡಿದ್ದಾರೆ.