ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಮಹಾವಿದ್ಯಾಲಯವು ಹಿಜಾಬ ತೆಗೆಸಿದ್ದರಿಂದ ಉಪನ್ಯಾಸಕಿಯಿಂದ ರಾಜೀನಾಮೆ

ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿರುವವರು ದೇಶದಿಂದಲೂ ಹೊರಟು ಹೋಗಲಿ, ಎಂದು ಯಾರಾದರೂ ಹೇಳಿದರೆ ಅದಕ್ಕೆ ಆಶ್ಚರ್ಯವೆನಿಲ್ಲ !- ಸಂಪಾದಕರು 

ತುಮಕೂರು – ಕರ್ನಾಟಕ ಉಚ್ಚ ನ್ಯಾಯಲಯವು ಮಧ್ಯಂತರ ತೀರ್ಪು ಬರುವವರೆಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾರೂ ಕೂಡ ಧಾರ್ಮಿಕ ಉಡುಪನ್ನು ಧರಿಸಬಾರದು, ಎಂದು ಆದೇಶ ನೀಡಿದೆ. ಅದನ್ನು ಪಾಲಿಸುತ್ತಾ ಹಿಜಾಬ ತೆಗೆಸಿದ್ದರಿಂದ ತುಮಕೂರಿನ ಜೈನ ಪಿಯೂ ಮಹಾವಿದ್ಯಾಲಯದಲ್ಲಿ ಆಂಗ್ಲ ವಿಷಯದ ಉಪನ್ಯಾಸಕಿ ಚಾಂದನೀಯವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಚಾಂದನೀಯವರು, ಕಳೆದ 3 ವರ್ಷಗಳಿಂದ ನಾನು ಈ ಮಹಾವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ; ಆದರೆ ನನಗೆ ಇದೇ ಮೊದಲ ಬಾರಿ ಹಿಜಾಬ್ ತೆಗೆಯಲು ಹೇಳಲಾಯಿತು. ಈ ಹೊಸ ತೀರ್ಪು ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುವುದಾಗಿದೆ; ಆದ್ದರಿಂದಲೇ ನಾನು ರಾಜೀನಾಮೆ ನೀಡುವ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.