ಕುರಾನನಲ್ಲಿ ‘ಹಿಜಾಬ್’ ನ ಉಲ್ಲೇಖವಿಲ್ಲ, ಆದರೆ ಅದನ್ನು ಮುಸಲ್ಮಾನ ಮಹಿಳೆಯರಿಗೆ ಕಡ್ಡಾಯಗೊಳಿಸುವುದು, ಅವರ ಪ್ರಗತಿಗೆ ಬಾಧಕ ! – ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಕೇರಳ

ಕರ್ನಾಟಕ ರಾಜ್ಯದಲ್ಲಿ ಮಹಾವಿದ್ಯಾಲಯಗಳಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಬಳಸಲಾದ ಬಟ್ಟೆ) ಧರಿಸುವುದರ ಮೇಲೆ ತರಲಾದ ನಿಷೇಧದ ಬಗ್ಗೆ ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ಸಮರ್ಥಿಸಿದ್ದಾರೆ. ‘ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಧರಿಸಿ ಬರಲು ಇಷ್ಟವಿಲ್ಲದವರಿಗೆ, ಹೊರಗೆ ಹೋಗುವ ಮಾರ್ಗವು ತೆರೆದಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿನ ಶಿಸ್ತು ಹೆಚ್ಚು ಮಹತ್ವದ್ದಾಗಿದೆ. ಮೂಲತಃ ಕುರಾನನಲ್ಲಿ ‘ಹಿಜಾಬ್ನ ಉಲ್ಲೇಖವಿರದೇ ಮುಸಲ್ಮಾನ ಮಹಿಳೆಯರಿಗೆ ಅದನ್ನು ಕಡ್ಡಾಯಗೊಳಿಸುವುದು, ಅವರ ಪ್ರಗತಿಗೆ ಬಾಧಕವಾಗಿದೆ, ಎಂದು ರಾಜ್ಯಪಾಲ ಖಾನ್ ಇವರು ಪ್ರತಿಪಾದಿಸಿದರು. ‘ನ್ಯೂಸ್ ೧೮ ಈ ವಾರ್ತಾವಾಹಿನಿಗೆ ಸಂದರ್ಶನ ನೀಡುವಾಗ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ತಮ್ಮ ಈ ಮೇಲಿನ ನಿಲುವನ್ನು ಸ್ಪಷ್ಟಪಡಿಸಿದರು. ರಾಜ್ಯಪಾಲರು ಈ ಸಂದರ್ಶನದಲ್ಲಿ ಹಿಜಾಬ್ ಬಗ್ಗೆ ಹೇಳಿದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್

ಹಿಜಾಬ್ ಬಗ್ಗೆ ವಿವಾದವನ್ನು ಸೃಷ್ಟಿಸಿ ರಾಜಕೀಯ ಮಾಡುವುದು ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ !

ಈ ಬಗ್ಗೆ ಓವೈಸಿ, ಕಾಂಗ್ರೆಸ್ಸಿಗರು, ತಥಾಕಥಿತ ಜಾತ್ಯತೀತ ಪಕ್ಷಗಳು, ಮತಾಂಧರನ್ನು ತುಷ್ಟೀಕರಿಸುವವರು ಮತ್ತು ಸರ್ವಧರ್ಮ ಸಮಭಾವದವರು ಏನಾದರೂ ತುಟಿ ಬಿಚ್ಚುವರೇ !

ಕುರಾನನಲ್ಲಿ ಹಿಜಾಬ್ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವಾಗ ಆ ಬಗ್ಗೆ ಯಾವ ರಾಜಕೀಯ ಮಾಡಲಾಗುತ್ತಿದೆಯೋ, ಅದಕ್ಕೆ ತಥಾಕಥಿತ ಪ್ರಗತಿ(ಅಧೋಗತಿ)ಪರರು, ಬುದ್ಧಿವಾದಿಗಳು ಮತ್ತು ಜಾತ್ಯತೀತರು ಏನೂ ಮಾತನಾಡುವುದಿಲ್ಲ ಎಂಬುದನ್ನು, ಗಮನದಲ್ಲಿಡಿ !

ಹಿಜಾಬ್‌ನ ಮೂಲಕ ಸರಕಾರ ಮತ್ತು ಸಮಾಜವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಸರಕಾರವು ಸಕಾಲದಲ್ಲಿ ಸದೆ ಬಡಿಯಬೇಕು !

೧. ಶಿಕ್ಷಣಸಂಸ್ಥೆಗಳಲ್ಲಿ ಸಮವಸ್ತ್ರದ ಶಿಸ್ತಿರುವುದು ಮತ್ತು ಅದು ಗೊತ್ತಿದ್ದರೂ ಅಲ್ಲಿ ಉದ್ದೇಶಪೂರ್ವಕವಾಗಿ ಪ್ರವೇಶ ಪಡೆದು ನಂತರ ಅದರ ವಿರುದ್ಧ ಬಂಡಾಯವೆದ್ದಿರುವುದು ತಪ್ಪು !

