ಮುಸಲ್ಮಾನರ ಕೊಲೆಯಾಗಿದಿದ್ರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕುಟುಂಬದವರನ್ನು ಭೇಟಿಯಾಗಲು ಬರುತ್ತಿದ್ದರು ! – ಭಾಜಪದ ಶಾಸಕ ಬಸನಗೌಡ ಪಾಟಿಲ್ ಯತ್ನಾಳ

ಹರ್ಷ ಇವರ ಮನೆಗೆ ಹೋಗಿ ಕುಟುಂಬದವರನ್ನು ಭೇಟಿ ಮಾಡಿದ ಬಸನಗೌಡ ಪಾಟಿಲ್ ಯತ್ನಾಳ !

ಶಿವಮೊಗ್ಗ : ನಮ್ಮ ಹಿಂದೂ ಕಾರ್ಯಕರ್ತನ ಹತ್ಯೆಯಿಂದ ಇಡೀ ರಾಜ್ಯವೇ ಸ್ತಬ್ಧವಾಗಿದೆ. ಹತ್ಯೆ ಮಾಡಿದವರನ್ನು ಗಲ್ಲಿಗೆ ಏರಿಸದಿದ್ದರೆ ಹಿಂದೂಗಳ ಯುವಕರ ಹತ್ಯೆಯಾಗುತ್ತಲೇ ಇರುವುದು. ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಈ ಹತ್ಯೆಯ ಹಿಂದೆ ಅತಿ ದೊಡ್ಡ ಷಡ್ಯಂತ್ರ ಇದೆ. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗಿದೆ. ಕಾಂಗ್ರೆಸ್‌ನವರು ಯಾರು ಕೂಡ ಹರ್ಷ ಇವರ ಮನೆಗೆ ಬಂದು ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ. ಇದೇ ಮುಸಲ್ಮಾನರ ಕೊಲೆಯಾಗಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಂದು ಕುಟುಂಬದವರನ್ನು ಭೇಟಿಯಾಗಿ ಹೋಗುತ್ತಿದ್ದರು, ಎಂದು ಭಾಜಪದ ಶಾಸಕ ಬಸನಗೌಡ ಪಾಟಿಲ ಯತ್ನಾಳ ಇವರು ಹೇಳಿದರು. ಅವರು ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಮನೆಗೆ ಹೋಗಿದ್ದರು. ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ಅವರು ಈ ಹೇಳಿಕೆಯನ್ನು ನೀಡಿದರು. ಈ ವೇಳೆ ಹರ್ಷನ ಕುಟುಂಬಕ್ಕೆ ೫ ಲಕ್ಷ ಚೆಕ್ ನೀಡಿದರು.

ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಿ !

ಯತ್ನಾಳ ತಮ್ಮ ಮಾತನ್ನು ಮುಂದುವರೆಸುತ್ತಾ, ಸಾಮಾಜಿಕ ಜಾಲತಾಣದಲ್ಲಿ ಮತಾಂಧರು ಬಹಿರಂಗವಾಗಿ ಹಿಂದೂಗಳಿಗೆ ಸವಾಲೊಡ್ಡುತ್ತಾರೆ. ಅದನ್ನು ಪೊಲೀಸರು ತಡೆಯುವುದು ಆವಶ್ಯಕವಾಗಿದೆ. ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ. ಗೆ) ವಹಿಸಬೇಕು. ಹಿಂದುತ್ವದ ಕಾರ್ಯವನ್ನು ನಾವು ಕೊನೆಯ ವರೆಗೂ ಮಾಡುತ್ತೇವೆ. ಇಂತಹ ಘಟನೆಗಳನ್ನು ತಡೆಯುವ ಕಾರ್ಯವನ್ನು ನಾವು ಮಾಡುವೆವು. ಹರ್ಷ ಇವರ ಹತ್ಯೆ ರಾಜ್ಯದಲ್ಲಿಯ ಕೊನೇಯ ಹತ್ಯೆಯಾಗಿರಲಿ. ಇಂತಹ ಘಟನೆಗಳು ಮರುಕಳಿಸದಿರಲಿ, ಈ ಕಡೆ ಗಮನ ಹರಿಸುವೆವು ಎಂದು ಹೇಳಿದರು.