ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತನ ಹತ್ಯೆ

  • ಹತ್ಯೆಯ ನಂತರ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ

  • ಹಿಜಾಬ್ ವಿರೋಧಿ ಪೋಸ್ಟ್‌ನಿಂದಾಗಿ ಹತ್ಯೆಯಾಗಿದೆ ಎಂದು ಹಿಂದುತ್ವನಿಷ್ಠ ಸಂಘಟನೆಗಳ ಆರೋಪ

  • ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ದಳದ ಸ್ಥಾಪನೆ

  • ೨ ದಿನಗಳ ಹಿಂದೆ ‘ಹಿಜಾಬ್ ವಿರೋಧಿಸುವವರನ್ನು ತುಂಡುತುಂಡು ಮಾಡುವೆನು’, ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಅನಂತರ ಈ ಹತ್ಯೆಯಾಯಿತು, ಈ ಬಗ್ಗೆ ತನಿಖೆಯಾಗಬೇಕು ! – ಸಂಪಾದಕರು
  • ಕರ್ನಾಟಕದಲ್ಲಿ ಭಾಜಪ ಸರಕಾರವಿರುವಾಗ ಹಿಂದುತ್ವನಿಷ್ಠರ ಹತ್ಯೆಯಾಗುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು
ಅಜ್ಞಾತರಿಂದ ಚಾಕು ಇರಿದು ಬಜರಂಗ ದಳದ ಕಾರ್ಯಕರ್ತ ಹರ್ಷ ಇವರ ಹತ್ಯೆ !

ಶಿವಮೊಗ್ಗ – ಇಲ್ಲಿನ ಸೀಗೆಹಟ್ಟಿ ಪರಿಸರದಲ್ಲಿ ೨೦ ಫೆಬ್ರವರಿಯ ರಾತ್ರಿ ಬಜರಂಗ ದಳದ ಕಾರ್ಯಕರ್ತ ಹರ್ಷ (ವಯಸ್ಸು ೨೬ ವರ್ಷ) ಇವರನ್ನು ಅಜ್ಞಾತರು ಚಾಕುವಿನಿಂದ ದಾಳಿ ಮಾಡಿ ಹತ್ಯೆಗೈದರು. ಈ ದಾಳಿಯಲ್ಲಿ ಹರ್ಷ ಇವರು ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತ್ಯಪಟ್ಟಿರುವುದಾಗಿ ಧೃಢಪಟ್ಟಿತು. ಈ ಹತ್ಯೆಯಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರವಾಯಿತು. ಅನೇಕ ವಾಹನಗಳನ್ನು ಸುಟ್ಟುಹಾಕಲಾಯಿತು. ಇದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೊಬಸ್ತ್ ಇಡಲಾಗಿದೆ.

(ಆಧಾರ : Tv9 Kannada)

ಈ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ಸ್ಥಾಪಿಸಲಾಗಿದೆ. ಈ ಹತ್ಯೆಯನ್ನು ನಿರ್ದಿಷ್ಟವಾಗಿ ಯಾವ ಉದ್ದೇಶದಿಂದ ಮಾಡಲಾಗಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ, ಆದರೂ ಹಿಜಾಬ್ ವಿರುದ್ಧ ಪೋಸ್ಟ್ ಮಾಡಿದುದರಿಂದ ಅವರ ಹತ್ಯೆಯಾಗಿದೆ ಎಂದು ಹಿಂದುತ್ವನಿಷ್ಠ ಸಂಘಟನೆಗಳು ಆರೋಪಿಸಿವೆ.

ಕರ್ನಾಟದಲ್ಲಿ ಹಿಜಾಬ್ ಬಗ್ಗೆ ವಾದವು ಆರಂಭವಾದಾಗಿನಿಂದ ಬಜರಂಗ ದಳವು ಹಿಜಾಬ್‌ಅನ್ನು ವಿರೋಧಿಸುವ ವಿಷಯದಲ್ಲಿ ತನ್ನ ಬೆಂಬಲ ನೀಡಿದೆ. ಶಿವಮೊಗ್ಗದಲ್ಲಿ ಹಿಜಾಬ್ ಕುರಿತು ಆಂದೋಲನಗಳು ನಡೆದಿವೆ.

