ಇದಕ್ಕಾಗಿ ಸರಕಾರವು ತಕ್ಷಣ ಕೃತಿ ಮಾಡಬೇಕು, ಎಂಬುದು ಜನತೆಯ ಅಪೇಕ್ಷೆಯಾಗಿದೆ !
ಶಿಮ್ಲಾ (ಹಿಮಾಚಲ ಪ್ರದೇಶ) – ಸಂಸ್ಕೃತವು ಪ್ರಾಚೀನ ಭಾಷೆಯಾಗಿದೆ ಹಾಗೂ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಭಾರತವು ಜಗತ್ತಿಗೇ ನೀಡಿರುವ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಸಂಸ್ಕೃತ ಭಾಷೆಯು ಸಾಹಿತ್ಯದ ಮಹಾಸಾಗರವಾಗಿದೆ. ದೇವಭಾಷೆ ಸಂಸ್ಕೃತವು ವೇದ, ಶಾಸ್ತ್ರ, ಕಾವ್ಯ ಮತ್ತು ಅನೇಕ ಜ್ಞಾನರೂಪಿ ಮುತ್ತುಗಳ ಆಕರವಾಗಿದೆ. ಸಂಸ್ಕೃತ ಭಾಷೆಯನ್ನು ಪ್ರೋತ್ಸಾಹಿಸಲು ಮತ್ತು ಅದರ ಪ್ರಚಾರ ಮಾಡಲು ಹೆಜ್ಜೆಯಿಡುವುದು ಆವಶ್ಯಕವಾಗಿದೆ, ಎಂದು ಭಾಜಪದ ಸರಕಾರವಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ ಠಾಕೂರ ರವರು ಒಂದು ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ಅವರು ಇಲ್ಲಿನ ‘ಸಂಸ್ಕೃತ ಭಾರತಿ’ಯ ‘ಆನ್‌ಲೈನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಈ ಸಂದರ್ಭದಲ್ಲಿ ‘ರಾಜ್ಯ ಸರಕಾರವು ಸಂಸ್ಕೃತವನ್ನು ಕಲಿಸುವ ಶಿಕ್ಷಕರ ಬೇಡಿಕೆಯ ವಿಷಯದಲ್ಲಿ ಸಹಾನುಭೂತಿಯಿಂದ ವಿಚಾರ ಮಾಡುವುದು’ ಎಂಬ ಆಶ್ವಾಸನೆಯನ್ನೂ ನೀಡಿದರು.
‘Dev Vani’ Sanskrit more important for ‘Dev Bhoomi’ Himachal: Jai Ram Thakur https://t.co/MaybfkyzuW
— HJS Mumbai (@HJSMumbai) February 28, 2022
ಶಿಕ್ಷಣಮಂತ್ರಿ ಗೋವಿಂದ ಸಿಂಹ ಠಾಕೂರರವರು ಈ ಸಮಯದಲ್ಲಿ ‘ರಾಜ್ಯ ಸರಕಾರವು ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಕಟಿಬದ್ಧವಾಗಿದೆ. ಇದಕ್ಕಾಗಿ ಸರಕಾರವು ಸಂಸ್ಕೃತಕ್ಕೆ ದ್ವಿತೀಯ ರಾಜ್ಯ ಭಾಷೆಯ ದರ್ಜೆಯನ್ನು ನೀಡಿದೆ. ಸರಕಾರಿ ಶಾಲೆಗಳಲ್ಲಿ ಸಂಸ್ಕೃತ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಂಸ್ಕೃತವನ್ನು ಕಲಿಯಬಹುದು’ ಎಂದು ಹೇಳಿದರು.