ಖೋಟಾ ದಾಖಲೆಗಳ ಮೂಲಕ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ಮತ್ತು ಜಾಮೀನು ನೀಡಿದ ಮತಾಂಧನ ಬಂಧನ

ಮುಲತಃ ಮ್ಯಾನ್ಮಾರ್‌ನ ಮತಾಂಧನಿಗೆ ಭಾರತೀಯ ಪೌರತ್ವ ಸಿಕ್ಕಿತು !

ನಕಲಿ ದಾಖಲೆಗಳ ಆಧಾರದ ಮೇಲೆ ಒಳನುಸುಳುವವರಿಗೆ ಭಾರತೀಯ ಪೌರತ್ವ ಸಿಗುವುದರ ಹಿಂದೆ ಭ್ರಷ್ಟ ಆಡಳಿತಾತ್ಮಕ ಅಧಿಕಾರಿಗಳು ಸಹ ಹೊಣೆಗಾರರಾಗಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನಕಲಿ ದಾಖಲೆಗಳ ಆಧಾರದ ಮೇಲೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ನುಸುಳಲು ಭಾರತೀಯ ಪೌರತ್ವ ನೀಡಲು ಯತ್ನಿಸಿದ ಮೊಹಮ್ಮದ್ ರಫಿಕ್ ಅಲಿಯಾಸ್ ರಫಿಕ್ ಉಲ್ ಇಸ್ಲಾಂನನ್ನು ಉಗ್ರ ನಿಗ್ರಹ ದಳ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಂಧಿಸಿದೆ.

ಜೈಲಿನಲ್ಲಿ ಬಂಧಿತರಾಗಿರುವ ರೊಹಿಂಗ್ಯಾ ಮುಸ್ಲಿಮರಿಗೂ ರಫಿಕ್ ಜಾಮೀನು ಸಿಗುವಂತೆ ಮಾಡುತ್ತಿದ್ದನು. ಅವನು ಮ್ಯಾನ್ಮಾರ್ ಮೂಲದವನಾಗಿದ್ದಾನೆ. ಆತ ಅಕ್ರಮವಾಗಿ ಭಾರತದ ಗಡಿಯಾಚೆಗಿನ ಬಂಗಾಲದ ನದಿಯಾ ಜಿಲ್ಲೆಯಲ್ಲಿ ಇರುತ್ತಿದ್ದ. ಆತ ನಕಲಿ ದಾಖಲೆಗಳ ಮೂಲಕ ಭಾರತೀಯ ಪೌರತ್ವ ಪಡೆದಿದ್ದನು. ಹಾಗೂ ಭಾಗ್ಯನಗರದಲ್ಲಿಯ ಮಾಂಸ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿ ಅವನು ನೂರ್‌ನ ಸಂಪರ್ಕಕ್ಕೆ ಬಂದನು. ನಂತರ ನಕಲಿ ದಾಖಲೆಗಳ ಆಧಾರದಿಂದ ಪೌರತ್ವ ಮತ್ತು ಜಾಮೀನು ಕೊಡಿಸುವ ಕೆಲಸ ಮಾಡಲು ಪ್ರಾರಂಭಿಸಿದನು. ಅವನು ಪ್ರತಿಯೊಬ್ಬರ ಜಾಮೀನಿಗಾಗಿ ೧೫ ರಿಂದ ೨೦ ಸಾವಿರ ರೂಪಾಯಿ ಪಡೆಯುತ್ತಿದ್ದನು.