ಭಾಜಪ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೋಳಿ, ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವೆವು ! – ಭಾಜಪದ ನಾಯಕ ರಾಜನಾಥ ಸಿಂಹ ಇವರಿಂದ ಘೋಷಣೆ

ಭಾಜಪದಿಂದ ಇಂತಹ ಆಮಿಷ ಒಡ್ಡುವುದು ಅಪೇಕ್ಷಿತವಿಲ್ಲ; ಏಕೆಂದರೆ ಚುನಾವಣೆ ವೇಳೆಗೆ ಇಂತಹ ಆಮಿಷ ತೋರಿಸುವುದು ಜನರಿಗೆ ಕೊಡುವ ಲಂಚವೇ ಆಗಿದೆ, ಇದು ಭಾಜಪದ ನಾಯಕರಿಗೆ ತಿಳಿಯುತ್ತದೆಯೇ ? ತದ್ವಿರುದ್ದ, ಪಕ್ಷವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನು ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು.- ಸಂಪಾದಕರು 

ರಕ್ಷಣಾ ಸಚಿವ ರಾಜನಾಥ ಸಿಂಹ

ಮನಕಾಪುರ (ಉತ್ತರಪ್ರದೇಶ) – ರಾಜ್ಯದಲ್ಲಿ ಭಾಜಪ ಪುನಃ ಅಧಿಕಾರಕ್ಕೆ ಬಂದರೆ ಹೋಳಿ ಮತ್ತು ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭಾಜಪ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಪ್ರಚಾರ ಸಭೆಯಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿನಿಯರಿಗೆ ಸ್ಕೂಟಿ(ದ್ವಿಚಕ್ರ ವಾಹನ) ನೀಡುವದಾಗಿಯು ಘೋಷಿಸಿದರು.