ದೆಹಲಿಯಲ್ಲಿ ಲಂಚ ಪಡೆಯುತ್ತಿದ್ದ ಆಮ್ ಆದ್ಮಿ ಪಕ್ಷದ ನಗರ ಸೇವಕಿಯ ಬಂಧನ

ಭ್ರಷ್ಟಾಚಾರ ವಿರೋಧಿ ಅಂದೋಲನದ ಸಂದರ್ಭದಲ್ಲಿ ಹುಟ್ಟಿಕೊಂಡ ಪಕ್ಷದ ನಗರ ಸೇವಕರೇ ಲಂಚ ತೆಗೆದುಕೊಳ್ಳುತ್ತಾಳೆ, ಇದರಿಂದ `ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒಂದೇ ಮಾಲೆಯ ಮಣಿಗಳು ಇದೆ’, ಎಂಬುದು ಸ್ಪಷ್ಟವಾಗುತ್ತದೆ !- ಸಂಪಾದಕರು 

(ಎಡದಲ್ಲಿ ) ಆಮ್ ಆದ್ಮಿ ಪಕ್ಷದ ನಗರ ಸೇವಕಿ ಗೀತಾ ರಾವತ್

ನವ ದೆಹಲಿ – ಇಲ್ಲಿಯ ಆಮ್ ಆದ್ಮಿ ಪಕ್ಷದ ನಗರ ಸೇವಕಿ ಗೀತಾ ರಾವತ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಪಟಪಡಗಂಜ್ ನ ವಿನೋದ ನಗರ ವಾರ್ಡ್‍ನಲ್ಲಿ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದೆ. ಲಂಚ ಪಡೆಯುವಾಗ ರೆಡ್ ಹ್ಯಾಂಡ್‍ನಲ್ಲಿ ಹಿಡಿಯಲಾಯಿತು. ಶೇಂಗಾ ಮಾರಾಟ ಮಾಡುವ ವ್ಯಕ್ತಿಯ ಮೂಲಕ ಈ ಹಣ ಗೀತಾ ರಾವತ್ ಅವರ ಕಡೆ ತಲುಪಿಸಲಾಯಿತು. ಸಿಬಿಐ ಕೂಡಾ ಶೇಂಗಾ ಮಾರುವವನನ್ನು ಬಂಧಿಸಲಾಗಿದೆ.