ಆದುದರಿಂದ ಇಲ್ಲಿ ಮೊದಲಿನಿಂದಲೇ ಪೊಲೀಸ್ ಬಂದೋಬಸ್ತಿನಲ್ಲಿಯೂ ಹೆಚ್ಚಳ ಮಾಡಲಾಗಿದೆ, ಹಾಗೆಯೇ ಸ್ವಲ್ಪ ಕಾಲಾವಧಿಗಾಗಿ ಕಲಮ್ ೧೪೪ ಅನ್ನೂ ಜಾರಿಗೆ ತರಲಾಗಿತ್ತು. ಆದರೂ ಈ ಹತ್ಯೆಯಾದುದರಿಂದ ಅದನ್ನು ಹಿಜಾಬ್ ಪ್ರಕರಣದೊಂದಿಗೆ ಜೋಡಿಸಲಾಗುತ್ತಿದೆ. ಹರ್ಷ ಇವರ ಫೇಸ್‌ಬುಕ್‌ನ ಮಾಹಿತಿಯಲ್ಲಿ ಹಿಜಾಬ್ ವಿರುದ್ಧ ಬರೆಯಲಾಗಿತ್ತು ಮತ್ತು ಕೇಸರಿ ಶಾಲ್ ಬಗ್ಗೆ ಸಮರ್ಥನೆ ನೀಡಲಾಗಿತ್ತು.

(ಆಧಾರ : Republic World)

ಕಾಂಗ್ರೆಸ್ ಮುಖಂಡನಿಂದ ತುಂಡುತುಂಡು ಮಾಡುವುದಾಗಿ ಬೆದರಿಕೆ ಮತ್ತು ಹತ್ಯೆ

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಮುಕರ್ರ‍ಮ್ ಖಾನ್ ಇವರು ‘ಹಿಜಾಬ್ ವಿರೋಧಿಸುವವರನ್ನು ತುಂಡು ತುಂಡು ಮಾಡಿಬಿಡುತ್ತೇವೆ’, ಎಂದು ಹೇಳಿದ್ದರು.

ಹರ್ಷ ಅವರ ಹತ್ಯೆ ಮುಸಲ್ಮಾನ ಗೂಂಡಾಗಳು ಮಾಡಿದ್ದಾರೆ ! – ಸಚಿವ ಈಶ್ವರಪ್ಪ

ಹರ್ಷ ಅವರ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಸಚಿವರಾದ ಕೆ.ಎಸ್. ಈಶ್ವರಪ್ಪ ಇವರು, “ಬಜರಂಗದಳದ ಕಾರ್ಯಕರ್ತರ ನಿಧನದಿಂದ ನನಗೆ ಬಹಳ ದುಃಖವಾಗಿದೆ. ಹರ್ಷ ಇವರ ಹತ್ಯೆ ಮುಸಲ್ಮಾನರ ಗೂಂಡಾಗಳು ನಡೆಸಿದ್ದಾರೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರ ಪ್ರಚೋದಿಸಿರುವದರಿಂದ ಈ ಘಟನೆ ನಡೆದಿದೆ.’ ಎಂದು ಹೇಳಿದರು.

ಅಂತ್ಯ ಯಾತ್ರೆಯ ಸಮಯದಲ್ಲಿ ಮತ್ತೆ ಹಿಂಸಾಚಾರ

ಹರ್ಷ ಇವರ ಅಂತ್ಯಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಗರೀಕರು ಸಹ ಭಾಗಿಯಾಗಿದ್ದರು. ಆ ಸಮಯದಲ್ಲಿ ಮತ್ತೆ ಹಿಂಸಾಚಾರದ ಘಟನೆ ನಡೆದಿದೆ. ಈ ಸಮಯದಲ್ಲಿ ಉಪಸ್ಥಿತರಿದ್ದವರಿಂದ ಕಲ್ಲು ತೂರಾಟ ನಡೆದಿದೆ.

ಕಾಂಗ್ರೆಸ್‌ನಿಂದ ಖಂಡನೆ

ಕಾಂಗ್ರೆಸ್‌ನ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಹತ್ಯೆಯನ್ನು ನಿಷೇಧಿಸಿದ್ದಾರೆ. ಅವರು, ನಾವು ಶಾಂತಿಯಲ್ಲಿ ವಿಶ್ವಾಸ ಇಡುತ್ತೇವೆ. ಈ ಹತ್ಯೆಯ ಕಾರಣಕರ್ತರ ಮೇಲೆ ಕಠಿಣ ಕ್ರಮ ಜರುಗಿಸಿ ಅವರಿಗೆ ಶಿಕ್ಷೆ ವಿಧಿಸಬೇಕು. ಈ ಘಟನೆಯಿಂದ ಗೃಹ ಸಚಿವರು ರಾಜೀನಾಮೆ ನೀಡಬೇಕು.