ಒಂದು ವೇಳೆ ಯಾರಿಗಾದರೂ ಸಮವಸ್ತ್ರವು ಇಷ್ಟವಾಗದಿದ್ದರೆ, ಅವರು ಶಿಕ್ಷಣಸಂಸ್ಥೆಯನ್ನು ಬಿಟ್ಟುಬಿಡಬೇಕು. ಶಿಸ್ತಿನ ಪಾಲನೆಯನ್ನು ಮಾಡಲೇಬೇಕು. ಶಿಸ್ತನ್ನು ಉಲ್ಲಂಘಿಸಲು ಪ್ರಯತ್ನಿಸಬಾರದು; ಏಕೆಂದರೆ ಶಿಸ್ತೇ ಈ ಸಂಸ್ಥೆಗಳ ಬುನಾದಿಯಾಗಿದೆ. ಶಿಸ್ತಿಲ್ಲದೇ ಜೀವನವು ನಡೆಯುವುದಿಲ್ಲ. ಯಾವಾಗ ನಿಮ್ಮ ಶಿಕ್ಷಣವು ಪೂರ್ಣಗೊಂಡು ನೀವು ಕಲಿತು ಹೊರಗೆ ಬರುವಿರೋ, ಆಗ ನೀವು ಯಾವ ಉಡುಪನ್ನು ಧರಿಸಬೇಕು, ಎಂಬುದು ನಿಮ್ಮ ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ವಿದ್ಯಾರ್ಥಿನಿಯರಿಗೆ  ಡ್ರೆಸ್‌ಕೋಡ್‌ನ (ಉಡುಪಿನ) ಮಾಹಿತಿ ಇತ್ತು. ಅದಾಗ್ಯೂ ಅವರು ಈ ಶಿಕ್ಷಣಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ಪ್ರವೇಶ ಪಡೆದಿದ್ದರು. ಆದುದರಿಂದ ಆ ಶಿಕ್ಷಣಸಂಸ್ಥೆಗಳ ವಿರುದ್ಧ ಇದ್ದಕ್ಕಿದ್ದಂತೆ ಬಂಡಾಯವೇಳಲು ಸಾಧ್ಯವಿಲ್ಲ.

೨. ಹಿಜಾಬ್ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಸಮಾಜದಲ್ಲಿ ಅಸ್ಥಿರವನ್ನುಂಟು ಮಾಡಲು ಪ್ರಯತ್ನಿಸುವುದು !

ಹುಡುಗಿಯರ ಪ್ರವೇಶದ ನಂತರ ಒಂದು ವೇಳೆ ಮಹಾವಿದ್ಯಾಲಯ ಗಳು ಅಂತಹ ಯಾವುದೇ ಷರತ್ತುಗಳನ್ನು ವಿಧಿಸಿದರೆ; ಅದನ್ನು ಆಕ್ಷೇಪಿಸಬಹುದು. ಆದರೆ ಪ್ರವೇಶ ಪಡೆಯುವಾಗಲೇ ನಾನು ಅರ್ಜಿಯ ಮೇಲೆ ಹಸ್ತಾಕ್ಷರ ಮಾಡಿದ್ದರೆ, ಅದು ಒಂದು ರೀತಿಯಲ್ಲಿ ನಾನು ಒಪ್ಪಂದ ಮಾಡಿಕೊಂಡಿದ್ದೇನೆ ಎಂದಾಗುತ್ತದೆ. ಆದುದರಿಂದ ನನಗೆ ಶಾಲೆಯ ನಿಯಮಗಳಿಗನುಸಾರ ಕೆಲಸ ಮಾಡುವುದು ಆವಶ್ಯಕವಾಗಿದೆ. ಹಿಜಾಬ್ ಪ್ರಕರಣದಲ್ಲಿ ಕೆಲವು ರಾಜಕೀಯ ಮತ್ತು ಗುಪ್ತ ಉದ್ದೇಶವನ್ನು ಈಡೇರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ. ಸರಕಾರವನ್ನು ಅಡಚಣೆಯಲ್ಲಿ ತರುವ ಮತ್ತು ಸಮಾಜದಲ್ಲಿ ಇದು ಅಸ್ಥಿರತೆಯನ್ನುಂಟು ಮಾಡುವ ಪ್ರಯತ್ನವಾಗಿದೆ.

೩. ಕುರಾನದಲ್ಲಿ ಮಹಿಳೆಯರ ಉಡುಪೆಂದು ಹಿಜಾಬ್‌ನ ಉಲ್ಲೇಖವಿಲ್ಲ !

