ಮಡಿಕೇರಿ (ಕರ್ನಾಟಕ)ಯಲ್ಲಿ ಹಿಜಾಬ ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶ ನಿರಾಕರಿಸಲಾಯಿತು !

ಮಹಾವಿದ್ಯಾಲಯದ ಪ್ರಾಧ್ಯಾಪಕರನ್ನು ಕೊಲ್ಲುವ ಬೆದರಿಕೆ

ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು 

* ಸರಕಾರವು ನ್ಯಾಯಾಲಯದ ಆದೇಶದ ವಿರುದ್ಧ ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರುವವರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಏಕೆ ಬಂಧಿಸುತ್ತಿಲ್ಲ ? – ಸಂಪಾದಕರು 

ಮಡಿಕೇರಿ (ಕರ್ನಾಟಕ) – ಹಿಜಾಬ ಧರಿಸಿ ಬಂದಂತಹ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಿದ್ದರಿಂದ ಅಲ್ಲಿನ ಒಂದು ಮಹಾವಿದ್ಯಾಲಯದ ವಿಜಯ ಎಂಬ ಹೆಸರಿನ ಪ್ರಾಧ್ಯಾಪಕರನ್ನು ಕೊಲ್ಲುವುದಾಗಿ ಬೆದರಿಕೆ ನೀಡಲಾಗಿದೆ. ಈ ವಿಷಯದಲ್ಲಿ ಪ್ರಾಧ್ಯಾಪಕರು ಪೊಲೀಸರ ಬಳಿ ದೂರನ್ನು ನೋಂದಾಯಿಸಿದ್ದಾರೆ. ಈ ಬೆದರಿಕೆಯನ್ನು ಸಾಮಾಜಿಕ ಮಾಧ್ಯಮಗಳಿಂದ ನೀಡಲಾಗಿರುವುದರಿಂದ ಸಾಯಬರ ಶಾಖೆಯ ಪೊಲೀಸರಿಂದ ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ.

ಹಿಜಾಬಿನ ಹಿಂದೆ ಅಂತರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಕೈವಾಡ ! – ಕಂದಾಯ ಮಂತ್ರಿಗಳಾದ ಆರ್‌. ಅಶೋಕರವರ ಹೇಳಿಕೆ

ಕಂದಾಯ ಮಂತ್ರಿಗಳಾದ ಆರ್‌. ಅಶೋಕ

ಹಿಜಾಬಿನ ಪ್ರಕರಣದ ವಿಷಯದಲ್ಲಿ ರಾಜ್ಯ ಕಂದಾಯ ಮಂತ್ರಿಗಳಾದ ಆರ್. ಅಶೋಕರವರು ‘ಒಂದು ಚಿಕ್ಕ ನಗರವಾದ ಉಡುಪಿಯಲ್ಲಿ ನಡೆದ ಹಿಜಾಬಿನ ವಾದ ಒಂದೇ ವಾರದಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪಿರುವುದು ಹೇಗೆ ? ವಿದ್ಯಾರ್ಥಿಗಳು ಹೀಗೆ ಮಾಡಲಾರರು. ಇದರ ಹಿಂದೆ ಅಂತರಾಷ್ಟ್ಟೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಪಾತ್ರವಿದೆ. ಇದು ಒಂದು ಭಯೋತ್ಪಾದಕ ಸಂಘಟನೆಯ ಕೆಲಸವೇ ಆಗಿದೆ. ಈ ಸಂಘಟನೆಯು ಇರಾಕ, ಇರಾನ ಮತ್ತು ಪಾಕಿಸ್ತಾನಗಳಲ್ಲಿ ಸಕ್ರೀಯವಾಗಿದೆ. ಈ ಪ್ರಕರಣಕ್ಕೆ ಭಯೋತ್ಪಾದನೆಯೊಂದಿಗೆ ಇರುವ ಸಂಬಂಧವನ್ನು ಬಹಿರಂಗಗೊಳಿಸುವ ಆವಶ್ಯಕತೆಯಿದ್ದು ಅದನ್ನು ಬಹಿರಂಗಗೊಳಿಸಲಾಗುವುದು’ ಎಂದು ಹೇಳಿದರು.