ಮುಂಬಯಿ – ಮಕ್ಕಳ ಶಿಕ್ಷಣಕ್ಕಾಗಿ ಹಿಜಾಬ್‍ಗಿಂತ ಪುಸ್ತಕಗಳು ಮುಖ್ಯ. ಶಾಲೆಯಲ್ಲಿ `ಜೈ ಮಾತಾದಿ’ಯ ಸ್ಕಾರ್ಫ್ ಅಥವಾ ಬುರ್ಖಾ ಏನ್ನನೂ ಧರಿಸುವಂತಿಲ್ಲ. ಸಮವಸ್ತ್ರವನ್ನು ಗೌರವಿಸುವುದು ಮಹತ್ವದ್ದಾಗಿದೆ. ಶಾಲೆಯಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳ ಆಥವಾ ವಸ್ತುಗಳ ಪ್ರಚಾರ ಮಾಡಬಾರದು, ಹಿಜಾಬ್ ಬಗ್ಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ ರಾಣಾವತ್ ಇವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಪುಸ್ತಕದ ಸ್ಥಾನವು ಹಿಜಾಬ್‍ಕ್ಕಿಂತ ಮೇಲಿದೆ. ಮಕ್ಕಳ ಶಿಕ್ಷಣ ಅಧಿಕ ಮಹತ್ವದ್ದಿದೆ. ಶಾಲೆಗೆ ಹೋದಾಗ ಸಮವಸ್ತ್ರ ಕೊಡುತ್ತಾರೆ. ಸಮವಸ್ತ್ರ ಒಂದು `ಕೋಡ್’ ಇರುತ್ತದೆ. ಅದು ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು. ಸಮವಸ್ತ್ರವಿರುವದರಿಂದ ಬಡವ-ಶ್ರೀಮಂತ, ಹಿಂದೂ-ಮುಸಲ್ಮಾನ ಎಲ್ಲರೂ ಒಟ್ಟಾಗುತ್ತಾರೆ.” ಎಂದು ಹೇಳಿದರು.