ತಿರುವನಂತಪುರಂ (ಕೇರಳ) – ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಲಾಗುವ ಆಕ್ಷೇಪಾರ್ಹ ಸಂದೇಶಗಳಿಗಾಗಿ ಆ ಗುಂಪಿನ ನಿರ್ಮಾತ (ಗ್ರೂಪ್ ಅಡ್ಮಿನ್) ಜವಾಬ್ದಾರನಾಗಿರಲು ಸಾಧ್ಯವಿಲ್ಲ, ಎಂಬ ತೀರ್ಪನ್ನು ಕೇರಳದ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ನೀಡಿದೆ.
Explained: Kerala HC order that said WhatsApp group admins not liable for objectionable posts by membershttps://t.co/qR9dkJ8YLE
— The Indian Express (@IndianExpress) February 24, 2022
೧. ಮಾರ್ಚ ೨೦೨೦ರಲ್ಲಿ ‘ಫ್ರೆಂಡ್ಸ್’ ಎಂಬ ಒಂದು ವಾಟ್ಸಾಪ್ ಗುಂಪು ಒಂದು ವಿಡಿಯೋವನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಚಿಕ್ಕ ಮಕ್ಕಳು ಶಾರೀರಿಕ ಸಂಬಂಧದಲ್ಲಿ ಸಹಭಾಗಿಯಾಗಿರುವುದನ್ನು ತೋರಿಸಲಾಗಿತ್ತು. ಈ ಗುಂಪಿನ ನಿರ್ಮಾತ(ಅಡ್ಮಿನ್)ನಾಗಿದ್ದ ಅರ್ಜಿದಾರನು ಈ ಗುಂಪನ್ನು ನಿರ್ಮಿಸಿದ್ದನು, ಹಾಗೆಯೇ ಅವನೊಂದಿಗೆ ಇತರ ಇಬ್ಬರೂ ಆ ಗುಂಪಿನ ನಿರ್ಮಾತ(ಅಡ್ಮಿನ್)ರಾಗಿದ್ದರು. ಅವರಲ್ಲಿ ಒಬ್ಬನು ಆರೋಪಿಯಾಗಿದ್ದನು. ಅನಂತರ ಅರ್ಜಿದಾರನನ್ನೂ ಅಡ್ಮಿನ್ ಆಗಿರುವುದರಿಂದ ಆರೋಪಿಯನ್ನಾಗಿಸಲಾಗಿತ್ತು. ಆದುದರಿಂದ ಅವನು ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ದಾಖಲಿಸಿದ್ದನು.
೨. ನ್ಯಾಯಾಲಯವು ‘ಗುಂಪಿನ ನಿರ್ಮಾತನ ಬಳಿ ಕೇವಲ ಒಬ್ಬರನ್ನು ಗುಂಪಿಗೆ ಸೇರಿಸುವ ಅಥವಾ ತೆಗೆಯುವ ಅಧಿಕಾರ ಮಾತ್ರ ಇರುತ್ತದೆ. ಗುಂಪಿನಲ್ಲಿರುವವರು ಏನು ಪ್ರಸಾರ ಮಾಡುತ್ತಿದ್ದಾರೆ ಎಂಬುದರ ಮೇಲೆ ಆತನ ನಿಯಂತ್ರಣವಿರುವುದಿಲ್ಲ. ಅವನು ಯಾವುದೇ ಸಂದೇಶದ ಮೇಲೆ ಗಮನವಿಡಲು ಸಾಧ್ಯವಿಲ್ಲ ಅಥವಾ ಅದರಲ್ಲಿ ಬದಲಾವಣೆಯನ್ನೂ ಮಾಡಲಾರ’ ಎಂದು ಹೇಳಿದೆ.