ಸೌದಿ ಅರೇಬಿಯಾ ಸಹಿತ ಅನೇಕ ಇಸ್ಲಾಮಿ ದೇಶಗಳಲ್ಲಿ ಪೂರ್ಣ ಮುಖದ ಬುರ್ಖಾದ ಮೇಲೆ ನಿಷೇಧ ! – ತಸ್ಲೀಮಾ ನಸ್ರೀನ್

ನವ ದೆಹಲಿ – ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಯಾವುದೇ ಧಾರ್ಮಿಕ ಚಿಹ್ನೆ ಉಪಯೋಗಿಸುವುದರಿಂದ ದೂರ ಇಡುವುದು ಒಳ್ಳೆಯದು. ಸುರಕ್ಷೆಯ ಕಾರಣದಿಂದಾಗಿ ಬುರ್ಖಾ ಅಥವಾ ಪೂರ್ಣ ಮುಖಮುಚ್ಚುವ ಬುರ್ಖಾಗೆ ಅನುಮತಿ ನೀಡಬಾರದು. ಅನೇಕ ಇಸ್ಲಾಮಿ ದೇಶಗಳಲ್ಲಿ ಪೂರ್ಣ ಮುಖ ಮುಚ್ಚುವ ಬುರ್ಖಾದ ಮೇಲೆ ನಿಷೇಧ ಹೇರಲಾಗಿದೆ. `ಇಸ್ಲಾಮ್‍ನ ಜನ್ಮಸ್ಥಳವಾಗಿರುವ ಸೌದಿ ಅರೇಬಿಯಾದಲ್ಲಿಯೂ ಸಹ ಮಹಿಳೆಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಆವಶ್ಯಕವಾಗಿಲ್ಲ’, ಎಂದು ಘೋಷಿಸಲಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ ಹೇಳಿದ್ದಾರೆ.