`ತಮಿಳುನಾಡುವಿನಲ್ಲಿ ಭಾಜಪಗೆ ತಡೆಯಬೇಕಾದರೆ ಜನರ ಮತಾಂತರ ಆವಶ್ಯಕ !'(ಅಂತೆ)

* ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಚುನಾವಣೆಯಲ್ಲಿ ಭಾಜಪದಿಂದ ಉತ್ತಮ ಪ್ರದರ್ಶನ ಮಾಡಿದ್ದರಿಂದ ಹಿಂದೂದ್ವೇಷಿ ಪ್ರಗತಿಪರರಾದ ಲೇಖಕಿಗೆ ಹೊಟ್ಟೆಯುರಿ ! -ಸಂಪಾದಕರು 

* ತಮಿಳುನಾಡುವಿನಲ್ಲಿ ಆಡಳಿತಾರೂಢ ದ್ರಮುಕ ಪಕ್ಷವು ಹಿಂದೂದ್ವೇಷಿ ಯಾಗಿರುವುದರಿಂದ, ಹಿಂದೂಗಳ ಮತಾಂತರ ಮಾಡುವ ಪ್ರಮಾಣ ಹೆಚ್ಚಾದರೆ ಆಶ್ಚರ್ಯವೇನೂ ಇಲ್ಲ !- ಸಂಪಾದಕರು 

* ಹಿಂದೂಗಳ ಮೇಲೆ ಆಘಾತ ಮಾಡುವವರನ್ನು ಕಾನೂನುರಿತ್ಯ ವಿರೋಧ ಮಾಡಲು ಹಿಂದೂ ಸಂಘಟನೆ ಅನಿವಾರ್ಯ- ಸಂಪಾದಕರು 

ಶಾಲಿನ ಲಾರೆನ್ಸ್

ಚೆನ್ನೈ – ಸುಳ್ಳು ಪ್ರಗತಿಪರ ಲೇಖಕಿ ಶಾಲಿನ ಮಾರಿಯಾ ಲಾರೆನ್ಸ್ ಇವರು `ಫೇಸ್‍ಬುಕ್’ನಲ್ಲಿ `ತಮಿಳಿನಾಡುವಿನಲ್ಲಿ ಭಾಜಪದ `ಬೆಳವಣಿಗೆ’ ತಡೆಯಬೇಕಾದರೆ, ಜನರನ್ನು ಮತಾಂತರಿಸುವುದು ಆವಶ್ಯಕವಾಗಿದೆ’, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲಿನ ಲಾರೆನ್ಸ್ ಇವರು ಅಧಿಕಾರದಲ್ಲಿರುವ ದ್ರಮುಕನ ಬೆಂಬಲಿಗರೆಂದು ಗುರುತಿಸಲಾಗುತ್ತದೆ. ಅವರು ಬರೆದಿದ್ದಾರೆ, `ತಮಿಳುನಾಡಿನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ವಿಚಾರಧಾರೆ ಮನೆಮನೆಗೆ ತಲುಪಿಸುವುದು ಅವಶ್ಯಕವಾಗಿದೆ. ರಾಜ್ಯದ ಸಾಂಸ್ಕೃತಿಕ ಬದಲಾವಣೆ ಮತ್ತು ಇತಿಹಾಸದ ಪುನರ್ ಲೇಖನ ಮಾಡಿದರೆ ಮಾತ್ರ ಧಾರ್ಮಿಕ ಕಟ್ಟರವಾದಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು.’ ತಮಿಳುನಾಡಿನಲ್ಲಿ ಸ್ಥಳಿಯ ಸ್ವರಾಜ್ಯ ಸಂಸ್ಥೆಯ ಈಗಷ್ಟೇ ಚುನಾವಣೆ ನಡೆದಿದೆ. ಆ ಸಮಯದಲ್ಲಿ ಭಾಜಪ 300 ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಯಭೇರಿ ಗಳಿಸಿದ್ದಾರೆ. ತಮಿಳುನಾಡಿನಲ್ಲಿ ಭಾಜಪದ ಹೆಚ್ಚುತ್ತಿರುವ ಪ್ರಭಾವದಿಂದ ಹಿಂದೂದ್ವೇಷಿಗಳಿಗೆ ಅಸೂಯೆಯಿಂದ ಸಾಮಾಜಿಕ ಮಾಧ್ಯಮದಿಂದ ಭಾಜಪಗೆ ತಡೆಯುವುದಕ್ಕಾಗಿ ಈ ರೀತಿಯ ಹಿಂದೂ ವಿರೋಧಿ ಚರ್ಚೆಗೆ ಕಾರಣವಾಗಿದೆ.