ಕರ್ನಾಟಕದಲ್ಲಿನ ಹಿಂದುತ್ವನಿಷ್ಠರ ಹತ್ಯಾಕಾಂಡವು ನಡೆಯುತ್ತಲೇ ಇದೆ ! ಯಾರ ಹತ್ಯೆಯಾಗಿದೆ ಎಂಬುದನ್ನು ತಿಳಿದುಕೊಳ್ಳಿ !

೧. ಸುಖಾನಂದ ಶೆಟ್ಟಿ (ವಯಸ್ಸು ೩೨ ವರ್ಷ), ಭಾಜಪದ ನೇತಾರರು, ಮಂಗಳೂರು, ಜಿ. ದಕ್ಷಿಣ ಕನ್ನಡ (ಡಿಸೆಂಬರ್‌ ೨೦೦೬)

೨. ಸಿ. ಎನ್‌. ಶ್ರೀನಿವಾಸ, ನೇತಾರರು, ಭಾಜಪ, ಬೆಂಗಳೂರು (ಮಾರ್ಚ ೨೦೧೪)

೩. ಲಕ್ಷ್ಮಣ (ವಯಸ್ಸು ೩೭ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನಾ, ತಾ. ಜೇವರ್ಗಿ, ಜಿಲ್ಲೆ ಕಲ್ಬುರ್ಗಿ (ಸಪ್ಟೆಂಬರ್‌ ೨೦೧೪)

೪. ಕೊರೆಪ್ಪಾ ಕೊಟರಪ್ಪಾ ಜಾವರೂ (ವಯಸ್ಸು ೩೨ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನಾ, ಹಳ್ಳಿಕೇರಿ, ಧಾರವಾಡ (ಅಕ್ಟೋಬರ್‌ ೨೦೧೪)

೫. ವಿಶ್ವನಾಥನ್‌ ಶೆಟ್ಟಿ (ವಯಸ್ಸು ೩೮ ವರ್ಷ), ಸಂಘ ಸ್ವಯಂಸೇವಕರು, ಶಿವಮೊಗ್ಗ (ಫೆಬ್ರುವರಿ ೨೦೧೫)

೬. ವಾಮನ ಪೂಜಾರಿ, ಹಿಂದುತ್ವನಿಷ್ಠ , ಮೂಡಬಿದ್ರಿ, ಜಿಲ್ಲೆ ದಕ್ಷಿಣ ಕನ್ನಡ (ಸಪ್ಟೆಂಬರ ೨೦೧೫)

೭. ಪ್ರಶಾಂತ ಪೂಜಾರಿ, ಕಾರ್ಯಕರ್ತ, ಬಜರಂಗದಳ, ಮೂಡಬಿದ್ರಿ, ಜಿಲ್ಲೆ ದಕ್ಷಿಣ ಕನ್ನಡ (ಸಪ್ಟೆಂಬರ ೨೦೧೫)

೮. ಡಿ. ಕೆ. ಕುಟಪ್ಪಾ, ವಿಶ್ವಹಿಂದೂ ಪರಿಷದ್, ಮಡಿಕೇರಿ, ಜಿಲ್ಲೆ ಕೊಡಗು (ನವೆಂಬರ್‌ ೨೦೧೫)

೯. ರಾಜೇಶ ಕೋಟ್ಯಾನ, ಉಲ್ಲಾಳ, ಜಿಲ್ಲೆ ದಕ್ಷಿಣ ಕನ್ನಡ (ಎಪ್ರಿಲ್‌ ೨೦೧೬)

೧೦. ಅಶ್ವತ್ಥ, ನೇತಾರರು, ಭಾಜಪ, ಅತ್ತಿಬೆಲೆ, ಜಿಲ್ಲೆ ಬೆಂಗಳೂರು (ಮೇ ೨೦೧೬)

೧೧. ಯೋಗೇಶ ಗೌಡ, ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಮತ್ತು ಭಾಜಪದ ನೇತಾರರು, ಧಾರವಾಡ (ಜೂನ ೨೦೧೬)

೧೨. ಪ್ರವೀಣ ಪೂಜಾರಿ, ಸಂಘ ಸ್ವಯಂಸೇವಕ, ಕುಶಾಲನಗರ, ಜಿಲ್ಲೆ ಕೊಡಗು (ಅಗಸ್ಟ ೨೦೧೬)

