`ಸಂಘ ಪರಿವಾರವು ಮುಸಲ್ಮಾನ ಹುಡುಗಿಯರಿಗೆ ಶಿಕ್ಷಣ ನಿರಾಕರಿಸುವ ಷಡ್ಯಂತ್ರ ರಚಿಸುತ್ತಿದೆ !’ ? ಕಾಂಗ್ರೆಸ್ಸಿನ ನೇತಾರ ಸಿದ್ಧರಾಮಯ್ಯನವರ ಸುಳ್ಳು ಆರೋಪ

* ಹಿಂದೂಗಳಿಗೆ `ಕೇಸರಿ ಭಯೋತ್ಪಾದಕರು’ ಎಂದು ಹೇಳುವ ಷಡ್ಯಂತ್ರವನ್ನು ರಚಿಸುವ ಕಾಂಗ್ರೆಸ್ಸಿನವರು ಇಂತಹ ಆರೋಪಗಳನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ ? – ಸಂಪಾದಕರು 

* ಮುಸಲ್ಮಾನ ಹುಡುಗಿಯರು ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರದ ಆದೇಶವನ್ನು ಪಾಲಿಸದೇ ಸಂವಿಧಾನದ ಅಪಮಾನ ಮಾಡುತ್ತಿದ್ದಾರೆ, ಈ ಬಗ್ಗೆ ಸಿದ್ಧರಾಮಯ್ಯನವರು ಏಕೆ ಮಾತನಾಡುವುದಿಲ್ಲ ? – ಸಂಪಾದಕರು 

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು (ಕರ್ನಾಟಕ) –ಕರ್ನಾಟಕದ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದು ಪತ್ರಿಕಾ ಪರಿಷತ್ತಿನಲ್ಲಿ `ಶಿಕ್ಷಣವು ಮೂಲಭೂತ ಅಧಿಕಾರವಾಗಿದ್ದು ಯಾರೂ ಶಿಕ್ಷಣದಿಂದ ವಂಚಿತರಾಗಿರಬಾರದು. ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರ ಶೆಕಡಾವಾರು ಈಗಾಗಲೇ ಕಡಿಮೆ ಇದೆ; ಆದರೆ ಇತ್ತೀಚಿನ ಸಮಯದಲ್ಲಿ ಅನೇಕರು ಶಿಕ್ಷಣದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಹಿಜಾಬಿನ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸಿದ ಬಟ್ಟೆಯ) ಅಂಶವನ್ನು ಎತ್ತಿ ಹಿಡಿದು ಮುಸಲ್ಮಾನ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಕುತಂತ್ರವನ್ನು ಸಂಘ ಪರಿವಾರವು ಮಾಡುತ್ತಿದೆ’, ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷರಾದ ಡಿ. ಕೆ. ಶಿವಕುಮಾರರವರೂ ಉಪಸ್ಥಿತರಿದ್ದರು.

ಸಿದ್ಧರಾಮಯ್ಯನವರು ಮುಂದುವರಿದು

1. ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ ಮತ್ತು ಜೈನರ ಧಾರ್ಮಿಕ ಶ್ರದ್ಧೆಗಳ ಮೇಲೆ ಆಧರಿಸಿದ ಅನೇಕ ರೂಢಿಗಳಿವೆ. ಇವು ಅವರ ಮೂಲಭೂತ ಅಧಿಕಾರವಾಗಿದೆ ಮತ್ತು ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು.

2. ನಾನು ಹಿಜಾಬಿನ ವಿವಾದದ ಹಿಂದಿರುವ ಎಲ್ಲ ಸಂಘಟನೆಗಳ, ಅದು ಸಂಘವಿರಲಿ, ಸೋಶಿಯಲ್ ಡೆಮಾಕ್ರೆಟಿಕ ಪಾರ್ಟಿ ಆಫ್ ಇಂಡಿಯಾ ಇರಲಿ ಅಥವಾ ಬಜರಂಗ ದಳವಿರಲಿ, ಅವರ ಭೂಮಿಕೆಯನ್ನು ನಿಷೇಧಿಸುತ್ತೇನೆ. ಎಲ್ಲ ಕಟ್ಟರತೆಯನ್ನು ಸಮರ್ಥಿಸುವ ಸಂಘಟನೆಗಳು ಶಾಂತಿ ಮತ್ತು ಸೌಹಾರ್ದಕ್ಕೆ ಹಾನಿಕಾರಕವಾಗಿವೆ.

3. ವಿದ್ಯಾರ್ಥಿಗಳು ಸಮವಸ್ತ್ರವನ್ನು ವಿರೋಧಿಸಿಲ್ಲ. ಅವರು ಸಮವಸ್ತ್ರದೊಂದಿಗೆ ಹಿಜಾಬನ್ನು ಧರಿಸಿದ್ದಾರೆ ಮತ್ತು ಶಿಕ್ಷಣಕ್ಕಾಗಿ ಅನುಮತಿ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಪರಾಧ ನೋಂದಾಯಿಸುವುದು ತಪ್ಪಾಗಿದೆ.