ಕುರಾನನಲ್ಲಿ ಮಹಿಳೆಯರ ಉಡುಪೆಂದು ‘ಹಿಜಾಬ್ ಈ ಶಬ್ದದ ಉಲ್ಲೇಖ ಎಲ್ಲಿಯೂ ಇಲ್ಲ, ಹಾಗೆಯೇ ಮಹಿಳೆಯರು ಮುಖ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳುವ ದೃಷ್ಟಿಯಿಂದಲೂ ‘ಹಿಜಾಬ್ ಶಬ್ದದ ಉಲ್ಲೇಖವು ಕಂಡು ಬರುವುದಿಲ್ಲ. ಮುಸಲ್ಮಾನ ಮಹಿಳೆಯರು ತಮ್ಮ ಉಡುಪಿನ ಮೇಲೆ ಹೊದ್ದುಕೊಳ್ಳಲು ‘ಖಿಮಾರ (ಸೆರಗು, ಬಟ್ಟೆ) ಬಳಸಬೇಕು, ಎಂದು ಹೇಳಲಾಗಿದೆ. ಕುರಾನನಲ್ಲಿ ಹಿಜಾಬ್ ಶಬ್ದದ ಉಲ್ಲೇಖ ಕೇವಲ ಮನೆಯ ‘ಪರದೆ ಈ ಅರ್ಥದಿಂದ ಮಾಡಲಾಗಿದೆ.

೪. ಮುಸಲ್ಮಾನ ಮಹಿಳೆಯರಿಗೆ ಹಿಜಾಬ್‌ಅನ್ನು ಕಡ್ಡಾಯಗೊಳಿಸುವುದೆಂದರೆ ಅವರನ್ನು ಪ್ರತಿಯೊಂದು ಕ್ಷೇತ್ರದಿಂದ ಹೊರಗೆ ಹಾಕಿದಂತೆಯೇ ಆಗಿದೆ !

ಒಂದು ವೇಳೆ ಶಿಕ್ಷಣವನ್ನು ಪಡೆಯುವ ಕೆಲವೇ ಹೆಣ್ಣುಮಕ್ಕಳಿಗಾಗಿ ಇಸ್ಲಾಮ್ ಆವಶ್ಯಕವಾಗಿದ್ದರೆ, ಪೊಲೀಸ್ ಸೇವೆಯಲ್ಲಿ ಕಾರ್ಯ ನಿರತರಾಗಿರುವ ಸಾವಿರಾರು ಮುಸಲ್ಮಾನ ಮಹಿಳೆಯರು ಹಿಜಾಬ್ ಧರಿಸುವುದಿಲ್ಲ, ಹಾಗಾದರೆ ಅವರಿಗೆ ಇಸ್ಲಾಮ್ ಮುಗಿದಿ ದೆಯೇ ? ಯಾವ ಹೆಣ್ಣು ಮಕ್ಕಳು ಶಿಕ್ಷಣವು ಪೂರ್ಣಗೊಂಡ ನಂತರ ‘ಕರಿಯರ್ (ಜೀವನದ ವಿಕಾಸ) ಮಾಡಿಕೊಳ್ಳುವರೋ, ಅವರು ಅಲ್ಲಿಯೂ ಹಿಜಾಬ್‌ನ ಷರತ್ತು ಇಡುವರೇ ? ಯಾವಾಗ ‘ಹಿಜಾಬ್ ಮುಸಲ್ಮಾನ ಮಹಿಳೆಯರಿಗೆ ಕಡ್ಡಾಯವಾಗಿದೆ, ಎಂದು ಹೇಳು ತ್ತೇವೆಯೋ, ಆಗ ನಾವು ಅವರನ್ನು ಪ್ರತಿಯೊಂದು ಕ್ಷೇತ್ರದಿಂದ ಹೊರಗೆ ಹಾಕುತ್ತಿದ್ದೇವೆ, ಎಂದು ಗಮನದಲ್ಲಿಡಬೇಕು, ಏಕೆಂದರೆ ಹಿಜಾಬ್ ಧರಿಸಿ ಯಾವುದೇ ಕಾರ್ಯ ಮಾಡುವುದು ಅಸಾಧ್ಯವಾಗಿದೆ. ಇಂದು ಮುಸಲ್ಮಾನ ಹೆಣ್ಣು ಮಕ್ಕಳು ಅನೇಕ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. ಆದುದರಿಂದ ಹಿಜಾಬ್ ಕಡ್ಡಾಯ ಮಾಡುವುದು, ಅವರ ಪ್ರಗತಿಯಲ್ಲಿನ ಅಡಚಣೆಯಾಗಿದೆ. (ಆಧಾರ : ‘ನ್ಯೂಸ್ ೧೮ ಲೋಕಮತ)