೧೩. ರುದ್ರೇಶ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಬೆಂಗಳೂರು (ಅಕ್ಟೋಬರ್‌ ೨೦೧೬)

೧೪. ಕಾರ್ತಿಕ ರಾಜ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಮಂಗಳೂರು, ಜಿಲ್ಲೆ ದಕ್ಷಿಣ ಕನ್ನಡ (ಅಕ್ಟೋಬರ್‌ ೨೦೧೬)

೧೫. ರವಿ ಮಗಳಿ, ನೇತಾರರು, ಭಾಜಯುಮೋ, ಪರಿಯಾಪಟ್ಟಣ, ಜಿಲ್ಲೆ ಮೈಸೂರು (ನವೆಂಬರ್‌ ೨೦೧೬)

೧೬. ಸುನೀಲ ಡೊಂಗರೆ, ಕಾರ್ಯಕರ್ತ, ಭಾಜಪ, ಔರದ, ಜಿಲ್ಲೆ ಬೀದರ (ನವೆಂಬರ್‌ ೨೦೧೬)

೧೭. ಶ್ರೀನಿವಾಸ ಪ್ರಸಾದ (ವಾಸು), ಹಿಂದುತ್ವನಿಷ್ಠ, ಬೊಮ್ಮನಹಳ್ಳಿ, ಜಿಲ್ಲೆ ಬೆಂಗಳೂರು (ಮಾರ್ಚ ೨೦೧೭)

೧೮. ಹರೀಶ, ಹಿಂದುತ್ವನಿಷ್ಠ, ಚಂದಾಪುರ, ತಾಲೂಕು ಆನೇಕಲ, ಜಿಲ್ಲೆ ಬೆಂಗಳೂರು (ಜೂನ ೨೦೧೭)

೧೯. ಶರತ ಮಡಿವಾಳ (ವಯಸ್ಸು ೨೮ ವರ್ಷ), ಸಂಘ ಸ್ವಯಂಸೇವಕ, ಕಂಡುರ, ಮಂಗಳೂರು, ಜಿಲ್ಲೆ ದಕ್ಷಿಣ ಕನ್ನಡ (ಜುಲೈ ೨೦೧೭)

೨೦. ಚಿಕ್ಕತಿಮ್ಮೇಗೌಡ, ಕಾರ್ಯಕರ್ತ, ಭಾಜಪ, ಬೆಂಗಳೂರು (ನವೆಂಬರ್‌ ೨೦೧೭)

೨೧. ಪರೇಶ ಮೇಸ್ತ (ವಯಸ್ಸು ೧೮ ವರ್ಷ), ಹೊನ್ನಾವರ, ಜಿಲ್ಲೆ ಉತ್ತರ ಕನ್ನಡ (ಡಿಸೆಂಬರ್‌ ೨೦೧೭)

೨೨. ಮಹಾದೇವ ಕಾಳೆ, (ವಯಸ್ಸು ೫೦ ವರ್ಷ), ಕಾರ್ಯಕರ್ತ, ಭಾಜಪ, ಅಫಜಲಪುರ, ಜಿಲ್ಲೆ ಕಲಬುರ್ಗಿ (೨೦೧೭)

೨೩. ರಮೇಶ ಬಂದಿ, ಕಾರ್ಯಕರ್ತ, ಭಾಜಪ, ಬಳ್ಳಾರಿ (೨೦೧೭)

೨೪. ತಿಪ್ಪೇಶ, ಯುವನೇತಾರ, ಭಾಜಪ ತಿಪಟೂರು, ಜಿಲ್ಲೆ ಹಾಸನ (೨೦೧೭)

ಟಿಪ್ಪಣಿ : ಈ ಹಿಂದುತ್ವನಿಷ್ಠರ ಪೈಕಿ ಹೆಚ್ಚಿನ ಹೆಸರುಗಳು ಉಡುಪಿಯಲ್ಲಿನ ಭಾಜಪದ ಸಂಸದರು ಹಾಗೂ ‘ಕೃಷಿ ಮತ್ತು ರೈತ ಕಲ್ಯಾಣ’ ಮಂತ್ರಾಲಯದ ಕೇಂದ್ರೀಯ ರಾಜ್ಯ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರು ೨೦೧೮ರಲ್ಲಿ ಬಹಿರಂಗಗೊಳಿಸಿದ ಪ್ರಸಿದ್ಧಿ ಪತ್ರಕದಿಂದ ತೆಗೆದುಕೊಳ್ಳಲಾಗಿವೆ.